ಶನಿವಾರ, ಮೇ 21, 2022
27 °C

ಗ್ರಾಮೀಣರ ಸಬಲೀಕರಣಕ್ಕೆ ಒತ್ತು: ಸಂಜೀವ ಭೂಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಗ್ರಾಮಗಳ ಉದ್ಧಾರವೇ ದೇಶದ ಉದ್ಧಾರ ಎಂದು ಗಾಂಧೀಜಿ ಹೇಳಿದ್ದು, ಅವರ ಕನಸಿನಂತೆ ಗ್ರಾಮೀಣರ ಸಬಲೀಕರಣಕ್ಕೆ ಒತ್ತು ನೀಡುವುದು ಅಗತ್ಯವಾಗಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ ಹಾಗೂ ಜಿಲ್ಲಾ ವಿಜ್ಞಾನ ಸಮಿತಿ ಕಾರ್ಯದರ್ಶಿ ಸಂಜೀವಕುಮಾರ ಭೂಶೆಟ್ಟಿ ತಿಳಿಸಿದರು.ಕುಂದಗೋಳ ತಾಲ್ಲೂಕು ಯರೇಬೂದಿಹಾಳ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ `ಗ್ರಾಮ ಸ್ವಚ್ಛತಾ ಮಾಸಾಚರಣೆ~ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.ಸ್ವಾತಂತ್ರ್ಯ ಬಂದು 65 ವರ್ಷ ಕಳೆದರೂ ಗ್ರಾಮಗಳೇ ಅಭಿವೃದ್ಧಿಯತ್ತ ಮುಖ ಮಾಡಿಲ್ಲ. ಇಂದಿಗೂ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಇದೆ. ಇದಕ್ಕೆ ಗ್ರಾಮೀಣರಲ್ಲಿ ಆರೋಗ್ಯ ಜಾಗೃತಿ ಇಲ್ಲದಿರುವುದೇ ಮುಖ್ಯ ಕಾರಣ ಎಂದು ಹೇಳಿದರು.ನೋಡಲ್ ಅಧಿಕಾರಿ ಬಿ.ಸಿ. ಏರಲದಿನ್ನಿ ಮಾತನಾಡಿ, ಮಲ- ಮೂತ್ರ ವಿಸರ್ಜನೆಗಳಿಂದ ಗ್ರಾಮದಲ್ಲಿ ಕಾಲರಾದಂತಹ ಬೇನೆಗಳು ಲಗ್ಗೆ ಇಡುತ್ತವೆ ಹಾಗಾಗಿ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಲು ಸಲಹೆ ನೀಡಿದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಜಿ.ಬೀಡಿಮಠ, ಗ್ರಾಮ ಪಂಚಾಯಿತಿ ಸದಸ್ಯ ಮಹದೇವಪ್ಪ ಪೂಜಾರ, ಸುಮಿತ್ರಾ ಕಂಬಿ, ಸ್ವಚ್ಛತಾ ಕಾರ್ಯ ತಂಡದ ಎಸ್.ಎಸ್.ನಾಗಶೆಟ್ಟಿ, ರೇಷ್ಮಾ, ಕಾರ್ಯದರ್ಶಿ ಆರ್.ಎಸ್. ಬುಕನಕಟ್ಟಿ ಪಾಲ್ಗೊಂಡಿದ್ದರು.ಎಸ್. ಎ.ಕಮತಿ ನಿರೂಪಿಸಿದರು. ಎಚ್. ಎಂ.ಪಾಟೀಲ ಸ್ವಾಗತಿಸಿದರು. ವಿ.ಆರ್. ಭಟ್ಟ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.