ಮೊದಲ ಮಳೆ ಅನುಭವಿಸಿದ ಖುಷಿ ಈಗ ನಿಮ್ಮ ಜತೆಗಿಲ್ಲ. ಜಿಟಿಗುಡುವ ಮಳೆಹನಿಯನ್ನು ತುಸು ಬೇಸರದಿಂದ ಆಸ್ವಾದಿಸುತ್ತಿರುವಾಗಲೇ ನೀವು `ಕೇವ್ ಅಂಡ್ ಡೈನ್' ರೆಸ್ಟೋರಾ ಬಾಗಿಲಿಗೆ ಬಂದು ನಿಂತಿರುತ್ತೀರ.

ಮೈ ಹಾಗೂ ತಲೆ ಮೇಲೆ ಬಿದ್ದ ಹನಿಗಳನ್ನು ಒಮ್ಮೆ ಜಾಡಿಸಿ ತಲೆ ಮೇಲೆತ್ತಿದರೆ ಎದುರಿಗೆ ಕಾಣಿಸುವ ಕಾಡು ಮನುಷ್ಯ ಕೊಂಚ ದಿಗಿಲು ಹುಟ್ಟಿಸುತ್ತಾನೆ. ಆದರೆ, ಆತ ನಿಮ್ಮತ್ತ ಒಂದು ಪರಿಚಿತ ನಗು ಬೀರಿದಾಗ ನಿಮ್ಮೆಲ್ಲ ಆತಂಕ ದೂರಾಗುತ್ತದೆ.

ಕಾಡು ಮನುಷ್ಯನ ವೇಷ ತೊಟ್ಟವರನ್ನು ದಾಟಿ ರೆಸ್ಟೋರಾ ಬಾಗಿಲು ತೆರೆದು ಒಳಕ್ಕೆ ಅಡಿಯಿಟ್ಟ ತಕ್ಷಣ ಅಲ್ಲೊಬ್ಬಳು ಚೆಲುವೆ ಪ್ರತ್ಯಕ್ಷಳಾಗುತ್ತಾಳೆ. ಕುಸುರಿ ಕಲೆಯುಳ್ಳ ಗುಲಾಬಿ ಬಣ್ಣದ ಸೀರೆ ಕುಪ್ಪಸ ಧರಿಸಿ ನಿಂತ ತರುಣಿ ಚಾಂದಿನಿ ತನ್ನ ನಗುವಿನ ಜತೆಗೆ ಜೇನಿನಂತ ಸವಿನುಡಿಯಿಂದ ನಿಮ್ಮನ್ನು ಬರಮಾಡಿಕೊಳ್ಳುತ್ತಾಳೆ.

ಆ ಯುವತಿಯ ಚೆಲುವಿನ ಗುಂಗಿನಿಂದ ಹೊರಬಂದು ಅಲ್ಲಿರುವ ಯಾವುದಾದರೊಂದು ಟೇಬಲ್ ಆಯ್ದುಕೊಂಡು ಕುಳಿತವರಿಗೆ ಏನನ್ನಾದರೂ ತಿನ್ನುವ ಆಸೆ. ಮೆನು ನೋಡಿ, ನಿಮಗೆ ವಿಶೇಷ ಅನಿಸಿದ್ದನ್ನು ಅರ್ಡರ್ ಮಾಡುತ್ತೀರ. ಇನ್ನೇನಿದ್ದರೂ ಕಾಯುವ ಕೆಲಸ. ಊಟಕ್ಕಾಗಿ ಕಾಯುವಾಗ ನಿಮಗೆ ಕಿಂಚಿತ್ತೂ ಬೇಸರವಾಗುವುದಿಲ್ಲ. ಬದಲಿಗೆ ಖುಷಿ. ಅಂಥದ್ದೊಂದು ಖುಷಿ ತಿನಿಸುಗಳಿಗಾಗಿ ಕಾಯುವುದರಲ್ಲಿ ಇದೆಯಾ ಅಂತ ಮನಸ್ಸು ಕೇಳುವುದಿಲ್ಲ. ಮುದನೀಡುವ ವಾತಾರವಣ ಈ ರೆಸ್ಟೋರಾದಲ್ಲಿರುವುದೇ ಅದಕ್ಕೆ ಕಾರಣ.

