ಗುರುವಾರ , ಜೂನ್ 17, 2021
27 °C

ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: `ಗ್ರಾಮ ನೈರ್ಮಲ್ಯ, ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಮುಖ್ಯ ಗುರಿಯಾಗಬೇಕು~ ಎಂದು ತಹಶೀಲ್ದಾರ್ ಜಿ. ನಜ್ಮಾ ಅಭಿಪ್ರಾಯಪಟ್ಟರು.ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಎಸ್‌ಜೆವಿಪಿ ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.ಎನ್‌ಎಸ್‌ಎಸ್ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಸಹಕಾರ ಹಾಗೂ ಸೇವಾ ಮನೋಭಾವ ಮೂಡುತ್ತದೆ. ವ್ಯಕ್ತಿಗಳ ಅಭಿವೃದ್ಧಿಯಿಂದ ಸಮಾಜದ ಅಭಿವೃದ್ಧಿ ಆಗುತ್ತದೆ. ಗ್ರಾಮ ಪರಿಸರ ತಮ್ಮ ಪರಿಸರ ಎಂಬ ಜಾಗೃತಿ ಮೂಡಿದಾಗ ಗ್ರಾಮಗಳೆಲ್ಲ ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ ಹೊಂದಿರುವ ತಾಣಗಳಾಗುತ್ತವೆ. ತಮ್ಮ ಸೇವೆ ಗ್ರಾಮಕ್ಕೆ ನೀಡುವ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕಲೆ ಎನ್‌ಎಸ್‌ಎಸ್‌ನಿಂದ ಸಾಧ್ಯವಾಗಿದೆ ಎಂದರು.ನಗರಸಭೆ ಸದಸ್ಯ ಬಿ. ರೇವಣಸಿದ್ದಪ್ಪ ಮಾತನಾಡಿ, ಎನ್‌ಎಸ್‌ಎಸ್ ಶಿಬಿರಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವದ ಗುಣಗಳು ಬೆಳೆಯುತ್ತವೆ ಎಂಬುದಕ್ಕೆ ನಾನೇ ಸಾಕ್ಷಿ ಎಂದರು.ಜಿ.ಪಂ. ಸದಸ್ಯ ನಾಗೇಂದ್ರಪ್ಪ, ಕಾಲೇಜಿನ ಪ್ರಾಂಶುಪಾಲ ಬಿ.ಎಚ್. ವಿಶ್ವನಾಥ, ಶಿಬಿರಾಧಿಕಾರಿಗಳಾದ ಡಾ.ಪರಮೇಶ್ವರನಾಯ್ಕ, ರಮೇಶ್ ಕೆ. ಪರ್ವತಿ, ಸಹ ಶಿಬಿರಾಧಿಕಾರಿಗಳಾದ ರೇಣುಕಾ ಸಂಕನಗೌಡ, ಶಿವಗಂಗಮ್ಮ, ಶಿಬಿರದ ಸಲಹೆಗಾರ ಎಚ್.ಎಂ. ವೇದಮೂರ್ತಿ ಆರಾಧ್ಯ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.