ಮಂಗಳವಾರ, ಏಪ್ರಿಲ್ 13, 2021
30 °C

ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಪ್ಲಿ: ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ ಎಂದು ಪುರಸಭೆ ಸದಸ್ಯ ಕೆ.ಎಂ. ಹೇಮಯ್ಯ ಸ್ವಾಮಿ ಅಭಿಪ್ರಾಯಪಟ್ಟರು. ಪಟ್ಟಣದ ಮಡ್ಡಿಕಟ್ಟೆಯಲ್ಲಿ ಶಿವಗಜಾನನ ಉತ್ಸವ ಸಮಿತಿ ಹೋಳಿ ಹಬ್ಬ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ರಂಗಿನ ಗಡಿಗೆ ಒಡೆಯುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಸರ್ಕಾರ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.ಶಿವಗಜಾನನ ಉತ್ಸವ ಸಮಿತಿಯ ವಿ. ರಘುನಾಯಕ, ದೇವಾಂಗ ಸಮಾಜ ಅಧ್ಯಕ್ಷ ಅಗಳಿ ಪಂಪಾಪತಿ ಮಾತನಾಡಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿ. ಗಣೇಶ್ ಅವರಿಗೆ ಎಎಸ್‌ಐ ರಾಜಶೇಖರ ಬೆಳ್ಳಿ ಕಡಗ ತೊಡಿಸಿದರು. ಸೋನಾ ಜೆಸಿ ಅಧ್ಯಕ್ಷ ಜಿ. ಚಂದ್ರಶೇಖರಗೌಡ, ಉಸ್ತಾದ್ ಗಣಾಚಾರಿ ಕೊಟ್ರಪ್ಪ, ಶಿವಗಜಾನನ ಉತ್ಸವ ಸಮಿತಿಯ ಪ್ರಸನ್ನ. ಪ್ರಶಾಂತ, ವೆಂಕಟೇಶ್, ಸಂತೋಷ, ರಾಘವೇಂದ್ರ, ಎಚ್. ನಂದೀಶ್ ಇತರರು ಹಾಜರಿದ್ದರು.ಸಂಭ್ರಮದ ಹೋಳಿ: ಪಟ್ಟಣದಲ್ಲಿ ಭಾನುವಾರ ಮಕ್ಕಳು, ಯುವಕ, ಯುವತಿಯರು ಸೇರಿದಂತೆ ಹಿರಿಯರು ರಂಗಿನ ಓಕುಳಿ ಆಟವನ್ನು ಸಂಭ್ರಮದಿಂದ ಆಡಿದರು.ಬಿರು ಬಿಸಿಲನ್ನು ಲೆಕ್ಕಿಸದೆ ಅನೇಕರು ವಿವಿಧ ಬಣ್ಣಗಳನ್ನು ಬಳಸಿ ಪಿಚಕಾರಿಯಿಂದ ಪರಸ್ಪರ ಎರಚಿಕೊಂಡರು. ಸಂಜೆ ವೇಳೆಗೆ ಓಕುಳಿ ಹಬ್ಬಕ್ಕೆ ತೆರೆ ಬಿದ್ದಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.