ಮಂಗಳವಾರ, ಏಪ್ರಿಲ್ 20, 2021
25 °C

ಘನತ್ಯಾಜ್ಯ ಅಸಮರ್ಪಕ ವಿಲೇವಾರಿ: ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ತಾಲ್ಲೂಕಿನ ಬಸರೀಹಳ್ಳಿ ಗ್ರಾಮದ ಸಮೀಪ ನಿರ್ಮಿಸಿರುವ ಹಿರೇಕೆರೂರ ಪಟ್ಟಣದ ಘನತ್ಯಾಜ್ಯ ವಸ್ತು ವಿಲೇವಾರಿ ಸಂಸ್ಕರಣೆ ಮತ್ತು ನಿರ್ವಹಣೆ ಘಟಕದಲ್ಲಿ ತ್ಯಾಜ್ಯ ವಸ್ತುಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಬಸರೀಹಳ್ಳಿ ಗ್ರಾಮಸ್ಥರು ಭಾನುವಾರ ಘಟಕಕ್ಕೆ ಕಸ ವಿಲೇವಾರಿ ಮಾಡಲು ಬಂದಿದ್ದ 2 ಟ್ರ್ಯಾಕ್ಟರ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ ದೊಡ್ಡಗೌಡ್ರ, ಏಳು ಎಕರೆ ಗೋಮಾಳ ಜಮೀನಿನಲ್ಲಿ ಘಟಕವನ್ನು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಗಮನಕ್ಕೆ ತರದೇ ಕಾನೂನು ಉಲ್ಲಂಘಿಸಿ ನಿರ್ಮಾಣ ಮಾಡಿದ್ದಾರೆ. ಇದರ ಬಗ್ಗೆ ಈ ಹಿಂದೆ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದ 12 ಗ್ರಾಮಸ್ಥರ ವಿರುದ್ಧ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಸುಳ್ಳು ಮೊಕದ್ದಮೆ ದಾಖಲು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಘಟಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಸತ್ತ ಹಂದಿ, ನಾಯಿ, ಕೋಳಿ ಮುಂತಾದವುಗಳ ಮೃತ ದೇಹಗಳನ್ನು ಸೂಕ್ತ ವಿಲೇವಾರಿ ಮಾಡದೇ ಎಸೆದು ಹೋಗುತ್ತಿದ್ದಾರೆ. ಇವು ಕೊಳೆತು ನಾರುತ್ತಿರುವುದರಿಂದ ಸುತ್ತಮುತ್ತ ರೈತರು ಕೃಷಿ ಚಟುವಟಿಕೆ ಮಾಡಲು ಆಗದಂತಹ ಸ್ಥಿತಿ ಎದುರಾಗಿದ್ದು, ರೈತರು ಅನಾರೋಗ್ಯಕ್ಕೆ ತುತ್ತಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.ಘಟಕದ ಮಧ್ಯದಲ್ಲಿಯೇ ಹಳ್ಳ ಹರಿದು ಹೋಗಿದ್ದು, ಮೃತ ದೇಹಗಳನ್ನು ನಾಯಿಗಳು ಎಳೆದಾಡಿ ಹಳ್ಳಕ್ಕೆ ತಂದು ಹಾಕುತ್ತಿವೆ. ಇದರಿಂದ ಜಾನುವಾರುಗಳ ಆರೋಗ್ಯದ ಮೇಲೆ ಕೂಡ ದುಷ್ಪರಿಣಾಮ ಉಂಟಾಗುತ್ತಿದೆ.ಬೀದಿ ನಾಯಿಗಳ ಹಾವಳಿ ಇಲ್ಲಿ ವಿಪರೀತವಾಗಿ ರಾತ್ರಿ ವೇಳೆಯಲ್ಲಿ ರೈತರು ತಮ್ಮ ಹೊಲಗಳಿಗೆ ಓಡಾಡಲು ಆಗದಂಥ ಸ್ಥಿತಿ ನಿರ್ಮಾಣವಾಗಿದೆ. ಕಾರಣ ಪ.ಪಂ. ವಿರುದ್ಧ ಕಾನೂನು ಬದ್ಧ ಹೋರಾಟಕ್ಕೆ ನಾವೂ ಸನ್ನದ್ಧರಾಗಿದ್ದೇವೆ ಎಂದು ಹೇಳಿದರು.ನಾಗೇಂದ್ರಪ್ಪ ಮಡಿವಾಳರ, ಚಂದ್ರಪ್ಪ ಲೆಕ್ಕಪ್ಪಳವರ, ಹನುಮಂತ ಗೌಡ ದೊಡ್ಡಗೌಡ್ರ, ಜಟ್ಟಿಗೌಡ ಹೊಟ್ಟಿಗೌಡ್ರ ಹಾಗೂ ಬಸರೀಹಳ್ಳಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಂಜೆಯವರೆಗೆ ಕಸದ ಟ್ರ್ಯಾಕ್ಟರ್‌ಗಳನ್ನು ತಡೆದ ಗ್ರಾಮಸ್ಥರು ಕಸ ಹಾಕಿಸದೇ ವಾಪಸು ಕಳಿಸಿದರು ಎಂದು ತಿಳಿದು ಬಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.