ಶುಕ್ರವಾರ, ಮೇ 20, 2022
21 °C

ಗೋದ್ರೇಜ್ ನೇಚರ್ಸ್‌ ಬಾಸ್ಕೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಪ್ರಿಯ ಬ್ರಾಂಡ್ ಗೋದ್ರೇಜ್ ಈಗ ಆಹಾರ ಮಳಿಗೆ ಕ್ಷೇತ್ರಕ್ಕೂ ಕಾಲಿಟ್ಟಿದೆ. ಬೆಂಗಳೂರಿನಲ್ಲಿ ಅದರ ಮೊದಲ `ಗೋದ್ರೇಜ್ ನೇಚರ್ಸ್‌ ಬಾಸ್ಕೆಟ್~ ಇಂದಿರಾ ನಗರ ಸಿಎಂಎಚ್ ರಸ್ತೆಯಲ್ಲಿ ಆರಂಭವಾಗಿದೆ.ಅಂತರ‌್ರಾಷ್ಟ್ರೀಯ ಬ್ರಾಂಡೆಡ್ ಆಹಾರ ಪದಾರ್ಥಗಳು, ವಿಶ್ವದ ನಾನಾ ಭಾಗಗಳ ತಾಜಾ ಹಾಗೂ ಪ್ಯಾಕೇಜ್ಡ್ ಶುಚಿ ರುಚಿ ಆಹಾರ ಹಾಗೂ ಪಾನೀಯಗಳು ಇಲ್ಲಿ ಲಭ್ಯ. ಹೀಗಾಗಿ ಒಂದೇ ಸೂರಿನಲ್ಲಿ ವಿವಿಧ ದೇಶಗಳ ಖಾದ್ಯ ತಯಾರಿಕೆಗೆ ಬೇಕಾದ ಸಾಮಗ್ರಿಯನ್ನು ಕೊಳ್ಳಬಹುದು.ಇದರ ಜತೆಗೇ ಪ್ರಮುಖ ಷೆಫ್‌ಗಳಿಂದ ಪಾಕ ಪದ್ಧತಿಗಳ ನಿರಂತರ ಪ್ರಾತ್ಯಕ್ಷಿಕೆ, ಆಹಾರ ಉತ್ಸವಗಳು, ಫುಡ್ ಲೈಬ್ರರಿ ಸೇವೆ, ಕಸ್ಟಮೈಸ್ಡ್ ಗಿಫ್ಟ್ ಹ್ಯಾಂಪರ್‌ಗಳು, ಪಾರ್ಟಿಗಳಿಗಾಗಿ ಚೀಸ್ ಮತ್ತು ಕೋಲ್ಡ್ ಕಟ್ ಪ್ಲಾಟರ್‌ಗಳು, ಆಹಾರ ಮತ್ತು ವೈನ್ ಬಳಕೆಯ ಸಲಹಾ ಸೇವೆಗಳೂ ಇಲ್ಲಿ ದೊರೆಯಲಿವೆ.ತಾಜಾ ಹಣ್ಣು ಮತ್ತು ತರಕಾರಿ, ಗಿಡಮೂಲಿಕೆಗಳು, ಆಮದು ಹಣ್ಣುಗಳು, ಚೀಸ್, ಮಸಾಲೆ ಪದಾರ್ಥಗಳು ಕಾಂಡಿಮೆಂಟ್ಸ್, ತಾಜಾ ಬ್ರೆಡ್ ಮತ್ತು ಪ್ಯಾಟಿಸ್, ಪ್ರಮಾಣೀಕೃತ ಜೈವಿಕ ಆಹಾರೋತ್ಪನ್ನಗಳು ಇಲ್ಲಿ ದೊರೆಯುತ್ತವೆ. ಅಂತರ‌್ರಾಷ್ಟ್ರೀಯ ಶೈಲಿಯ ಆಹಾರ ಇಷ್ಟಪಡುವವರಿಗೆ ಬೇಕಾದ್ದೆಲ್ಲ ಇಲ್ಲಿರುತ್ತದೆ ಎನ್ನುತ್ತಾರೆ ಗೋದ್ರೇಜ್ ನೇಚರ್ಸ್‌ ಬಾಸ್ಕೆಟ್ ಎಂಡಿ ಮೋಹಿತ್ ಖಟ್ಟರ್.  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.