ಶನಿವಾರ, ಏಪ್ರಿಲ್ 17, 2021
30 °C

ಗೋವಿನಹಾಳ್: ಪೋಸ್ಟ್ ಮಾಸ್ಟರ್ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲೇಬೆನ್ನೂರು: ಪಿಂಚಣಿದಾರರಿಗೆ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮೀಪದ ಗೋವಿನಹಾಳು ಗ್ರಾಮದ  ಪೋಸ್ಟ್ ಮಾಸ್ಟರ್ ನಾಗಪ್ಪ ಅಮಾನತುಗೊಂಡಿದ್ದಾರೆ.ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿ ಮನಿ ಆರ್ಡರ್ ಹಣ ದುರುಪಯೋಗದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ವರದಿ ಆಧರಿಸಿ ಕ್ರಮ ಜರುಗಿಸಲಾಗಿದೆ. 12 ಸಾವಿರ ರೂಪಾಯಿ ಕಟ್ಟುವುದಾಗಿ ತಿಳಿಸಿದ ಪೋಸ್ಟ್ ಮಾಸ್ಟರ್ ಅಮಾನತು ಹಿಂದಕ್ಕೆ ಪಡೆಯುವಂತೆ ಕೈಕಾಲು ಹಿಡಿದರು. ವಿಚಾರಣೆ ಮುಂದುವರಿದಿದೆ ಎಂದು ಗೊತ್ತಾಗಿದೆ.ಹಿಂಡಸಗಟ್ಟೆ ಗ್ರಾಮದ 100ಕ್ಕೂ ಹೆಚ್ಚು ಪಿಂಚಣಿದಾರರಿಗೆ ಅಂಚೆ ನಿರೀಕ್ಷಕರು ಹಾಗೂ ಸಿಬ್ಬಂದಿ ಗುರುವಾರ ಹಣ ವಿತರಣೆ ಮಾಡಿದರು ಎಂದು ಗ್ರಾಮಸ್ಥರು ತಿಳಿಸಿದರು. 

ಅಂಚೆ ಇಲಾಖೆ ಕ್ರಮಕ್ಕೆ ಪಿಂಚಣಿದಾರರು ಪ್ರಶಂಸೆ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.