ಶುಕ್ರವಾರ, ಮೇ 7, 2021
26 °C

ಚನ್ನಕೇಶವ ರಥೋತ್ಸವಕ್ಕೆ ಭರದ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಲೂರು: ಅಡ್ಡೆಗಾರರು ಉತ್ಸವಗಳಿಗೆ ಹಾಕಿದ್ದ ಬಹಿಷ್ಕಾರ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಚನ್ನಕೇಶವಸ್ವಾಮಿ ರಥೋತ್ಸವ ಉತ್ಸವದ ಸಿದ್ಧತೆಗಳು ನಿರಾತಂಕವಾಗಿ ನಡೆದವು.ವಾಡಿಕೆಯಂತೆ ಅಡ್ಡೆಗಾರರನ್ನು ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ನೇಮಕ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಸಮಿತಿಯಿಂದ ಕೈಬಿಟ್ಟಿದ್ದರಿಂದ ಉತ್ಸವಕ್ಕೆ ಬಹಿಷ್ಕಾರ ಹಾಕಿದ್ದರು.ಜಿಲ್ಲಾಡಳಿತದ ಮನವೊಲಿಕೆ ನಂತರ ಅಡ್ಡೆಗಾರರು ಮಾರ್ಚ್ 31ರವರೆಗೆ ಕಾಲಾವಕಾಶ ನೀಡಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಆದರೆ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಜಾತ್ರೆ ಅವಧಿಗೆ ಮಾತ್ರ ಅಡ್ಡೆಗಾರರನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಿಸಿದ್ದು, ಇದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು.ಶನಿವಾರ ಉತ್ಸವಕ್ಕೆ ಬಹಿಷ್ಕಾರ ಹಾಕಿದ ಹಿನ್ನೆಲೆಯಲ್ಲಿ ಬೆಳಿಗ್ಗೆ ನಡೆಯಬೇಕಿದ್ದ ಉತ್ಸವದ ಕಾರ್ಯಗಳು ವಿಳಂಭವಾಗಿ ನಡೆದವು.ಈ ಘಟನೆಯಿಂದ ಆಕ್ರೋಶಗೊಂಡ ಶಾಸಕ ವೈ.ಎನ್.ರುದ್ರೇಶ್‌ಗೌಡ, ಧಾರ್ಮಿಕದತ್ತಿ ಇಲಾಖೆಯ ಆಯುಕ್ತರ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಸಮಿತಿಯ ಅವಧಿ ಇರುವವರೆಗೆ ಅಡ್ಡೆಗಾರರನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಿಸುವಂತೆ ಆಗ್ರಹಿಸಿದರು.ಕೊನೆಗೆ ಶಾಸಕರ ಒತ್ತಡಕ್ಕೆ ಮಣಿದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು, ಮುಜರಾಯಿ ಖಾತೆ ಹೊಂದಿರುವ ಮುಖ್ಯಮಂತ್ರಿಗಳ ಸಹಿ ಪಡೆದು ಅಡ್ಡೆಗಾರರ ಪೈಕಿ ಬಿ.ಆರ್.ವೆಂಕಟೇಗೌಡ ಮತ್ತು ಶೈಲೇಶ್(ಶ್ರೀನಿವಾಸ್) ಅವರನ್ನು ಚನ್ನಕೇಶವ ದೇವಾಲಯದ ವ್ಯವಸ್ಥಾಪನಾ ಸಮಿತಿ ಇರುವವರೆಗೆ ವಿಶೇಷ ಆಹ್ವಾನಿತರಾಗಿ ಎಲ್ಲಾ ಸಭೆಗಳಿಗೆ ಆಹ್ವಾನಿಸುವಂತೆ ಆದೇಶ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.