ನವದೆಹಲಿ(ಪಿಟಿಐ): ಚಿತ್ರಮಂದಿರಗಳಲ್ಲಿ ಈಗ ಪ್ರದರ್ಶನವಾಗುತ್ತಿರುವ ಮಾಧುರಿ ದೀಕ್ಷಿತ್ ಮತ್ತು ಜೂಹಿ ಚಾವ್ಲಾ ಅಭಿನಯದ ಗುಲಾಬ್ ಗ್ಯಾಂಗ್ ಚಲನಚಿತ್ರಕ್ಕೆ ತಡೆ ನೀಡುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ಹೇಳಿದೆ.

ಚಲನಚಿತ್ರದ ಹೆಸರಿನಿಂದಾಗಿ ನಿರಂತರ ಮಾನಹಾನಿಯಾಗುತ್ತಿದೆ ಎಂಬ ಕಾರಣದಿಂದಾಗಿ ‘ಗುಲಾಬಿ ಗ್ಯಾಂಗ್’ ನಾಯಕಿ ಸಂಪತ್ ಪಾಲ್ , ಕೋರ್ಟ್ ಮೆಟ್ಟಿಲೇರಿದ್ದರಿಂದ ಚಿತ್ರ ನೋಡಲು ಯಾರು ಬರುತ್ತಿಲ್ಲ ಎಂದು ಚಿತ್ರನಿರ್ಮಾಪಕರು ಪೀಠದ ಗಮನಕ್ಕೆ ತಂದಿದ್ದರು.

ನಿರ್ಮಾಪಕರು ಹೇಳುವ ಪ್ರಕಾರ ಚಲನಚಿತ್ರ ಯಶಸ್ವಿ ಪ್ರದರ್ಶನಗೊಳ್ಳುತ್ತಿಲ್ಲ. ಇದರ ಅರ್ಥ ಜನರು ಸಂಪತ್ ಪಾಲ್ ಜೀವನದ ಕಥೆಯ ಚಲನಚಿತ್ರವನ್ನು ವೀಕ್ಷಿಸುತ್ತಿಲ್ಲ. ಆದ್ದರಿಂದ ಚಲನಚಿತ್ರ ಪ್ರದರ್ಶನಕ್ಕೆ ತಡೆ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

‘ನಾನು ಈ ಚಲನಚಿತ್ರವನ್ನು ನೋಡಿದ್ದೇನೆ. ಇದರಲ್ಲಿ ನನ್ನ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಅಳವಡಿಸಲಾಗಿದೆ. ಕೊನೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡುವ ಯತ್ನಕ್ಕೆ ಸಂಬಂಧಿಸಿದಂತೆ ಜೈಲಿಗೆ ಕಳುಹಿಸಲಾಗಿದೆ. ಇದರಿಂದ ನನಗೆ ಅವಮಾನವಾಗಿದೆ. ಆದ್ದರಿಂದ ಚಲನಚಿತ್ರ ಪ್ರದರ್ಶನವನ್ನು ನಿಲ್ಲಿಸಬೇಕು’ ಎಂದು ಪಾಲ್ ವಾದಿಸಿದ್ದಾರೆ.

‘ನಾನು ಹಣಕ್ಕಾಗಿ ಪ್ರಕರಣ ದಾಖಲಿಸಿಲ್ಲ. ಮಹಿಳೆಯರಿಗಾಗಿ ಕಾನೂನು ಮೂಲಕ ಹೋರಾಟ ಮಾಡಿದ್ದೇನೆ. ಆದರೆ, ಚಿತ್ರಕಥೆ ನನಗೆ ಅವಮಾನ ಮಾಡುವಂತೆ ಇದೆ’ ಎಂದು ದೂರಿದರು. ಇದಕ್ಕೆ ಪ್ರತಿಯಾಗಿ ಪೀಠ, ‘ನೀವು ಮಾನನಷ್ಟ ಮೊಕದ್ದಮೆ ದಾಖಲಿಸಬಹುದು’ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿತು.

ಭಾರತೀಯ ಬಂಧನ
ಮಹಿಳೆಯನ್ನು ಹಿಂಬಾಲಿಸಿದ ಆರೋಪದಲ್ಲಿ ಅನಿವಾಸಿ ಭಾರತೀಯನನ್ನು ಸೋಮವಾರ ಇಲ್ಲಿನ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.