ಸೋಮವಾರ, ಮಾರ್ಚ್ 1, 2021
20 °C
ನಾಲ್ಕು ದಿನದಲ್ಲಿ ಆದೇಶ: ಸಚಿವ ಖರ್ಗೆ ಘೋಷಣೆ

ಗುಲ್ಬರ್ಗಕ್ಕೆ ರೈಲ್ವೆ ವಿಭಾಗ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗಕ್ಕೆ ರೈಲ್ವೆ ವಿಭಾಗ

ಗುಲ್ಬರ್ಗ: ಹೈದರಾಬಾದ್‌ ಕರ್ನಾಟಕದ ಜನರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಗುಲ್ಬರ್ಗ ರೈಲ್ವೆ ವಿಭಾಗ ಆರಂಭದ ಕನಸು ನನಸಾಗಲಿದ್ದು, ನಾಲ್ಕು ದಿನ­ಗಳಲ್ಲಿ ಅಧಿಕೃತ ಪ್ರಕಟಣೆ ಹೊರಬೀಳ­ಲಿದೆ ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಶನಿವಾರ ಗುಲ್ಬರ್ಗ ರೈಲು ನಿಲ್ದಾಣ­ದಲ್ಲಿ ಪಿಟ್‌ಲೈನ್‌ಗೆ ಭೂಮಿ­ಪೂಜೆ, ಎಸ್ಕಲೇಟರ್‌ ಹಾಗೂ 4ನೇ ಪ್ಲಾಟ್‌­­ಫಾರಂ ಉದ್ಘಾಟಿಸಿ ಮಾತನಾಡಿದರು.ಅಸ್ಸಾಂನ ಸಿಲ್ಚಾರ್‌, ಜಮ್ಮು–ಕಾಶ್ಮೀರದ ಉಧಮ್‌ಪುರ ಹಾಗೂ ಕರ್ನಾಟಕದ ಗುಲ್ಬರ್ಗದಲ್ಲಿ ಮೂರು ರೈಲ್ವೆ ವಿಭಾಗ ಆರಂಭಿಸುವ ಪ್ರಸ್ತಾವನೆ­ಯನ್ನು ರಾಜ್ಯಸಭೆಯಲ್ಲಿ ಈಗಾಗಲೇ ಮಂಡಿಸಲಾಗಿದೆ. ಪ್ರಧಾನಮಂತ್ರಿ ಮನ­ಮೋಹನ್‌ ಸಿಂಗ್‌ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.ಗುಲ್ಬರ್ಗದಲ್ಲಿ ವಿಭಾಗೀಯ ಆಡಳಿತ ಕಚೇರಿ ಆರಂಭಿಸುವುದಕ್ಕೆ ಪೂರಕ ಬಜೆಟ್‌­­ನಲ್ಲೆ ಈಗಾಗಲೇ ₨ 5 ಕೋಟಿ ಅನುದಾನ ನೀಡಿ, ಅಗತ್ಯ ಭೂಮಿ ಒದಗಿ­­ಸ­ಲಾಗಿದೆ. ಈ ಕಚೇರಿ ಪೂರ್ಣ­ಪ್ರಮಾಣದಲ್ಲಿ ಆರಂಭ­ವಾ­ಗಲು ಕನಿಷ್ಠ ಎರಡು ವರ್ಷ ಬೇಕಾ­ಗು­ತ್ತದೆ. ಹೊಸ ಪ್ರಕಟಣೆಗಳನ್ನು ಹೊರ­ಡಿ­ಸು­ವುದು, ಮಾರ್ಗ ಹಾಗೂ ಉದ್ಯೋಗಿ­ಗಳ ಹಂಚಿಕೆ ಕೆಲಸ ಮುಗಿ­ಸಲು ಸಮಯ ಹಿಡಿಯುತ್ತದೆ ಎಂದರು.ಮುಂಬೈ– ಚೆನ್ನೈ, ಮುಂಬೈ–ಬೆಂಗ­ಳೂರು ಮಧ್ಯೆ ಜೋಡಿ ರೈಲು ಮಾರ್ಗ ಹಾಗೂ ವಿದ್ಯುದೀಕರಣ ಕಾಮಗಾರಿ­ಗಳನ್ನು ಈ ಹಿಂದೆಯೇ ಕೈಗೆತ್ತಿಕೊಳ್ಳ­ಲಾಗಿತ್ತು. 2016ರ ಹೊತ್ತಿಗೆ ಪೂರ್ಣ­ಗೊಳಿ­ಸುವುದಕ್ಕೆ ಅಗತ್ಯ ಅನುದಾನ ಒದಗಿಸಲಾಗಿದೆ. ಇದರಿಂದ ರೈಲು ಪ್ರತಿ ಗಂಟೆಗೆ ಕನಿಷ್ಠ 110 ಕಿ.ಮೀ. ಸಂಚರಿ­ಸಲು ಸಹಾಯವಾಗಲಿದೆ. ಹೀಗಾಗಿ ಪ್ರಯಾಣ ಸಮಯ ಮುಂಬೈ–ಚೆನ್ನೈ ಮಧ್ಯೆ ನಾಲ್ಕೂವರೆ ತಾಸು ಹಾಗೂ ಮುಂಬೈ–ಬೆಂಗಳೂರು ಮಧ್ಯ ಮೂರು­ವರೆ ತಾಸು  ತಗ್ಗಲಿದೆ ಎಂದರು.‘ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಎಲ್ಲ ರೈಲ್ವೆ ಯೋಜನೆಗಳಿಗೆ 9 ತಿಂಗಳ ಹಿಂದೆ ನಾನು ರೈಲ್ವೆ ಸಚಿವ ಸ್ಥಾನ ವಹಿಸಿ­ಕೊಂಡ ನಂತರ ಚುರುಕು ನೀಡಲಾಗಿದೆ. ಮುಂದಿನ 9 ವರ್ಷ ಮಾಡಬಹುದಾ­ದಷ್ಟು ಕೆಲಸ ಮಾಡಿ­ರುವ ತೃಪ್ತಿ ಸಿಕ್ಕಿದೆ. ರೈಲ್ವೆ ವಿಕಾಸ ನಿಗಮದ  ಅಧಿಕಾರಿ­ಗಳು ಕೂಡ ಸಹಕರಿಸುತ್ತಿದ್ದಾರೆ. ಹೀಗಾಗಿ ಮಧ್ಯ ರೈಲ್ವೆ ಹಾಗೂ ದಕ್ಷಿಣ ಮಧ್ಯೆ ರೈಲ್ವೆ ವಿಭಾಗಗಳ ನೌಕರರ ಕ್ಷೇಮಾಭಿ­ವೃದ್ಧಿ ನಿಧಿಗಳಿಗೆ ತಲಾ ₨5 ಲಕ್ಷ ಬಹುಮಾನ ನೀಡಲಾಗುವುದು’ ಎಂದು ಘೋಷಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.