ಅರಕಲಗೂಡು: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಗುರುವಾರ ಏರ್ಪಡಿಸಿದ್ದ ‘ಆಹಾರೋತ್ಸವ’ದಲ್ಲಿ ವಿದ್ಯಾರ್ಥಿಗಳು ಭರ್ಜರಿ ವ್ಯಾಪಾರ ನಡೆಸಿದರು.

ವಿದ್ಯಾರ್ಥಿಗಳು ತಯಾರಿಸಿದ್ದ ವಿವಿಧ ಖಾದ್ಯಗಳ ಸುವಾಸನೆ ಕಾಲೇಜಿನ ಆವರಣವನ್ನು ವ್ಯಾಪಿಸಿ ಸಾರ್ವಜನಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಕಾಲೇಜಿನ 19 ವಿದ್ಯಾರ್ಥಿ ತಂಡಗಳು ಆಹಾರೋತ್ಸವದಲ್ಲಿ ಮಾರಾಟ ಮಳಿಗೆಗಳನ್ನು ತೆರೆದಿದ್ದವು. ಸಮೋಸ, ಬಜ್ಜಿ, ಪಕೋಡ, ಪುಳಿಯೊಗರೆ, ಗೊಜ್ಜವಲಕ್ಕಿ, ಹಲ್ವ, ವೆಜಿಟಬಲ್ ಕಬಾಬ್, ವೆಜ್ ಬಿರಿಯಾನಿ, ಮಸಾಲೆ ಪೂರಿ, ಪಾನಿ ಪೂರಿ, ಜಾಮೂನು, ದಮ್ರೋಟ್, ಮಸಾಲಾ ಮಜ್ಜಿಗೆ, ಕಾಫಿ, ಟೀ, ಹೀಗೆ ತರಹೇವಾರಿ ಖಾದ್ಯಗಳನ್ನು ವಿದ್ಯಾರ್ಥಿಗಳು ಆಕರ್ಷಕವಾಗಿ ಜೋಡಿಸಿದ್ದರು. ಖಾದ್ಯಗಳು ನೋಡುಗರ ಬಾಯಲ್ಲಿ ನೀರೂರುವಂತೆ ಮಾಡಿತಲ್ಲದೆ ದರವೂ ದುಬಾರಿ ಎನಿಸಲಿಲ್ಲ.

ವಿದ್ಯಾರ್ಥಿಗಳು ತೆರೆದಿದ್ದ ಆಹಾರ ಮಳಿಗೆಗಳಿಗೆ ಅಜೀಂ ಪ್ರೇಮ್ಜಿ, ಹಿಂದೂಜಾ, ಲಕ್ಷ್ಮಿಮಿತ್ತೆಲ್, ಸುಧಾಮೂರ್ತಿ, ವಿಜಯ ಮಲ್ಯಾ ಅವರಂತಹ ಖ್ಯಾತ ಉದ್ಯಮಿಗಳ ಹೆಸರಿಡಲಾಗಿತ್ತು.

ನೀರಿನ ಮಿತ ಬಳಕೆ, ಆಹಾರ ಪೋಲು ಮಾಡಬೇಡಿ ಎಂಬ ಹಿತವಚನಗಳನ್ನು ವಿದ್ಯಾರ್ಥಿಗಳು ನೀಡಿದರು. ವಿದ್ಯಾರ್ಥಿಗಳು ತೆರೆದಿದ್ದ ಆಹಾರ ಮಳಿಗೆಗಳಿಗೆ ಉಳಿದ ವಿದ್ಯಾರ್ಥಿಗಳು ಅಧ್ಯಾಪಕರು, ಪೋಷಕರು ಹಾಗೂ ಸಾರ್ವಜನಿಕರು ಭೇಟಿ ನೀಡಿ ತಮಗಿಷ್ಟವಾದ ತಿನಿಸುಗಳನ್ನು ಖರೀದಿಸಿ ಸೇವಿಸಿದರು. ವಿವಿಧ ಆಹಾರ ಪದಾರ್ಥಗಳನ್ನು 5 ರಿಂದ 15 ರೂಪಾಯಿ ಬೆಲೆಯಲ್ಲಿ ವಿದ್ಯಾರ್ಥಿಗಳು ಮಾರಾಟ ಮಾಡಿದರು.

ಆಹಾರೋತ್ಸವಕ್ಕೆ ತೊಡಗಿಸಲಾಗಿದ್ದ ಬಂಡವಾಳ ಏಳು ಸಾವಿರ ರೂಪಾಯಿ. ನಡೆಸಿದ ಒಟ್ಟು ವಹಿವಾಟು 23 ಸಾವಿರ ರೂಪಾಯಿ. ಉತ್ತಮ ವಹಿವಾಟು ನಡೆಸಿದ ತಂಡಗಳಿಗೆ ಬಹುಮಾನ ನೀಡಲಾಯಿತು. ಶೇ 62 ಲಾಭ ಗಳಿಸಿದ ಕುಸುಮ ಮತ್ತು ತಂಡ ಪ್ರಥಮ ಬಹುಮಾನ ಗಳಿಸಿತು. ಈ ತಂಡ 400 ರೂ ಬಂಡವಾಳ ಹೂಡಿ 1100 ರೂಪಾಯಿ ವಹಿವಾಟು ನಡೆಸಿತು.

ಎರಡನೆ ಬಹುಮಾನ ಪಡೆದ ಸಾನಿಯಾ ತಂಡ ಶೇ 59 ಲಾಭ ಗಳಿಸಿತು. ಭವಾನಿ ಮತ್ತು ತಂಡ ಶೇ 58 ಲಾಭ ಪಡೆದು ಮೂರನೆ ಸ್ಥಾನ ಗಳಿಸಿತು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಚ್.ಟಿ. ಮಂಜುನಾಥ್ ಆಹಾರೋತ್ಸವವನ್ನು ಉದ್ಘಾಟಿಸಿದರು.
ಮಾಜಿ ಉಪಾಧ್ಯಕ್ಷ ಕೀರ್ತಿರಾಜ್, ಸದಸ್ಯರಾದ ಲೋಕೇಶ್, ನಂದಕುಮಾರ್, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಚಾಂದ್ಪಾಷಾ, ಉಪನ್ಯಾಸಕರಾದ ಎಸ್.ಎನ್. ನಾಗೇಂದ್ರ, ಸಂತೋಷ್, ಪ್ರಾಧ್ಯಾಪಕರಾದ ಬಸವರಾಜ್, ಶಿವಣ್ಣ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.