ಶುಕ್ರವಾರ, ಜನವರಿ 24, 2020
28 °C

ಗ್ರಾಮೀಣರಲ್ಲಿ ಆರೋಗ್ಯ ಜಾಗೃತಿ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ~ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ ಹೇಳಿದರು.ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಗುರುವಾರ ನಡೆದ ಡಾ. ಸೋಮಶೇಖರ ಮತ್ತು ಮಾಲತಿ ಮುನವಳ್ಳಿ ಹೆಲ್ತ್ ಆ್ಯಂಡ್ ವೆಲ್‌ನೆಸ್ ಫೌಂಡೇಷನ್ ಉದ್ಘಾಟಿಸಿ ಮಾನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಜನರು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದರು.ಗ್ರಾಮೀಣ ಭಾಗದ ಜನತೆಯಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮುನವಳ್ಳಿ ದಂಪತಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಈ ನಿಟ್ಟಿನಲ್ಲಿ ಫೌಂಡೇಷನ್ ಗ್ರಾಮೀಣ ಭಾಗಕ್ಕೆ ಮಾದರಿಯಾಗಲಿದೆ ಎಂದು ಹೇಳಿದರು.ಕರ್ನಾಟಕ ರಾಜ್ಯವಲ್ಲದೇ ಇತರೆ ರಾಜ್ಯಗಳು ಮತ್ತು ವಿದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಉತ್ತಮ ಶಿಕ್ಷಣವನ್ನು ಸುತ್ತೂರು ಮಠದ ಸ್ವಾಮೀಜಿ ನೀಡುತ್ತಿದ್ದಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡನ್ನೂ ಕಾಪಾಡಿಕೊಳ್ಳುವಲ್ಲಿ ಸ್ವಾಮೀಜಿಯ ಮಾರ್ಗದರ್ಶನ ಅವಶ್ಯಕ ಎಂದರು.ಧಾರವಾಡ ಕಲೆಗಳ ತವರೂರು ಅನೇಕ ಶಿಲ್ಪಿಗಳು ಇಲ್ಲಿ ನೆಲೆಸಿರುವುದರಿಂದ ಕಲಾ ಗ್ರಾಮದ ಅವಶ್ಯಕತೆ ಇದೆ. ಇದರ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.ಶಾಸಕ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ, ಫೌಂಡೇಷನ್ ಸ್ಥಾಪಿಸಲು ಸುತ್ತೂರು ಮಠಕ್ಕೆ ದೇಣಿಗೆ ನೀಡಿದ್ದು ಹೆಮ್ಮೆಯ ವಿಷಯ. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಸ್ವಾಮೀಜಿ ಆರೋಗ್ಯ ಕ್ಷೇತ್ರದಲ್ಲಿಯೂ ಉತ್ತಮ ಕೆಲಸ ಮಾಡಲಿದ್ದಾರೆ ಎಂದರು.ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ  ಅವರು ಜೆ.ಎಂ.ಎಸ್.ಮಣಿ ಅವರಿಗೆ ಕಲಾಗುರು ಡಿ.ವಿ.ಹಾಲಭಾವಿ ಗೌರವ ಪ್ರಶಸ್ತಿ ಪ್ರದಾನ ಮಾಡಿ, ಗ್ರಾಮಾಂತರ ಪ್ರದೇಶದ ಜನ ಹೊಲಗಳಲ್ಲಿ ಕೆಲಸ ಮಾಡಿಕೊಂಡು ದೈಹಿಕವಾಗಿ ಆರೋಗ್ಯವಂತರಾಗಿರುತ್ತಾರೆ. ಆದರೆ ಅವರು ಕೆಟ್ಟ ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಹದಗಡೆಸಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.ಪ್ರಶಸ್ತಿ ಸ್ವೀಕರಿಸಿದ ಜೆ.ಎಂ.ಎಸ್.ಮಣಿ, ವಿದೇಶದ ಕಲಾವಿದರು ರಚಿಸಿದ ಕಲಾಕೃತಿಗಳಿಗೆ ಮಾರು ಹೋಗಬಾರದು. ಶಾಶ್ವತ ಕಲಾ ಗ್ರಾಲರಿ ಆಗಬೇಕು ಎಂದ ಅವರು, ಜಾನಪದ ವಿಶ್ವವಿದ್ಯಾಲಯದ ಮಾದರಿಯಲ್ಲಿಯೇ ಚಿತ್ರಕಲಾ ವಿ.ವಿ. ಸ್ಥಾಪಿಸುವ ಅಗತ್ಯವಿದೆ ಎಂದರು.ಡಾ. ಸೋಮಶೇಖರ ಮುನವಳ್ಳಿ ಮಾತನಾಡಿ, ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಆರೋಗ್ಯದ ಬಗ್ಗೆ ಅರಿವು  ಮೂಡಿಸುವ ಕೆಲಸ ಮಾಡುವುದು ಈ ಪ್ರತಿಷ್ಠಾನದ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಭಾಗದ ಜನರು ಸಹಕಾರ ನೀಡಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಡಾ. ಸೋಮಶೇಖರ ಹಾಗೂ ಮಾಲತಿ ಮುನವಳ್ಳಿ ಅವರನ್ನು ಸನ್ಮಾನಿಸಲಾಯಿತು. ಡಾ. ಮೃತ್ಯುಂಜಯ ಕುಳೇನೂರ ಸ್ವಾಗತಿಸಿದರು. ಆರ್ಯ ಆಚಾರ್ಯ ಸುರೇಶ ಹಾಲಭಾವಿ, ಡಾ. ಎಚ್. ಬಸವನಗೌಡಪ್ಪ ಪರಿಚಯಿಸಿದರು. ಪ್ರತಿಭಾ ಜನಮಟ್ಟಿ ನಿರೂಪಿಸಿದರು. ಗಾಯತ್ರಿ ಗೌಡರ ವಂದಿಸಿದರು.   

ಪ್ರತಿಕ್ರಿಯಿಸಿ (+)