ಶುಕ್ರವಾರ, ಮೇ 14, 2021
21 °C

ಗೂಗಲ್ ಸಂಸ್ಕೃತಿ ಹೆಚ್ಚಳ: ಮಧ್ಯಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೂಗಲ್ ಸಂಸ್ಕೃತಿ ಹೆಚ್ಚಳ: ಮಧ್ಯಸ್ಥ

ಉಡುಪಿ: `ಪ್ರಸ್ತುತ ನಮ್ಮಲ್ಲಿ ಸೃಜನಶೀಲತೆ ಕಡಿಮೆಯಾಗುತ್ತಿದೆ, ಗೂಗಲ್ ಸಂಸ್ಕೃತಿ ಹೆಚ್ಚುತ್ತಿದೆ~ ಎಂದು ಪರಿಸರ ತಜ್ಞ ಡಾ.ಎನ್.ಎ.ಮಧ್ಯಸ್ಥ ಇಲ್ಲಿ ವಿಷಾದ ವ್ಯಕ್ತ ಪಡಿಸಿದರು.ಉಡುಪಿಯ ಅಕಲಂಕ ಪ್ರತಿಷ್ಠಾನದ ವತಿಯಿಂದ ಎಂಜಿಎಂನಲ್ಲಿ ಭಾನುವಾರ ಆಯೋಜಿಸಿದ್ದ `ಅಕಲಂಕ ಪುಸ್ತಕ ಪುರಸ್ಕಾರ~ ವಿಜೇತ `ಹೂವು ಮತ್ತು ಆರೋಗ್ಯ~ ಕೃತಿ ಪರಿಚಯ ಮಾಡಿದರು.`ಈ ಎಲ್ಲ ಬೆಳವಣಿಗೆಯ ಒಟ್ಟಾರೆ ಪರಿಣಾಮ ಪುಸ್ತಕ ಬರೆಯುವವರಿಗೆ ಹಿನ್ನಡೆಯಾಗಿದೆ. ಪುಸ್ತಕ ಓದುವವ ಮಾತ್ರವೇ ಕೊಂಡುಕೊಳ್ಳುವ ಸಂಸ್ಕೃತಿಯಿಂದಾಗಿ ಪುಸ್ತಕ ಬರೆಯವುದಕ್ಕೂ ಹಿಂಜರಿಕೆಯಾಗಿದೆ~ ಎಂದು ಅವರು ವಿಶ್ಲೇಷಿಸಿದರು.`ದೆಹಲಿ ಕನ್ನಡಿಗ~ ಪತ್ರಿಕೆಯ ಸಂಪಾದಕ ಬಾ.ಸಾಮಾಗ ಮಾತನಾಡಿ, `ಜನರ ಬದುಕಿಗೆ ಹತ್ತಿರವಾಗುವ ಕೃತಿಗಳಿಗೆ ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಆರೋಗ್ಯ ಮತ್ತು ಅಡುಗೆ ಪುಸ್ತಕಗಳಿಗೆ ಬೇಡಿಕೆ ಹೆಚ್ಚು. ಸಾಹಿತ್ಯ ಕೃತಿಗಳು ಜನರಿಗೆ ಹತ್ತಿರವಾಗುವುದರ ಜತೆಗೆ ಕೃತಿಕಾರರಿಗೆ ಲಾಭ ತರಬೇಕು ಎಂದರು.`ಅನುವಾದಿತ ಕೃತಿಗಳಿಂದ ಭಾಷೆ ಮತ್ತು ಸಾಹಿತ್ಯ ವಿಶ್ವಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ~ ಎಂದು ಅವರು ಅಭಿಪ್ರಾಯಪಟ್ಟರು.ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷ ಅಂಬಾತನಯ ಮುದ್ರಾಡಿ ಮಾತನಾಡಿ, `ಪ್ರಸ್ತುತ ಸಾಹಿತ್ಯ ನಮ್ಮ ಅರಿವಿನ ಎಲ್ಲ ಮಗ್ಗಲುಗಳಲ್ಲಿ ತೆರೆದುಕೊಂಡಿದೆ, ವಿಜ್ಞಾನ, ವೈದ್ಯಕೀಯ, ಭೂಗೋಲಗಳೆಲ್ಲ ಸಾಹಿತ್ಯವಾಗಿವೆ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಡಾ.ಉಪ್ಪಂಗಳ ರಾಮಭಟ್ಟ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಡಾ.ವಸುಂಧರಾ ಭೂಪತಿ, ವಕೀಲ ಭೂಪತಿ, ಉದ್ಯಮಿ ರಬೀಂದ್ರನಾಯಕ್, ಪ್ರಾಧ್ಯಾಪಕ ಡಾ.ಡಿ.ಆರ್.ಪಾಂಡುರಂಗ ಮತ್ತಿತರರು  ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.