ಪರಂಪರೆಯ ಸೊಗಡು
ರೆಸ್ಟೋರಾ ವಿನ್ಯಾಸಕ್ಕೂ ತಿನಿಸುಗಳನ್ನು ಆರ್ಡರ್ ಮಾಡುವುದಕ್ಕೂ ಏನು ಸಂಬಂಧ ಅಂತೀರಾ? ಖಂಡಿತಾ ಇದೆ. ಬಸವೇಶ್ವರ ನಗರದಲ್ಲಿರುವ ಕೇವ್ ಅಂಡ್ ಡೈನ್ ಎಲ್ಲ ರೆಸ್ಟೋರೆಂಟ್ಗಳಂತೆ ಮಾಮೂಲಿಯಾಗಿಲ್ಲ.

ಒಳಹೊಕ್ಕಾಗಲೇ ನಿಮಗೆ ಅದರ ಒಳಾಂಗಣ ವಿನ್ಯಾಸದ ಚೆಲುವು ಅರಿವಾಗುವುದು. ಶಿಲಾಯುಗದಲ್ಲಿ ಮನುಷ್ಯ ಗುಹೆಗಳಲ್ಲಿ ವಾಸಮಾಡುತ್ತಿದ್ದ ಎಂದು ಕೇಳ್ದ್ದಿದೇವೆ. ಈ ರೆಸ್ಟೋರೆಂಟ್ ಸಂಪೂರ್ಣ ಶಿಲಾಯುಗದ ಗುಹೆಯಂತೆ ನಿರ್ಮಾಣಗೊಂಡಿದೆ. ಈ ಹೋಟೆಲ್ ಒಳಕ್ಕೆ ಕಾಲಿಟ್ಟ ತಕ್ಷಣ ಬೆಂಗಳೂರಿನಲ್ಲಿ ಇರುವುದೇ ಮರೆತುಹೋಗುತ್ತದೆ.

ಇಲ್ಲಿನ ವಾತಾವರಣ ಶಿಲಾಯುಗಕ್ಕೆ ಕರೆದುಕೊಂಡು ಹೋಗುತ್ತದೆ. ಗುಹಾಲಯದಂತಿರುವ ಈ ಹೋಟೆಲ್ನಲ್ಲಿ ಪರಂಪರೆಯ ಸೊಗಡು ಕಾಣಿಸುತ್ತದೆ. ಪುಟ್ಟ ಪುಟ್ಟ ಗುಹೆಗಳಲ್ಲಿ ಇರುವ ಮೆತ್ತನೆಯ ಕುರ್ಚಿ, ಟೇಬಲ್ ಅವುಗಳ ಮೇಲೆ ಮಂದ ಬೆಳಕು ಬೀರುವ ಲಾಟೀನುಗಳು ಹೊಸತೊಂದು ಅನುಭವ ನೀಡುತ್ತವೆ. ಸಂಪೂರ್ಣ ಗುಹೆಯ ಅನುಭವ ಇಷ್ಟಪಡದವರಿಗಾಗಿ ಕಾರ್ಪೊರೇಟ್ ಡೈನಿಂಗ್ ಹಾಲ್ ಕೂಡ ಇದೆ. ಇಲ್ಲಿ ಹೊರಗಿನ ಅಂದ ಸವಿಯುತ್ತಾ ಊಟದ ರುಚಿ ನೋಡಬಹುದು.

ಇಲ್ಲಿ ಯಾವುದೇ ಥಳುಕು ಬಳುಕಿಲ್ಲ. ಪ್ರಕೃತಿಸಹಜ ಅನುಭವ ನೀಡುವ ಈ ರೆಸ್ಟೋರೆಂಟ್ಗೆ ಎಲ್ಲೆಲ್ಲಿಂದಲೋ ಜನ ಬರುತ್ತಾರೆ. ಮೆತ್ತನೆಯ ಕುರ್ಚಿ ಮೇಲೆ ಕುಳಿತು ಗುಹೆಯ ಸೌಂದರ್ಯವನ್ನು ಸವಿಯುವುದೇ ಖುಷಿ. ಇಲ್ಲಿನ ಆಹಾರಗಳು ಅಷ್ಟೇ, ಪಕ್ಕಾ ಮನೆಯ ರುಚಿ ನೀಡುತ್ತವೆ. ಕೈಗೆಟಕುವ ಬೆಲೆಯಲ್ಲಿ ಸಿಕ್ಕುವ ಸಸ್ಯಾಹಾರ ಮತ್ತು ಮಾಂಸಾಹಾರ ಖಾದ್ಯಗಳ ಬೆಲೆ ಜೇಬಿಗೆ ಭಾರವೆನಿಸುವುದಿಲ್ಲ. ಹಾಗಾಗಿ ನೀವು ಗುಹೆಯ ಕಲೆಯ ಜತೆಗೆ ನಿರ್ಭಿಡೆಯಿಂದ ಊಟದ ರುಚಿಯನ್ನೂ ಆಸ್ವಾದಿಸಬಹುದು.

