ಬದಿಯಡ್ಕ (ಕಾಸರಗೋಡು ಜಿಲ್ಲೆ): ಗೋಡಂಬಿಗೆ ಸದ್ಯ ದಾಖಲೆ ಪ್ರಮಾಣದಲ್ಲಿ ಧಾರಣೆ ಹೆಚ್ಚಿದ್ದು, ಗೇರುಬೀಜ (ಸಿಪ್ಪೆ ಸಹಿತ) ಕೆ.ಜಿ.ಗೆ ರೂ 80ರಿಂದ ರೂ 85ರ ಬೆಲೆ ದೊರಕಿದೆ. ಕಳೆದ ವರ್ಷ ಕೆ.ಜಿ.ಗೆ ರೂ 45 ಇತ್ತು. ಬದಿಯಡ್ಕ ವ್ಯಾಪ್ತಿಯಲ್ಲಿ ಗೇರು ಮರಗಳನ್ನು ಸಾಮೂಹಿಕವಾಗಿ ಕಡಿದು, ರಬ್ಬರ್ ಕೃಷಿ ಆರಂಭಿಸಿದ ಬೆನ್ನಲ್ಲೇ ಗೋಡಂಬಿ ಇಳುವರಿ ಕುಸಿದಿದೆ. ಪರಿಣಾಮ ಧಾರಣೆಯೂ ಹೆಚ್ಚಿದೆ. ಮರಗಳ ಮಾರಣಹೋಮ ಕಾರಣ ಇಳುವರಿ ಕಡಿಮೆಯಾಗಿದೆ. ಅಡೂರು, ಬದಿಯಡ್ಕ, ಪೆರ್ಲದಲ್ಲಿ ಗೋಡಂಬಿ ಆಧುನಿಕ ಕೃಷಿ ಪದ್ಧತಿ ಪ್ರಭಾವದಿಂದ ಅಸ್ತಿತ್ವನಾಶ ಭೀತಿ ಎದುರಿಸುತ್ತಿದೆ. ಪಡ್ರೆ, ಬೆಳ್ಳೂರು, ಕುಂಬ್ಡಾಜೆ ಸುತ್ತಲ ಎಂಡೋಸಲ್ಫಾನ್ ಪೀಡಿತ ಪ್ರದೇಶಗಳಲ್ಲಿ ಬಹಳಷ್ಟು ಗೇರು ಮರ ಕಡಿದು ರಬ್ಬರ್ ಕೃಷಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.