ಗೋಣಿಕೊಪ್ಪಲು: ಇಲ್ಲಿನ ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಜೇಶ್, ಉಪಾಧ್ಯಕ್ಷರಾಗಿ ಬೋಜಮ್ಮ ಆಯ್ಕೆಯಾದರು.ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಜೇಶ್, ಸಾಮಾನ್ಯ ವರ್ಗ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬೋಜಮ್ಮ ನಾಮಪತ್ರ ಸಲ್ಲಿಸಿದ್ದರು. ಅವರಿಗೆ ವಿರುದ್ಧವಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ರಮಾವತಿ ಹಾಗೂ ಸಿ.ಎ.ಸೌಮ್ಯ ಸ್ಪರ್ಧಿಸಿದ್ದರು.

ಬಳಿಕ ನಡೆದ ಮತದಾನದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ರಾಜೇಶ್ ಅಧ್ಯಕ್ಷರಾಗಿ ಬೋಜಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಇಬ್ಬರೂ ತಲಾ 10 ಮತಗಳನ್ನು ಪಡೆದರೆ ಪರಾಜಿತ ಕಾಂಗ್ರೆಸ್ನ ರಮಾವತಿ ಹಾಗೂ ಸೌಮ್ಯ ತಲಾ 9 ಮತಗಳನ್ನು ಪಡೆದರು.19 ಸದಸ್ಯ ಬಲದ ಗ್ರಾ.ಪಂ.ಯಲ್ಲಿ 10 ಬಿಜೆಪಿ ಹಾಗೂ 9 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಕೇವಲ ಒಂದು ಮತದ ಅಂತರಿಂದ ಅಧಿಕಾರವನ್ನು ತಾವು ಹಿಡಿಯಬೇಕು ಎಂಬ ಛಲದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದವು. ಆದರೆ ಈ ಮೊದಲೆ ನಿರ್ಧಾರಗೊಂಡಂತೆ ಗ್ರಾ.ಪಂ.ಅಧಿಕಾರ ಇದೇ ಮೊದಲ ಬಾರಿಗೆ ಬಿಜೆಪಿ ಪಾಲಾಯಿತು.

ಬಳಿಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪುಲಿಯಂಡ ಬೋಪಣ್ಣ, ಸ್ಥಾನೀಯ ಸಮಿತಿ ಅಧ್ಯಕ್ಷ ಕಬ್ಬಚ್ಚಿರ ಪ್ರಭು, ಮುಖಂಡರಾದ ಗಿರೀಶ್ ಗಣಪತಿ, ವಿ.ಎ.ವೆಂಕಟೇಶ್, ಚೆಪ್ಪುಡೀರ ಮಾಚಯ್ಯ, ಲೋಕೇಶ್, ಸುಮಿ ಸುಬ್ಬಯ್ಯ, ಪ್ರಭಾಕರ್ ನೆಲ್ಲಿತ್ತಾಯ, ಗೋಪಿ ಚಿಣ್ಣಪ್ಪ, ಅಡ್ಡಂಡ ಕಾರ್ಯಪ್ಪ, ಕಬೀರ್ದಾಸ್ ಹಾಜರಿದ್ದರು. ತಹಶೀಲ್ದಾರ್ ಹನುಮಂತರಾಯಪ್ಪ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.