ಗುರುವಾರ , ಜೂನ್ 17, 2021
21 °C

ಘೋಷಿತ ತಾಲ್ಲೂಕು ರಚನೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಘೋಷಿತ ತಾಲ್ಲೂಕುಗಳ ರಚನೆ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣ­­ಗೊಳಿಸಬೇಕೆಂದು ಒತ್ತಾಯಿಸಿ ಘೋಷಿತ ಹೊಸ ತಾಲ್ಲೂಕುಗಳ ರಚನಾ ಹೋರಾಟ ಸಮಿತಿ ಸದಸ್ಯರು ನಗರದ ಮಲ್ಲೇಶ್ವರದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ 43 ಹೊಸ ತಾಲ್ಲೂಕುಗಳನ್ನು ರಚಿಸು­ವು­­ದಾಗಿ 2013ರ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಅಲ್ಲದೇ ಪ್ರತಿ ತಾಲ್ಲೂಕಿಗೂ ₨ 2 ಕೋಟಿ ಅನುದಾನ ನೀಡುವುದಾಗಿ ಹೇಳಿತ್ತು. ಆದರೆ, ಈವರೆಗೂ ಹೊಸ ತಾಲ್ಲೂಕುಗಳು ರಚನೆಯಾಗಿಲ್ಲ ಎಂದು ಪ್ರತಿಭಟನಾ­ಕಾರರು ದೂರಿದರು.‘ಬಿಜೆಪಿ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಹೊಸ ತಾಲ್ಲೂಕು­ಗಳ ರಚನೆಗೆ ತಡೆಯೊಡ್ಡಿದೆ. ರಾಜ­ಕೀಯ ದುರುದ್ದೇಶದಿಂದ ಈ ವಿಷಯ­ದಲ್ಲಿ ವಿಳಂಬ ಧೋರಣೆ ಅನುಸರಿಸು­ತ್ತಿದೆ’ ಎಂದು ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ್‌ ದೂರಿದರು.‘ಶೀಘ್ರ ತಾಲ್ಲೂಕುಗಳ ರಚನೆ ಮಾಡ­ಬೇಕು. ಇಲ್ಲದಿದ್ದರೆ ಮಾ.15 ರಿಂದ ಘೋಷಿತ ಪ್ರತಿ ತಾಲ್ಲೂಕಿನಲ್ಲೂ ಪ್ರತಿ­ಭ­ಟನೆ ಮಾಡಿ ಸರ್ಕಾರದ ವಿರುದ್ಧ ಜನಾ­ಭಿಪ್ರಾಯ ಮೂಡಿಸುತ್ತೇವೆ. ಲೋಕ­­ಸಭಾ ಚುನಾವಣೆಯ ನಂತರ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ಮಾಡು­ತ್ತೇವೆ’ ಎಂದು ಪ್ರಧಾನ ಕಾರ್ಯ­ದರ್ಶಿ ಬಾರಕೂರು ಸತೀಶ ಪೂಜಾರಿ ಹೇಳಿ­ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.