ಕಾಶ್ಮೀರದ ಕದನಸ್ತಂಭನ ರೇಖೆ ದಾಟಲು ಭಾರತ ಸಿದ್ಧ
ನವದೆಹಲಿ, ಮಾ. 18– ಭಾರತದ ರಕ್ಷಣೆಯ ಹಿತದೃಷ್ಟಿಯಿಂದ ಅಗತ್ಯಬಿದ್ದರೆ ಕಾಶ್ಮೀರದಲ್ಲಿ ನಮ್ಮ ಸೇನೆ ಕದನಸ್ತಂಭನ ರೇಖೆ ದಾಟುವುವು ಎಂದು ಪ್ರಧಾನ ಮಂತ್ರಿ ನೆಹ್ರೂ ಇಂದು ಲೋಕ ಸಭೆಯಲ್ಲಿ ಹರ್ಷೋದ್ಗಾರಗಳ ನಡುವೆ ಘೋಷಿಸಿದರು.

ಜಮ್ಮು ಬಳಿ ಮತ್ತೆ ಪಾಕಿಸ್ತಾನಿಗಳ ದಾಳಿ
ನವದೆಹಲಿ, ಮಾ. 18 – ಮಾರ್ಚಿ 17ರ ರಾತ್ರಿ ಪಾಕಿಸ್ತಾನಿ ದಾಳಿಕಾರರು ಜಮ್ಮುಗೆ ಈಶಾನ್ಯ ದಿಕ್ಕಿನಲ್ಲಿನ ಅಕ್ನೂರ್ ಪ್ರದೇಶದಲ್ಲಿ ಮೂರು ಬೇರೆ ಬೇರೆ ಸ್ಥಳಗಳಲ್ಲಿ ನಾಲ್ಕು ಸಲ ದಾಳಿ ನಡೆಸಿದರೆಂದು ಇಂದು ಸಂಜೆ ದೆಹಲಿಗೆ ಬಂದ ವರದಿಗಳು ತಿಳಿಸುತ್ತವೆ.

ಕಮ್ಯಾಂಡರ್ ನಾನಾಮತಿ ಬಿಡುಗಡೆ
ಮುಂಬೈ, ಮಾ. 18 – 1960 ರಲ್ಲಿ ಇಲ್ಲಿನ ವಾಣಿಜ್ಯೋದ್ಯಮಿ ಅಹುಜಾ ಅವರ ಕೊಲೆ ಮಾಡಿದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಭಾರತ ನೌಕಾದಳದ ಕಮ್ಯಾಂಡರ್ ಕೆ. ಎಂ. ನಾನಾವತಿ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀಮತಿ ವಿಜಯಲಕ್ಷ್ಮಿ ಪಂಡಿತರ ಆಜ್ಞೆ ಪ್ರಕಾರ ಇಂದು ಬಿಡುಗಡೆ ಮಾಡಲಾಯಿತು.

ರಾಜ್ಯಪಾಲಿನಿ ಶ್ರೀಮತಿ ಪಂಡಿತ್ ಅವರು ತಮ್ಮ ಆಜ್ಞೆಯಲ್ಲಿ, ‘ನಾನಾವತಿ ಅವರ ಸನ್ನಡತೆ ಹಾಗೂ ಅವರು ನೌಕಾದಳಕ್ಕೆ ಸಲ್ಲಿಸಿರುವ ಸೇವೆಯನ್ನು ಗಮನಿಸಿ ಸಂವಿಧಾನದ 161ನೇ ವಿಧಿ ಪ್ರಕಾರ ಶಿಕ್ಷೆಯನ್ನು ಕಡಿಮೆಗೊಳಿಸಿ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.