ಗುರುವಾರ , ಮೇ 13, 2021
16 °C

ಚನ್ನಗಿರಿ: ಮಳೆ ಕೊರತೆ; ಬಾಡುತ್ತಿರುವ ಬೆಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ತಾಲ್ಲೂಕಿನ ಹಲವು ಭಾಗಗಳಲ್ಲಿ ಒಂದು ವಾರದಿಂದ ಮಳೆ ಕ್ಷೀಣಿಸಿರುವುದರಿಂದ ರೈತರು `ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ~ ಎಂದು ಹಲುಬುವಂತಾಗಿದೆ.ಮೋಡವಾಗುತ್ತದೆ ಮಳೆ ಬರುತ್ತಿಲ್ಲ. ಜತೆಗೆ, ಬೇಸಿಗೆಯ ಬಿಸಿಲಿನಂತೆ ಬಿಸಿಲು. ಈ ಕಾರಣದಿಂದ ಬೆಳೆಗಳು ಬಾಡಲು ಆರಂಭಿಸಿವೆ. ಮೆಕ್ಕೆಜೋಳ, ರಾಗಿ, ಹತ್ತಿ, ಶೇಂಗಾ, ಹೈಬ್ರೀಡ್ ಜೋಳ ಮುಂತಾದ ಬೆಳೆಗಳು ಕಾಳುಕಟ್ಟಲು ಪ್ರಾರಂಭಿಸಿದ್ದು, ಈ ಸಮಯದಲ್ಲಿ  ಕಾಳು ದೃಢವಾಗಲು ಮಳೆಯ ಅಗತ್ಯತೆ ಇದೆ. ಇನ್ನು ಮೂರ‌್ನಾಲ್ಕು ದಿನಗಳಲ್ಲಿ ಮಳೆ ಬಾರದೇ ಇದ್ದರೆ ಬೆಳೆದು ನಿಂತ ಬೆಳೆಗಳು ಒಣಗಿ ಹೋಗುವ ಸಂಭವ ಇದೆ. ಒಟ್ಟಾರೆ ಈ ಬಾರಿ ಮಳೆಯ ಕೊರತೆಯಿಂದ ಶೇ. 25ರಷ್ಟು ಇಳುವರಿ ಕಡಿಮೆಯಾಗುವ ಸ್ಪಷ್ಟ ಲಕ್ಷಣಗಳು ಕಂಡು ಬರುತ್ತಿದೆ.ತಾಲ್ಲೂಕಿನ ಕಸಬಾ, ಸಂತೇಬೆನ್ನೂರು, ಬಸವಾಪಟ್ಟಣ ಹೋಬಳಿಗಳಲ್ಲಿ ಮಳೆಯ ಕೊರತೆ ಉಂಟಾಗಿದೆ. ಉಬ್ರಾಣಿ ಹೋಬಳಿಯಲ್ಲಿ ಒಂದಿಷ್ಟು ಬೆಳೆಗಳು ಚೆನ್ನಾಗಿವೆ. ಆಗಾಗ ಈ ಹೋಬಳಿಯಲ್ಲಿ ತುಂತುರು ಮಳೆ ಬೀಳುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.