ಹುಬ್ಬಳ್ಳಿ: `ಗ್ರಾಮೀಣ ಭಾಗದ ಮಕ್ಕಳಿಗೂ ಉನ್ನತ ಶಿಕ್ಷಣ ಲಭ್ಯವಾಗಬೇಕೆಂಬ ಉದ್ದೇಶದಿಂದ ಧರ್ಮ, ಜಾತಿ, ಬೇಧವಿಲ್ಲದೆ ಎಲ್ಲ ವರ್ಗದ ಕಡುಬಡವರಿಗೆ ಉಚಿತ ಹಾಗೂ ಬಡ ವಿದ್ಯಾರ್ಥಿಗಳಿಗೆ ಅಲ್ಪ ವೆಚ್ಚದಲ್ಲಿ ಊಟ, ವಸತಿ ಸೌಕರ್ಯದ ಜೊತೆಗೆ ಶಿಕ್ಷಣ ನೀಡಲು ಎ.ಜಿ.ಎಂ. ರೂರಲ್ ಮಾಧ್ಯಮಿಕ ಶಾಲೆ, ಪದವಿಪೂರ್ವ ಕಾಲೇಜು, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಕಾಲೇಜು ಬದ್ಧವಾಗಿದೆ' ಎಂದು ವರೂರ ನವಗ್ರಹ ತೀರ್ಥ ಕ್ಷೇತ್ರದ ಗುಣಧರನಂದಿ ಮಹಾರಾಜ್ ತಿಳಿಸಿದರು.

`ವಿದ್ಯೆಯೇ ಬಾಳಿನ ಬೆಳಕು. ಆದರೆ ಅದೆಷ್ಟೋ ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳು ಬಡತನ, ಆರ್ಥಿಕತೆ ಮತ್ತಿತರ ಕಾರಣಗಳಿಂದ ವಿದ್ಯಾರ್ಜನೆ ಯಿಂದ ವಂಚಿತರಾಗುತ್ತಿದ್ದಾರೆ.

ಇಂತಹ ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡಬೇಕೆಂಬ ಉದ್ದೇಶದಿಂದ 2006ರಲ್ಲಿ ಕೇವಲ ಒಂಬತ್ತು ವಿದ್ಯಾರ್ಥಿಗಳಿಂದ ಆರಂಭಗೊಂಡ ಪ್ರಾಥಮಿಕ ಶಾಲೆಯಲ್ಲಿ ಸದ್ಯ 3500ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. 2008ರಲ್ಲಿ ಡಿಪ್ಲೊಮಾ, 2009ರಲ್ಲಿ ಎಂಜಿನಿಯರಿಂಗ್ ಕಾಲೇಜು ಆರಂಭಿಸಲಾಯಿತು. ಎಂಜಿನಿಯ ರಿಂಗ್ ವಿಭಾಗದಲ್ಲಿ ಸಿವಿಲ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್, ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್ ವಿಭಾಗಗಳಿದ್ದು, ಪ್ರತಿ ವಿಭಾಗದಲ್ಲಿ 60 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ವಿದೆ' ಎಂದು ವರೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

`ಗ್ರಾಮೀಣ ಮಕ್ಕಳಿಗೆ ಉನ್ನತ ಶಿಕ್ಷಣ ಕೈಗೆಟು ಕಬೇಕು, ಹಳ್ಳಿಗಳೂ ಸಾಕ್ಷರ ಗ್ರಾಮಗಳಾಗಬೇಕು, ಎಂಜಿನಿಯರಿಂಗ್, ತಾಂತ್ರಿಕ ಶಿಕ್ಷಣ ಆರ್ಥಿಕವಾಗಿ ಹಿಂದುಳಿದವರಿಗೆ ಲಭ್ಯವಾಗಬೇಕು, ಜನಸಾಮಾ ನ್ಯರ ಜೀವನವೂ ಉತ್ತಮಗೊಳ್ಳಬೇಕು, ನೈತಿಕ ಸಂಸ್ಕಾರ, ಸಂಸ್ಕೃತಿ ಸಿಗಬೇಕು, ರ್ಯಾಗಿಂಗ್ ಮುಕ್ತ ವಾತಾವರಣದಲ್ಲಿ ಮಕ್ಕಳು ಕಲಿಯುವಂತಾಗಬೇಕು ಎಂಬ ಧ್ಯೇಯದಿಂದ ಶಿಕ್ಷಣ ಸಂಸ್ಥೆ ನಡೆಸಲಾ ಗುತ್ತಿದೆ' ಎಂದರು.

ತಾರತಮ್ಯ ಸಲ್ಲ: `ಸರ್ಕಾರಿ ಶಾಲೆಯ ಮಕ್ಕಳಿಗೆ ಹಾಲು ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಖಾಸಗಿ ಶಾಲೆಯ ಮಕ್ಕಳಿಗೆ ಕುಡಿಯುವ ನೀರು ನೀಡಲು ವಿಫಲವಾಗಿದೆ. ಸೈಕಲ್ ವಿತರಿಸಿದರೂ, ಗ್ರಾಮೀಣ ಭಾಗದ ರಸ್ತೆಗಳಲ್ಲಿ ನಡೆದಾಡಲು ಸಾಧ್ಯವಾಗದ ಸ್ಥಿತಿ ಇದೆ. ಈ ತಾರತಮ್ಯ ಯಾಕೆ? ಖಾಸಗಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಮಾಡಿದ ತಪ್ಪಾದರೂ ಏನು?' ಎಂದು ಅವರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.

