ಗ್ರಾ.ಪಂ. ಚುನಾವಣೆ: ಶೇ 65.89 ಮತದಾನ

ಸೋಮವಾರ, ಮೇ 27, 2019
27 °C

ಗ್ರಾ.ಪಂ. ಚುನಾವಣೆ: ಶೇ 65.89 ಮತದಾನ

Published:
Updated:

ಕಾರವಾರ: ಜಿಲ್ಲೆಯಲ್ಲಿ ತೆರವಾಗಿದ್ದ 21 ಗ್ರಾಮ ಪಂಚಾಯಿತಿಯ 22 ಸದಸ್ಯ ಸ್ಥಾನದ ಪೈಕಿ 21 ಸ್ಥಾನಕ್ಕೆ ಭಾನುವಾರ ನಡೆದ ಮತದಾನ ಸಂಪೂರ್ಣ ಶಾಂತಿಯುತವಾಗಿತ್ತು. ಜಿಲ್ಲೆಯಾದ್ಯಂತ ಶೇ 65.89ರಷ್ಟು ಮತದಾನವಾಗಿದೆ.21 ಗ್ರಾಮ ಪಂಚಾಯಿತಿಗಳ ಪೈಕಿ ಹೊನ್ನಾವರ-2, ಶಿರಸಿ-1, ಮುಂಡಗೋಡ-1 ಮತ್ತು ಹಳಿಯಾಳ ಎರಡು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಕಾರವಾರ ತಾಲ್ಲೂಕಿನ ಕಿನ್ನರ ಗ್ರಾ.ಪಂ. ಸದಸ್ಯ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.ಕಾರವಾರ-1, ಅಂಕೋಲಾ-1, ಕುಮಟಾ-2, ಹೊನ್ನಾವರ-5, ಶಿರಸಿ-3, ಸಿದ್ದಾಪುರ-1 ಹಳಿಯಾಳ-1 ಸ್ಥಾನಕ್ಕೆ ಚುನಾವಣೆ ನಡೆಯಿತು.ಶಿರಸಿ ತಾಲ್ಲೂಕಿನ ಬಿಸಿಲಕೊಪ್ಪ ಪಂಚಾಯಿತಿ ಅತಿಹೆಚ್ಚು ಅಂದರೆ ಶೇ 82.39ರಷ್ಟು ಮತ್ತು ಗೋಕರ್ಣ ಪಂಚಾಯಿತಿಯಲ್ಲಿ ಅತಿಕಡಿಮೆ ಅಂದರೆ ಶೇ 38.24 ರಷ್ಟು ಮತದಾನವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry