ಶನಿವಾರ, ಮೇ 8, 2021
23 °C

ಚಂಚಲ್‌ಗುಡ ಜೈಲಿಗೆ ಹಿತೈಷಿಗಳ ದಂಡು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಸಿಬಿಐ ವಿಶೇಷ ನ್ಯಾಯಾಲಯದಿಂದ ಬಂಧನಕ್ಕೊಳಗಾಗಿರುವ ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ.ವಿ. ಶ್ರೀನಿವಾಸ ರೆಡ್ಡಿ ಅವರನ್ನು ಭೇಟಿ ಮಾಡಲು ಬರುವವರಿಗೆ ಅವಕಾಶ ನೀಡುವ ಬಗ್ಗೆ ಯಾವುದೇ ನಿರ್ದಿಷ್ಟ ಆದೇಶ ಇಲ್ಲವಾದ್ದರಿಂದ, ಸಂಬಂಧಿಕರು ಮತ್ತು ಹಿತೈಶಿಗಳು ಚಂಚಲ್‌ಗುಡ ಜೈಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದರೆ ಜೈಲು ಅಧಿಕಾರಿಗಳು ಕೆಲವೇ ಮಂದಿಗೆ ಮಾತ್ರ  ಭೇಟಿಗೆ ಅವಕಾಶ ನೀಡಿ, ಉಳಿದವರನ್ನು ವಾಪಸು ಕಳುಹಿಸುತ್ತಿದ್ದಾರೆ.ಗಾಲಿಯವರ ನಿಕಟ ಸಂಬಂಧಿ ಪಣ್ಯಂ ಶಾಸಕ ಕಟಸಾನಿ ರಾಂಭೂಪಾಲ್ ರೆಡ್ಡಿ ಅವರಿಗೆ ಭೇಟಿಗೆ ಅನುಮತಿ ನೀಡಲಾಯಿತು. `ನಾವು ಸಂಬಂಧಿಕರು. ಅವರು ತೊಂದರೆಯಲ್ಲಿರುವಾಗ ಅವರನ್ನು ನೋಡುವುದು ನನ್ನ ಕರ್ತವ~್ಯ ಎಂದು ರಾಂಭೂಪಾಲ್ ರೆಡ್ಡಿ ಹೇಳಿದರು.`ಇದಕ್ಕೆ ಯಾವುದೇ ಕಥೆ ಕಟ್ಟಬೇಡಿ. ಈ ಭೇಟಿಗೆ ಯಾವುದೇ ರಾಜಕೀಯ ಉದ್ದೇಶವಿಲ್ಲ~ ಎಂದೂ ಅವರು ಮಾಧ್ಯಮದವರನ್ನು ಕೋರಿದರು. ಕರ್ನಾಟಕದ ಮಾಜಿ ಸಚಿವರ ಆರೋಗ್ಯದ ಬಗ್ಗೆ ಕೇಳಿದಾಗ, ಅವರು ಆರೋಗ್ಯವಾಗಿದ್ದಾರೆ ಎಂದರು.ಗಾಲಿಯವರ ಮತ್ತೊಬ್ಬ ನಂಬಿಕಸ್ಥ ರಾಯದುರ್ಗಂ ಶಾಸಕ ಕಾಪು ರಾಮಚಂದ್ರ ರೆಡ್ಡಿ ಅವರಿಗೆ ಜೈಲಿನ ಅಧಿಕಾರಿಗಳು ಭೇಟಿ ಅವಕಾಶ ನೀಡಲಿಲ್ಲ. ಇವರು ವೈ.ಎಸ್. ಜಗನ್ಮೋಹನ ರೆಡ್ಡಿ ಪಾಳಯದ ಶಾಸಕ. ಅಕ್ರಮ ಗಣಿಗಾರಿಕೆಯಲ್ಲಿ ಇವರ ಪಾತ್ರವೂ ಇರುವ ಆರೋಪದ ಮೇಲೆ ಅವರ ಬಂಧನಕ್ಕೆ ಸಿಬಿಐ ಎಲ್ಲಾ ಸಿದ್ದತೆ ನಡೆಸಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.ಅದೇ ರೀತಿ ಶ್ರೀನಿವಾಸ ರೆಡ್ಡಿ ಅವರ ಸಹೋದರ ಕೂಡಾ ಜೈಲಿನ ಅಧಿಕಾರಿಗಳ ಮನವೊಲಿಸುವಲ್ಲಿ ಭೇಟಿಗೆ ಅನುಮತಿ ಪಡೆಯುವಲ್ಲಿ ವಿಫಲವಾಗಿದ್ದಾರೆ.ಗಾಲಿ ಅವರ ವಕೀಲ ಜಿ.ವಿ. ನರಸಿಂಹ ರೆಡ್ಡಿ ತಮ್ಮ ಕಕ್ಷಿದಾರನ ಬಳಿ ಸಾಕಷ್ಟು ಹೊತ್ತು ಚರ್ಚಿಸಿದರು. ಆದರೆ ಏನು ಮಾತುಕತೆ ನಡೆಯಿತೆಂಬ ಬಗ್ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.ಗಾಲಿ ಮತ್ತು ಶ್ರೀನಿವಾಸ ರೆಡ್ಡಿಯವರ ಆರೋಗ್ಯ ತಪಾಸಣೆ ಮಾಡಿದ್ದು ಇಬ್ಬರೂ ದೈಹಿಕವಾಗಿ ಆರೋಗ್ಯವಾಗಿದ್ದಾರೆ. ಭಾವೋದ್ವೇಗಕ್ಕೆ ಒಳಗಾಗಿರುವ ಯಾವ ಚಿಹ್ನೆಗಳೂ ಅವರಲ್ಲಿ ಕಂಡುಬಂದಿಲ್ಲ ಎಂದು  ಜೈಲಿನ ಅರೋಗ್ಯಾಧಿಕಾರಿ ಡಾ. ರಾಮನ್ ತಿಳಿಸಿದ್ದಾರೆ.ಇಬ್ಬರೂ ಆರೋಪಿಗಳು ನಿಯಮದ ಪ್ರಕಾರ ತೆಗೆದುಕೊಳ್ಳಬಹುದಾದ ಆಹಾರದ ಜತೆಗೆ ಬ್ರೆಡ್ ಮತ್ತು ಹಣ್ಣು ಸೇವಿಸಿದ್ದಾರೆ. ಗಾಲಿ ಅವರಿಗೆ ಸಣ್ಣ ಪ್ರಮಾಣದಲ್ಲಿ ತಲೆನೋವು ಇದ್ದದ್ದರಿಂದ ಇಬ್ಬರನ್ನೂ ಮಂಗಳವಾರ ಬೇರೆ ಕೊಠಡಿಗೆ ಸ್ಥಳಾಂತರಿಸಲಿಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.