ಭಾನುವಾರ, ಜೂನ್ 13, 2021
29 °C

ಘರ್ಷಣೆಗೆ ಪೊಲೀಸ್ ವೈಫಲ್ಯ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: ಗೋಕಾಕ ಫಾಲ್ಸದ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಕಳೆದ 21ರಂದು ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ ಕಾರ್ಯಕರ್ತರ ಮಧ್ಯೆ ಸಂಭವಿಸಿದ ಘರ್ಷಣೆಗೆ ಪೊಲೀಸರ ವೈಫಲ್ಯತೆಯೇ ಕಾರಣ ಎಂದು ದೂರಿ ಗೋಕಾಕ ಮಿಲ್ ಕಾರ್ಮಿಕರು ಬುಧವಾರ ತಾಲ್ಲೂಕು ಆಡಳಿತದ ಮುಖಾಂತರ ರಾಜ್ಯಪಾಲರಿಗೆ ಮನವಿ ರವಾನಿಸಿದರು.ಇದಕ್ಕೂ ಮೊದಲು ಕಾರ್ಮಿಕರು ಶಾಸಕ ರಮೇಶ ಜಾರಕಿಹೊಳಿ ಮತ್ತು ಡಿವೈಎಸ್ಪಿ ಅವರಿಗೂ ಮನವಿ ಪತ್ರದ ಪ್ರತಿಗಳನ್ನು ಸಲ್ಲಿಸಿ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದರು.ಗೋಕಾಕ ಮಿಲ್ಸ್ ಕಾರ್ಮಿಕರ ಸಹಬಾಳ್ವೆಯ ಜೀವನಕ್ಕೆ ಧಕ್ಕೆ ತರುವ ಕೃತ್ಯ ಮಿಲ್ಸ್ ಆವರಣದಲ್ಲಿ ನಡೆಯುತ್ತಿದ್ದು, ಕೂಡಲೇ ಇಲಾಖೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡು ಮಧ್ಯದ ಅಮಲಿನಲ್ಲಿ ಸಾರ್ವಜನಿಕ ರೊಂದಿಗೆ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸುವಂತೆ ಪೊಲೀಸರಿಗೆ ಮಾಡಿ ಕೊಂಡ ಮನವಿಗಳು ನಿಷ್ಪ್ರಯೋಜಕ ವಾಗಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಗೋಕಾಕ ಸಿಪಿಐ ಹಾಗೂ ನಗರ ಠಾಣೆ ಎಸ್‌ಐ ಅವರ ಗಮನಕ್ಕೆ ಫಾಲ್ಸ್ ನಡೆಯುತ್ತಿರುವ ಘಟನೆಗಳ ಕುರಿತು ತಿಳಿಸಿದಾರೂ ಅವರು ನಿರ್ಲಕ್ಷ್ಯತನ ತೊರಿದ್ದಾರೆ. ಅಲ್ಲದೆ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದ ರಕ್ಷಕರೇ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸಲು ಪರೋಕ್ಷವಾಗಿ ಸಮ್ಮತಿಸಿದ್ದಾರೆ. ಗೋಕಾಕ ಫಾಲ್ಸ್ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾ ಗಿದೆ ಎಂದು ಮನವಿಯಲ್ಲಿ ಇದೆ.ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಚುನಾವಣಾ ಸಂದರ್ಭದಲ್ಲಿ ಭಯದ ವಾತಾವರಣ ಸೃಷ್ಟಿಸಿ ಗೋಕಾಕ ಮಿಲ್‌ನ್ನು ಬಂದ್ ಮಾಡಿ ಸಾವಿರಾರು ಕಾರ್ಮಿಕರನ್ನು ಬೀದಿಪಾಲು ಮಾಡುವ ಹುನ್ನಾರವನ್ನು ಬಿಜೆಪಿ ಮುಖಂಡರು ನಡೆಸಿದ್ದಾರೆ. ಇದಕ್ಕೆ ಪೊಲೀಸರು ಪರೋಕ್ಷವಾಗಿ ಸಹಕರಿಸುತ್ತಿದ್ದಾರೆಂದು ಮನವಿಯಲ್ಲಿ ದೂರಲಾಗಿದೆ.ಪೊಲೀಸ್ ಅಧಿಕಾರಿಗಳು ರಾಜ ಕೀಯ ಒತ್ತಾಯಕ್ಕೆ ಮಣಿದು ಅಮಾಯಕರನ್ನು ಬಂಧಿಸುವುದಾಗಲಿ ಹಾಗೂ ಮಿಲ್ ಪ್ರದೇಶದಲ್ಲಿ ಅಶಾಂತಿ ಹರಡಲು ಪ್ರಚೋದನೆ ನೀಡಿದ್ದೇ ಆದರೆ ಮತ್ತೊಮ್ಮೆ ಕೊಣ್ಣೂರ ಹತ್ಯಾಕಾಂಡ ಮರಕಳಿಸುವ ಭೀತಿ ಎದುರಾಗುತ್ತದೆ.ಆದ್ದರಿಂದ ರಾಜಕೀಯ ಪ್ರೇರಿತವಾಗಿ ಅಶಾಂತಿಯುಂಟು ಮಾಡುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಶಿಸ್ತು ಮತ್ತು ಬದ್ಧತೆಗೆ ಒಳಪಡಿಸುವ ಅಗತ್ಯವಿದೆ.ಈ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಕೊಂಡು ದಕ್ಷ ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕೆಂದು ಎಂದು ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.