ಭಾನುವಾರ, ಜನವರಿ 19, 2020
20 °C

ಗ್ರಾಮೀಣ ಕ್ರೀಡೆಗಳು ಸಂಸ್ಕೃತಿಯ ಜೀವಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಧೋಳ: ನಗರದ ಮಹಾಲಿಂಗಪುರ ರಸ್ತೆ ಪಕ್ಕದ ಹಿಂದೂ ರುದ್ರಭೂಮಿಯಲ್ಲಿನ ಬಿಲ್ವಪತ್ರಿ ಗಿಡಗಳಿಗೆ ಗವಿಮಠ, ವಿರಕ್ತಮಠದ ಮೃತ್ಯುಂಜಯ ಸ್ವಾಮೀಜಿಗಳು ಪೂಜೆ ಸಲ್ಲಿಸಿ ಸಂಸ್ಕಾರ ನೀಡಿ, ರುದ್ರಾಭಿಷೇಕ ಹಾಗೂ ಲಘು ರುದ್ರ ಪಠಣ ಮಾಡಿದರು.        

         

ಶಿವನಿಗೆ ಪ್ರೀಯವಾದ ಬಿಲ್ವ ಪತ್ರಿಯನ್ನು ಸಂಸ್ಕಾರವಿಲ್ಲದ ಗಿಡದಿಂದ ತೆಗೆದು ಏರಿಸಿದರೆ ಅದು ಶೇಷ್ಠವಲ್ಲ, ಅದನ್ನೇ ಸಂಸ್ಕಾರಯುಕ್ತ ಗಿಡದಿಂದ ಬಿಲ್ವ ಪತ್ರಿಯನ್ನು ತೆಗೆದು ಶಿವನಿಗೆ ಏರಿಸಿದರೆ ಅದು ಶಿವನಿಗೆ ಸಮರ್ಪಣೆಯಾಗುತ್ತದೆ, ಶಿವ ಸಂಪ್ರೀತನಾಗುತ್ತಾನೆ, ಪುರಾಣ ಕಾಲದಿಂದ ಬಿಲ್ವ ಪತ್ರಿಗೆ ಮಹತ್ತರವಾದ ಸ್ಥಾನವಿದ್ದು, ಪೂಜೆಗೆ ಯೋಗ್ಯವಾಗಿದೆ ಮತ್ತು ರುದ್ರ ಭೂಮಿಯಲ್ಲಿನ ಪತ್ರಿಗಿಡಗಳಿಂದ ತೆಗೆದ ಬಿಲ್ವಪತ್ರಿಗೆ ಹೆಚ್ಚು ಮಹತ್ವವಿದೆ ಎಂದು ಶ್ರಿಗಳು ಭಕ್ತರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಸದಾಶಿವ ಬಾಗೋಡಿ, ಗುರುಪಾದ ಯರಗಟ್ಟಿ, ಈರಯ್ಯ ನಿಜಗುಣಿ, ಮಹಾದೇವಯ್ಯ ವಸ್ತ್ರದ, ಕಲ್ಮೇಶ ಹಣಗೋಜಿ, ಮಹಾದೇವ ಪುರಾಣಿಕ, ಬಸವರಾಜ ಬಳಗಾರ, ಕುಮಾರ ಸ್ವಾಮಿ ಮಂಟೂರ, ಗುರುರಾಜ ಮಠ, ಮಲ್ಲಯ್ಯ ಮಠಪತಿ, ಪವನ ದೇವಪೂಜಿ, ಅಣ್ಣಪ್ಪ ಹಣಗೋಜಿ, ಶ್ರಿಶೈಲ ಹಣಗೋಜಿ, ಬಾಳಪ್ಪ ತೇಲಿ, ಶ್ರಿರಾಮ ಸಾಲೀಮನಿ ಹಾಗೂ ನೂರಾರು ಭಕ್ತರು ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಪೂಜೆ ಹಾಗೂ ಸಂಸ್ಕಾರದ ನಂತರ ಸ್ಮಶಾನದಲ್ಲಿ ಎಲ್ಲರೂ ಪ್ರಸಾದ ಸ್ವೀಕರಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ಪ್ರತಿಕ್ರಿಯಿಸಿ (+)