ಶುಕ್ರವಾರ, ಜೂನ್ 25, 2021
30 °C

ಗೂಗಲ್‌ ‘ಸಿಬಿಒ’ ನಿಕೇಶ್‌ಗೆ ರೂ. 21ಕೋಟಿ ಬೋನಸ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌(ಪಿಟಿಐ): ‘ಗೂಗಲ್‌’ ನಲ್ಲಿ ಮುಖ್ಯ ವಾಣಿಜ್ಯ ಅಧಿಕಾರಿ ಮತ್ತು ಹಿರಿಯ ಉಪಾಧ್ಯಕ್ಷರೂ ಆಗಿರುವ ಭಾರತ ಮೂಲದ ನಿಕೇಶ್‌ ಅರೋರಾ, 2013ನೇ ಹಣಕಾಸು ವರ್ಷದಲ್ಲಿ ತೋರಿದ ಸಾಧನೆಗಾಗಿ ಕಂಪೆನಿಯಿಂದ 35 ಲಕ್ಷ ಡಾಲರ್ (ರೂ. 21.70 ಕೋಟಿ) ಬೋನಸ್‌ ಪಡೆಯುತ್ತಿದ್ದಾರೆ!ಅಚ್ಚರಿ ಎಂದರೆ, ಗೂಗಲ್‌ ‘ಸಿಇಒ’ ಲ್ಯಾರಿ ಪೇಜ್‌ ಮತ್ತು ಕಂಪೆನಿ ಸಹ ಸಂಸ್ಥಾ ಪಕ ಸರ್ಗಿ ಬ್ರಿನ್‌ ಅವರಿಗೇ ಈ ಬಾರಿ ಯಾವುದೇ ಬೋನಸ್‌ ದೊರೆ ಯುತ್ತಿಲ್ಲ.ವಾರಾಣಸಿಯಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮತ್ತು ಈಶಾನ್ಯ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ನಿಕೇಶ್‌, ಹಿಂದಿನ ವರ್ಷವೂ ಉತ್ತಮ ಸಾಧನೆ ತೋರಿದ್ದಕ್ಕಾಗಿ ಗೂಗಲ್‌ನಲ್ಲಿ 28 ಲಕ್ಷ ಬೋನಸ್‌ ಪಡೆದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.