`ಸರ್ಕಾರದ ಸವಲತ್ತುಗಳು ಬಡ ಮಕ್ಕಳಿಗೆ ಸಿಗುತ್ತಿಲ್ಲ. ಬಡ, ಪರಿಶಿಷ್ಟ ವಿದ್ಯಾರ್ಥಿಗಳಿಗೆ ನೀಡ ಲಾಗುವ ಸ್ಕಾಲರ್ಶಿಪ್ ಹಣ 2-3 ವರ್ಷ ಕಳೆ ದರೂ ಬಿಡುಗಡೆ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಅಧಿ ಕಾರಿಗಳು ಗಮನಹರಿಸಬೇಕು. ಸರ್ಕಾರಿ ಕಾಲೇಜು ಗಳಲ್ಲಿ ಸರಿಯಾದ ಕುರ್ಚಿ, ಪ್ರಯೋಗಾಲಯಗಳಿಲ್ಲ. ಆದರೆ ಅವೆಲ್ಲವೂ ಇರುವ ಖಾಸಗಿ ಕಾಲೇಜುಗಳ ಮೇಲೆ ಮಲತಾಯಿ ಧೋರಣೆ ತೋರಿಸುವುದು ಖಂಡನೀಯ' ಎಂದರು. `ಪರೀಕ್ಷಾ ಕ್ರಮದಲ್ಲಿ ಬದಲಾವಣೆ ತರದಿದ್ದರೆ ಮುಂದಿನ ದಿಗಳಲ್ಲಿ ಡಿಪ್ಲೊಮಾ ಕೋರ್ಸ್ನ್ನು ಮುಚ್ಚಬೇಕಾದ ಸ್ಥಿತಿ ಬರಬಹುದು' ಎಂದೂ ಅವರು ಆತಂಕ ವ್ಯಕ್ತಪಡಿಸಿದರು.
ಉಪ ಪ್ರಾಂಶುಪಾಲ ರವೀಂದ್ರ ಬಿ.ಪಾಟೀಲ ಉಪಸ್ಥಿತರಿದ್ದರು.

ಅಭಯಚಂದ್ರ ಖಾತೆ ಬದಲಿಸಲು ಸ್ವಾಮೀಜಿ ಆಗ್ರಹ
ಹುಬ್ಬಳ್ಳಿ: `ಅಹಿಂಸೆ ಜೈನ ಧರ್ಮದ ಮೂಲ ತತ್ವ. ಹೀಗಾಗಿ ಸಚಿವ ಅಭಯಚಂದ್ರ ಜೈನ್ ಅವರಿಗೆ ನೀಡಲಾಗಿರುವ ಮೀನುಗಾರಿಕೆ ಖಾತೆ ಬದಲಿಸಿ ಬೇರೆ ಖಾತೆ ನೀಡಬೇಕು' ಎಂದು ವರೂರ ನವಗ್ರಹ ತೀರ್ಥ ಕ್ಷೇತ್ರದ ಗುಣಧರನಂದಿ ಮಹಾರಾಜ್ ಆಗ್ರಹಿಸಿದರು.

`ಅಭಯ್ ಅವರಿಗೆ ಮೀನುಗಾರಿಕೆ ಖಾತೆ ನೀಡಿರುವುದರಿಂದ ಇಡೀ ಜೈನ ಸಮಾಜಕ್ಕೆ ಅಸಮಾಧಾನ, ಮಾನಸಿಕವಾಗಿ ದುಃಖವಾಗಿದೆ. ಮಹಾರಾಷ್ಟ್ರದ ಕುಂತಿಗಿರಿಯಲ್ಲಿ ಮೇ 26 ರಂದು ಜರುಗಿದ ಸಮಾಜದ ಸ್ವಾಮೀಜಿಗಳ ಮತ್ತು ಹಿರಿಯರ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ.

ಆ ಸಭೆಯಲ್ಲಿ ನಿರ್ಧರಿಸಿದಂತೆ ಅಭಯ್ ಚಂದ್ರ ಅವರಿಗೆ ಬೇರೆ ಖಾತೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ' ಎಂದು ವರೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`ಇದೇ 30ರಂದು ವರೂರಿನಲ್ಲಿ ಸಮಾಜದ ಮುಖಂಡರ ಸಭೆ ನಡೆಯಲಿದೆ. ಅಲ್ಲೂ ಈ ಕುರಿತು ಚರ್ಚಿಸಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಗೆ ನೇಮಕಗೊಂಡಿರುವ ದಿಗ್ವಿಜಯ ಸಿಂಗ್ ಅವರ ಗಮನಕ್ಕೂ ಈ ವಿಷಯವನ್ನು ತರಲಾಗುವುದು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.