ಭಾನುವಾರ, ಜೂನ್ 20, 2021
23 °C

ಗ್ರಾಮಾಭ್ಯುದಯಕ್ಕೆ ಉದ್ಯೋಗ ಖಾತ್ರಿ ಸಹಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಗ್ರಾಮದ ಅಭ್ಯುದಯಕ್ಕೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದ್ದು, ಗ್ರಾಮೀಣರು ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು~ ಎಂದು ತಾ.ಪಂ. ಸದಸ್ಯ ಚಿಕ್ಕಮಹದೇವು ಸಲಹೆ ನೀಡಿದರು.ತಾಲ್ಲೂಕಿನ ಅಮಚವಾಡಿ ಗ್ರಾಮದಲ್ಲಿ ಈಚೆಗೆ ಉದ್ಯೋಗ ಖಾತ್ರಿ ಯೋಜನೆ ಹಾಗೂ ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಸಂಬಂಧ ನಡೆದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಶೀಘ್ರವೇ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದ ಅವರು, ಅಮಚವಾಡಿಗೆ ಈಗಾಗಲೇ ಬಸವ ವಸತಿ ಯೋಜನೆಯಡಿ 401 ಮನೆ ನೀಡಲಾಗಿದೆ.ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತ ದಲ್ಲಿದೆ. ಗ್ರಾ.ಪಂ.ಗೆ ಇಂದಿರಾ ಆವಾಸ್ ಯೋಜನೆಯಡಿ 35 ಮನೆ ಮಂಜೂ ರಾಗಿವೆ. ಅವುಗಳಿಗೆ ಈಗ ಅನು ಮೋದನೆ ನೀಡಲಾಗುವುದು ಎಂದರು.ವಿವಿಧ ಯೋಜನೆಯಡಿ ಮನೆ ಮಂಜೂರಾತಿಗೆ ಫಲಾನುಭವಿಗಳ ಆಯ್ಕೆಗೆ ಗ್ರಾಮ ಸಭೆ ಕರೆಯಲಾಗಿದೆ.ಅರ್ಹರಿಗೆ ಸೂರು ಕಲ್ಪಿಸಲಾಗುವುದು. ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ, ಶಾಸಕರು, ಸಂಸದರ ಅನುದಾನದಡಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡ ಲಾಗುವುದು. ಗುಡಿಸಲುರಹಿತ ಗ್ರಾಮ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದ ಅವರು, ಯಾವುದೇ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಲು ಗ್ರಾಮಸ್ಥರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದು ನುಡಿದರು.ಗ್ರಾ.ಪಂ. ಅಧ್ಯಕ್ಷ ವೆಂಕಟಾಚಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಧರ್ಮೆಂದ್ರ, ನೋಡೆಲ್ ಅಧಿಕಾರಿ ಜಗದೀಶ್, ಗ್ರಾ.ಪಂ. ಸದಸ್ಯರಾದ ಕಾಂತರಾಜು, ಹಾಲಪ್ಪ, ಕುಮಾರ್, ಮುಖಂಡರಾದ ಶಂಕರ್, ಮಹೇಶ್, ವೀರಭದ್ರಯ್ಯ, ಪಿಡಿಒ ಪುಟ್ಟಶೆಟ್ಟಿ ಇತರರು ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.