ಹರದನಹಳ್ಳಿಯಿಂದ ನವದೆಹಲಿಯ ಸಿಂಹಾಸನದವರೆಗಿನ, ಮಣ್ಣಿನಮಗ, ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ಪಯಣ ಸುದೀರ್ಘವೂ ರೋಚಕವೂ ಆಗಿದೆ.

ಅವರು ಅನೇಕ ಅಂತಿಮ ‘ಮಾಡು ಮಡಿ’ಯ ರಾಜಕೀಯ ಹೋರಾಟಗಳನ್ನು ಮಾಡಿದ್ದರೂ ಅವರಿಗೆ ದಣಿವು ‘ವಿಶ್ರಾಂತಿ’ ಎಂಬುದಿಲ್ಲ! ಜೆಡಿಎಸ್ ‘ಕುಟುಂಬ ಪಕ್ಷ’ ಎಂಬ ಟೀಕೆಯನ್ನು ಅವರು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ.

ಈ ಪಕ್ಷವನ್ನು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರುವವರೆಗೆ (ಅರ್ಥಾತ್ ಪುತ್ರ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುವವರೆಗೆ) ರಾಜಕೀಯದಲ್ಲಿದ್ದು ಹೋರಾಟ ಮಾಡುವ ಶಪಥವನ್ನು ದೊಡ್ಡಗೌಡರು ತೊಟ್ಟಿದ್ದಾರೆ.

ತಮಗೆ ಯಾವುದೇ ಅಧಿಕಾರದ ಆಸೆ ಇಲ್ಲವೆಂದು ಪದೇ ಪದೇ ಹೇಳುವ ಗೌಡರು ‘ತೃತೀಯ ರಂಗ’ ಎಂಬ ಮರೀಚಿಕೆಯ ಬೆನ್ನು ಹತ್ತಿರುವ ‘ಲಘು ತೂಕದ’ ನಾಯಕರ ವೇದಿಕೆಯಲ್ಲಿ ಕಾಣಿಸಿಕೊಂಡು ತಮ್ಮ ಹವಣಿಕೆಗಳಿಗೆ ಭರವಸೆಯ ನೀರೆರೆಯುತ್ತಿದ್ದಾರೆ.
‘ಹುಣಿಸೆ ಮುಪ್ಪಾದರೂ ಹುಳಿ ಮುಪ್ಪಲ್ಲ’ ಎಂಬ ಗಾದೆ ಗೌಡರ ವಿಷಯದಲ್ಲಿ ಸಾರ್ವಕಾಲಿಕ ಸತ್ಯ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.