ಕರಾವಳಿ ಆಹಾರ
ಬಣ್ಣ ಬಣ್ಣದ ದೀಪಗಳು. ಗಾಜಿನ ಬಾಗಿಲು. ವಿಐಪಿ ಲಾಂಜ್. ಮೈಗೆ ಮುತ್ತಿಕ್ಕುವ ಎಸಿಯ ತಣ್ಣನೆಯ ಗಾಳಿ ಅದರೊಳಗೆ ಕುಳಿತರೆ ಹೈಟೆಕ್ ಎನ್ನುವ ಭಾವ. ತಾಸುಗಟ್ಟಲೆ ಕುಳಿತು ಒಂದು ಕಾಫಿ ಕುಡಿದು ಎದ್ದು ಬರುವಾಗ ನಾಲಗೆ ಮೇಲೆ, ಮನದಲ್ಲಿ ಉಳಿಯುವುದು ಕಾಫಿಯ ರುಚಿ ಮಾತ್ರ. ಆದರೆ, ಇಲ್ಲಿ ಹಾಗಲ್ಲ. ಖಾದ್ಯಗಳ ರುಚಿ ಜತೆಗೆ ಅಲ್ಲಿನ ಸುಂದರ ವಾತಾವರಣವೂ ನಿಮ್ಮ ಜತೆಯಾಗುತ್ತದೆ.

ಪದೇಪದೇ ಭೇಟಿ ನೀಡಲು ಪ್ರೇರಣೆ ನೀಡುತ್ತದೆ. ಅಂದಹಾಗೆ, ಇಲ್ಲಿನ ಕರಾವಳಿ ತಿನಿಸುಗಳು ತುಂಬಾ ಫೇಮಸ್ಸು. ಅಂಜಲ್ ಫಿಶ್ ತವಾ ಫ್ರೈ, ಕಾಣೆ ಫಿಶ್, ಅಪ್ಪಂ, ನೀರ್ದೋಸೆ, ಚಿಕನ್ ಸುಕ್ಕಾ ಬಾಯಲ್ಲಿ ನೀರೂರಿಸುತ್ತವೆ. ಕರಾವಳಿ ತಿನಿಸುಗಳ ಜತೆಗೆ ಇಂಡಿಯನ್ ಹಾಗೂ ಚೈನೀಸ್ ಫುಡ್ಗಳನ್ನು ಸವಿಯುವ ಅವಕಾಶ ಇಲ್ಲಿದೆ.

ಸ್ಥಳ: ಕೇವ್ ಅಂಡ್ ಡೈನ್, ನಂ.12, ಕೆಯುಎಚ್ಸಿಎಸ್, 4ನೇ ಹಂತ, 3ನೇ ಬ್ಲಾಕ್, ಬಸವೇಶ್ವರನಗರ. ಟೇಬಲ್ ಕಾಯ್ದಿರಿಸಲು 080 2310 2051.

ಜ್ಯೋತ್ಸ್ನಾ ಪರಿಕಲ್ಪನೆ
ನಮ್ಮ ರೆಸ್ಟೋರೆಂಟ್ ಎಲ್ಲಕ್ಕಿಂತ ಭಿನ್ನವಾಗಿರಬೇಕು ಎಂಬ ಬಯಕೆಗೆ ಸಾಥ್ ನೀಡಿದ್ದು ವಾಸ್ತುಶಿಲ್ಪಿ ಜ್ಯೋತ್ಸ್ನಾ ಶೆಟ್ಟಿ. ಅವರ ಅದ್ಭುತ ಪರಿಕಲ್ಪನೆಯಿಂದಾಗಿ ನಮ್ಮ ರೆಸ್ಟೋರಾ ಚೆಂದದ ವಿನ್ಯಾಸ ಪಡೆದುಕೊಂಡಿತು.

ಎಲ್ಲ ವರ್ಗದವರಿಗೂ ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ರುಚಿ ನೀಡುವುದರ ಜತೆಗೆ ಸುಂದರ ವಾತಾವರಣವನ್ನು ಅವರ ಜತೆಯಾಗಿಸುವುದು ನಮ್ಮ ಉದ್ದೇಶ. ಈಗ ಅವೆರಡನ್ನೂ ನೀಡಿದ ತೃಪ್ತಿ ನಮಗಿದೆ.
-ಬಿ.ಆನಂದರಾಮ್ ಶೆಟ್ಟಿ, ರೆಸ್ಟೋರೆಂಟ್ ನಿರ್ದೇಶಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.