ಉಡುಪಿ: ಬಾಲ್ಯದಲ್ಲಿ ಚಂದ್ರಯಾನದ ಕನಸನ್ನು ಕಂಡ ತಮಗೆ ಗುರಿಯತ್ತ ಪಯಣಿಸಲು ಉಡುಪಿ ಸೌತ್ ಕೆನರಾ ಕಾಸರಗೋಡು ದ್ರಾವಿಡ ಬ್ರಾಹ್ಮಣ ಎಜುಕೇಶನ್ ಸೊಸೈಟಿಯೇ ಕಾರಣ ಎಂಬ ಹೆಮ್ಮೆ ತಮ್ಮದಾಗಿದೆ ಎಂದು ಬಾಹ್ಯಾಕಾಶ ವಿಜ್ಞಾನಿ, ಇಸ್ರೊದ ಮಾಜಿ ಉಪನಿರ್ದೇಶಕ ಡಾ. ಸುಧಾಕರ್ ರಾವ್ ಇಲ್ಲಿ ಹೇಳಿದರು.

ಇತ್ತೀಚೆಗೆ ನಡೆದ ಯುಎಸ್ಕೆಡಿಬಿ ಎಜುಕೇಶನ್ ಸೊಸೈಟಿಯ ಸುವರ್ಣಮಹೋತ್ಸವದಲ್ಲಿ `ಸುವರ್ಣ ಸಂಭ್ರಮ~ ನೆನಪಿನ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಚಂದ್ರಲೋಕಕ್ಕೆ ಸ್ವತಃ ಹೋಗಲು ಸಾಧ್ಯವಾಗದಿದ್ದರೂ ಚಂದ್ರಲೋಕಕ್ಕೊಯ್ಯುವ ಸ್ವದೇಶಿ ನಿರ್ಮಿತ ಉಪಗ್ರಹ ಉಡಾವಣಾ ವಾಹಕಗಳನ್ನು ಸಂಶೋಧಿಸಿ ತಯಾರಿಸುವಲ್ಲಿ ತಾವು ಯಶಸ್ವಿಯಾಗಿರುವುದನ್ನು ಅವರು ಸ್ಮರಿಸಿಕೊಂಡರು. 18 ಉಡಾವಣಾ ವಾಹನಗಳನ್ನು ಯಶಸ್ವಿಯಾಗಿ ಅಂತರಿಕ್ಷಕ್ಕೆ ಕಳುಹಿಸಿದ್ದೇವೆ. ಅದಕ್ಕೆ ಪ್ರೇರಣೆ, ಪೋಷಣೆ ಈ ಸಂಸ್ಥೆ ಎಂದರು.

ಸಂಸ್ಥೆ ಅಧ್ಯಕ್ಷ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ವಿವಿಧ ವಿದ್ಯಾರ್ಥಿ ವೇತನಗಳನ್ನು ವಿತರಿಸಿದರು. ಸಂಸ್ಥೆ ಸುವರ್ಣ ಯೋಜನೆಗಳಾದ ಅಂತರ್ಜಾಲ ತಾಣ ಹಾಗೂ ಇ- ಲರ್ನಿಂಗ್ ಸೆಂಟರ್ಗೆ ಕರ್ಣಾಟಕ ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ಜಯರಾಮ ಹಂದೆ ಚಾಲನೆ ನೀಡಿದರು. ಡಾ. ಟಿ.ಎಂ.ಎ. ಪೈ ಕಾಲೇಜ್ ಆಫ್ ಎಜ್ಯುಕೇಶನ್ನ ಪ್ರಾಂಶುಪಾಲ ಡಾ. ಮಹಾಬಲೇಶ್ವರ ರಾವ್ ಸಂಸ್ಮರಣಾ ಭಾಷಣಗೈದು ಸಂಸ್ಥೆಯ ಸಂಸ್ಥಾಪಕ ವಿಬುಧೇಶ ತೀರ್ಥರ ಬದುಕು ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸ್ವಾಮೀಜಿಗಳ ಸಾಧನೆ ಕುರಿತು ಮಾತನಾಡಿದರು.

ಸಂಸ್ಥೆ ಉಪಾಧ್ಯಕ್ಷ ಪ್ರೊ. ಶ್ರೀಶ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ಯು.ಕೆ. ರಾಘವೇಂದ್ರ ರಾವ್, ಬೈಕಾಡಿ ಶ್ರೀನಿವಾಸ ರಾವ್, ಪ್ರೊ. ರಾಧಾಕಷ್ಣ ಆಚಾರ್ಯ, ಕೆ.ಎಸ್. ಸುಬ್ರಹ್ಮಣ್ಯ ಬಾಸ್ರಿ , ಪ್ರೊ. ಕೆ. ಸದಾಶಿವ ರಾವ್ ಇದ್ದರು.

ಆರೋಪಿ ಬಂಧನ
ಉಡುಪಿ: ಇತ್ತೀಚೆಗೆ ಮಂಗಳಾ ಎಕ್ಸ್ಪ್ರೆಸ್ ರೈಲಿನ ಮೂಲಕ ಗೋವಾದಿಂದ ಕೇರಳಕ್ಕೆ ಅಕ್ರಮವಾಗಿ 107 ಲೀಟರ್ ಗೋವಾಮದ್ಯ ಸಾಗಿಸುತ್ತಿದ್ದ ಆರೋಪಿ ಕೇರಳದ ಇಡುಕ್ಕಿ ಜಿಲ್ಲೆಯ ಕೆ.ಮುರಳೀಧರನ್ ಎಂಬ ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಈ ಹಿಂದೆ ಮಂಗಳೂರಿನಲ್ಲಿ ಅಕ್ರಮ ಗೋವಾಮದ್ಯಕ್ಕೆ ಸಂಬಂಧಿಸಿದಂತೆ ಎರಡು ಮೊಕದ್ದಮೆಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.