ಎಂಜಿನಿಯರಿಂಗ್ ಪದವಿಗಳಿಗೆ ಪ್ರವೇಶ ಕಲ್ಪಿಸುವ 2012ನೇ ಸಾಲಿನ ಗೇಟ್ (ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್) ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ.

ಅರ್ಹ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಸಂಸ್ಥೆ ಮತ್ತು ವಿಭಾಗಗಳಿಗೆ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಗೇಟ್ ನಂತರದ ಪ್ರವೇಶ ಪ್ರಕ್ರಿಯೆಯ ಕುರಿತು ಗೇಟ್ ಫೋರಂ ಮಾರ್ಚ್ 20 ರಿಂದ 22ರ ವರೆಗೆ ಲೈವ್ ಸೆಷನ್ ನಡೆಸಲಿದೆ.

ಇದಕ್ಕಾಗಿ ವಿದ್ಯಾರ್ಥಿಗಳು www.gateforum.com ವೆಬ್ತಾಣಕ್ಕೆ ಉಚಿತವಾಗಿ ನೋಂದಣಿ ಮಾಡಿಕೊಂಡು ಲೈವ್ ಸೆಷನ್ನ ಪ್ರಯೋಜನ ಪಡೆಯಬಹುದು ಎಂದು ಗೇಟ್ಫೋರಂ ನಿರ್ದೇಶಕ ಆದಿತ್ಯ ರೆಡ್ಡಿ ತಿಳಿಸಿದ್ದಾರೆ.

ಈ ಬಾರಿ ಗೇಟ್ಫೋರಂ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಬೆಂಗಳೂರಿನ ಶ್ರೀಕರ ಪಿ. ಸಿವಿಲ್ ಎಂಜಿನಿಯರಿಂಗ್ನಲ್ಲಿ ರಾಷ್ಟ್ರಮಟ್ಟದಲ್ಲಿ 44ನೇ ರ್ಯಾಂಕ್, ಅನಿಕೇತ್ ಸಿಂಗ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ಸ್ ವಿಭಾಗದಲ್ಲಿ 2ನೇ ರ್ಯಾಂಕ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸುಪ್ರವತ್ ಘೋಷಾಲ್ 3ನೇ ರ್ಯಾಂಕ್ ಪಡೆದಿದ್ದಾರೆ.

ಪ್ರಸಕ್ತ ಸಾಲಿನ ಗೇಟ್ ಪರೀಕ್ಷೆಗೆ 6.85 ಲಕ್ಷ ವಿದ್ಯಾರ್ಥಿಗಳು ಹಾಜರಾಗ್ದ್ದಿದರು. ಕಳೆದ ವರ್ಷ ಈ ಸಂಖ್ಯೆ 5.58 ಲಕ್ಷ. ಈ ಪರೀಕ್ಷೆ ಭಾರತದ ಅತಿ ದೊಡ್ಡ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು. ಬಿಎಚ್ಇಎಲ್, ಎನ್ಟಿಪಿಸಿ ಮತ್ತು ಐಒಸಿಎಲ್ನಂಥ ಸಾರ್ವಜನಿಕ ವಲಯಗಳು ತಮ್ಮ ಸಂದರ್ಶನದಲ್ಲಿ ಗೇಟ್ ಉತ್ತೀರ್ಣರಾದವರಿಗೆ ಮನ್ನಣೆ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.