ಗುರುವಾರ , ಮೇ 28, 2020
27 °C

ಗುಲ್ಬರ್ಗಾ:22ಕ್ಕೆ ಎಫ್‌ಕೆಸಿಸಿಐ ಜಿಲ್ಲಾ ಮಟ್ಟದ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ (ಎಫ್‌ಕೆಸಿಸಿಐ) ಆಯೋಜಿಸಿರುವ ಮೂರನೆಯ ರಾಜ್ಯಮಟ್ಟದ ಜಿಲ್ಲಾ ಸಮ್ಮೇಳನ ಜನವರಿ 22 ರಂದು ಗುಲ್ಬರ್ಗಾದಲ್ಲಿ ನಡೆಯಲಿದೆ.

‘ಈ ಹಿಂದಿನ ಜಿಲ್ಲಾ ಮಟ್ಟದ ಸಮ್ಮೇಳನದಲ್ಲಿ ತೆರಿಗೆಗೆ ಸಂಬಂಧಿಸಿದಂತೆ ‘ಎಫ್‌ಕೆಸಿಸಿಐ’ ಸಲ್ಲಿಸಿದ್ದ 9 ಸಲಹೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಗುಲ್ಬರ್ಗಾ ಸಮ್ಮೇಳನದಲ್ಲಿ ಮೂಲಸೌಕರ್ಯ, ವಿದ್ಯುತ್, ಕೈಗಾರಿಕೆ, ಸೇರಿದಂತೆ ಪ್ರಮುಖ ಆರು ಕ್ಷೇತ್ರಗಳ ಕುರಿತು ಚರ್ಚಿಸಲಾಗುವುದು. ಕೈಗಾರಿಕಾ ಸಚಿವ ಮುರುಗೇಶ ಆರ್. ನಿರಾಣಿ, ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎನ್.ಎಸ್ ಶ್ರೀನಿವಾಸಮೂರ್ತಿ ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

~ಉತ್ತರ ಕರ್ನಾಟಕದ ಕೈಗಾರಿಕಾ  ಸಮಸ್ಯೆಗಳ ಕುರಿತು ಸಮ್ಮೇಳನದಲ್ಲಿ ವಿಶೇಷ ಚರ್ಚೆ ನಡೆಸಲಾಗುವುದು’ ಎಂದು ‘ಎಫ್‌ಕೆಸಿಸಿಐ’ ಹೈದ್ರಾಬಾದ್ ಕರ್ನಾಟಕ ಅಧ್ಯಕ್ಷ ಗೋಪಾಲಕೃಷ್ಣ ವಿ. ರಾಗೋಜಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.