ಮುಂಬೈ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಲ್ಪಾವಧಿ ಬಡ್ಡಿ ದರವನ್ನು (ರೆಪೊ) ಶೇ 0.50ರಷ್ಟು ತಗ್ಗಿಸಿ ಅಚ್ಚರಿ ಮೂಡಿಸಿದ್ದು, ಇದರಿಂದಾಗಿ ಬ್ಯಾಂಕ್ ಬಡ್ಡಿ ದರಗಳ ಹೊರೆ ಕಡಿಮೆಯಾಗಿ ಕುಂಟುತ್ತ ಸಾಗಿರುವ ಆರ್ಥಿಕ ಬೆಳವಣಿಗೆಗೆ ಚೇತರಿಕೆಯೂ ದೊರೆಯಲಿದೆ.

ವಾಣಿಜ್ಯ ಬ್ಯಾಂಕ್ಗಳಿಗೆ `ಆರ್ಬಿಐ~ ನೀಡುವ ಅಲ್ಪಾವಧಿ ಸಾಲಗಳ ಮೇಲೆ ವಿಧಿಸುವ ಬಡ್ಡಿ ದರ (ರೆಪೊ ದರ) ಶೇ 8.50ರಿಂದ ಶೇ 8ಕ್ಕೆ ಇಳಿದಿರುವುದರಿಂದ ಗೃಹ ಸಾಲಕ್ಕೆ ಸಂಬಂಧಿಸಿದ ಬದಲಾಗುವ ಬಡ್ಡಿ ದರಗಳು ಅಗ್ಗವಾಗಲಿವೆ. ಜತೆಗೆ ಮಾಸಿಕ ಸಮಾನ ಕಂತುಗಳು (ಇಎಂಐ) ಕೂಡ ಕಡಿಮೆ ಆಗಲಿವೆ.

ಗೃಹ, ವಾಹನ, ವೈಯಕ್ತಿಕ ಮತ್ತು ಕಾರ್ಪೊರೇಟ್ ಸಾಲಗಳು ಗಮನಾರ್ಹವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ. ಆದರೆ, ಠೇವಣಿದಾರರ ಪಾಲಿಗೆ ಮಾತ್ರ ಇದೊಂದು ಕಹಿ ಸುದ್ದಿ. ಬ್ಯಾಂಕ್ಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನೂ ಇಳಿಸುವ ಸಾಧ್ಯತೆ ಇದೆ.

ದಂಡ ಬೇಡ: ಬದಲಾಗುವ ಬಡ್ಡಿ ದರ ವ್ಯವಸ್ಥೆಯಲ್ಲಿ ತೆಗೆದುಕೊಂಡ ಗೃಹ ನಿರ್ಮಾಣ ಸಾಲದ ಪೂರ್ವ ಪಾವತಿಯ ಮೇಲೆ ಯಾವುದೇ ದಂಡ ವಿಧಿಸಬಾರದು. ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಇರಬೇಕೆಂದು ಗ್ರಾಹಕರಿಗೆ ಒತ್ತಾಯಿಸಬಾರದು ಎಂದೂ `ಆರ್ಬಿಐ~ ಎಲ್ಲ ಬ್ಯಾಂಕುಗಳಿಗೆ ಸೂಚನೆ ನೀಡಿದೆ.

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಮತ್ತು ಐಸಿಐಸಿಐ ಬ್ಯಾಂಕ್ ಬಡ್ಡಿ ದರ ಇಳಿಸುವ ಬಗ್ಗೆ ತಕ್ಷಣ ಇಂಗಿತ ವ್ಯಕ್ತಪಡಿಸಿದ್ದು, ಇತರ ಬ್ಯಾಂಕ್ಗಳೂ ಈ ನೀತಿ ಅನುಸರಿಸುವ ಸಾಧ್ಯತೆಗಳಿವೆ.

ಬೆಲೆ ಹೆಚ್ಚಳಕ್ಕೆ ಸಲಹೆ:  ವಿತ್ತೀಯ ಕೊರತೆ ತಗ್ಗಿಸಲು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿಸುವುದು ಅನಿವಾರ್ಯ. ತೈಲ ಸಬ್ಸಿಡಿಗಾಗಿ ಗರಿಷ್ಠ ಮೊತ್ತದ ಹಣ ವ್ಯಯಿಸಲಾಗುತ್ತಿದೆ. ಇದರಿಂದ ಸರ್ಕಾರ ಡೀಸೆಲ್, ಸೀಮೆಎಣ್ಣೆ ಮತ್ತು ಅಡುಗೆ ಅನಿಲದ ಬೆಲೆ ಹೆಚ್ಚಿಸಲು ಮುಂದಾಗಬೇಕು ಎಂದು `ಆರ್ಬಿಐ~ ಸಲಹೆ ಮಾಡಿದೆ.

ವಾರ್ಷಿಕ ಉದರಿ ನೀತಿ: `ಆರ್ಬಿಐ~ ಗವರ್ನರ್ ಡಿ. ಸುಬ್ಬರಾವ್ ಅವರು ಮಂಗಳವಾರ ಇಲ್ಲಿ ಪ್ರಕಟಿಸಿದ 2012-13ನೇ ಹಣಕಾಸು ವರ್ಷದ ವಾರ್ಷಿಕ ಸಾಲ ನೀತಿಯಲ್ಲಿ, ಶೇ 4.75ರಷ್ಟಿದ್ದ ನಗದು ಮೀಸಲು ಅನುಪಾತದಲ್ಲಿ (ಸಿಆರ್ಆರ್) ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ.

ಬ್ಯಾಂಕ್ ದರ ಶೇ 9.5ರಿಂದ ಶೇ 9ಕ್ಕೆ ಇಳಿಕೆಯಾಗಲಿದೆ. ದೇಶದ ಆರ್ಥಿಕ ವೃದ್ಧಿ ದರವು 2012-13ನೇ ಸಾಲಿನ ಹಣಕಾಸು ವರ್ಷದಲ್ಲಿ ಶೇ 7.3ರಷ್ಟು ಇರಲಿದೆ ಎಂದು ಅಂದಾಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.