ಅವರೆ ಸಾರು
ಈ ಚಳಿಗಾಲ ಅವರೆ ಕಾಳಿನ ಕಾಲ. ಬೇಯಿಸಿ ಹಿಚುಕಿದ ಅವರೆ ಕಾಳಿನ ಸಾರು ಸವಿಯದಿದ್ದರೆ ಅದು ಚಳಿಗಾಲವೇ ಅಲ್ಲ. ಬೆಂದ ಕಾಳಿನ ಹಾಲು ಹೀರುವ ಸವಿ ಚಪ್ಪರಿಸಿದವರಿಗೇ ಗೊತ್ತು.

ಬೇಕಿರುವ ಸಾಮಗ್ರಿ:  ೧ ಕಪ್ ಬೇಯಿಸಿ ಹಿತಕಿದ ಅವರೆ ಕಾಳು, ೨ ಈರುಳ್ಳಿ, ೫ ರಿಂದ ೬ ಎಸಳು ಬೆಳ್ಳುಳ್ಳಿ, ೨ ಟೊಮೆಟೊ, ಕೊತ್ತಂಬರಿ ಸೊಪ್ಪು, ಶುಂಠಿ, ಚಕ್ಕೆ, ಲವಂಗ, ಕಾಲು ಬಟ್ಟಲು ಕಾಯಿತುರಿ, ದನಿಯಾ ಪುಡಿ, ಅಚ್ಚ ಖಾರದ ಪುಡಿ, ಚಿಟಿಕೆ ಅರಿಶಿಣ ಪುಡಿ, ಉಪ್ಪು.

ಮಾಡುವ ವಿಧಾನ: ಮೊದಲಿಗೆ ಶುಂಠಿ, ಈರುಳ್ಳಿ, ಟೊಮೆಟೊ, ಚಕ್ಕೆ, ಲವಂಗ, ಕೊತ್ತಂಬರಿ ಸೊಪ್ಪು, ದನಿಯಾ ಪುಡಿ, ಅಚ್ಚ ಖಾರದ ಪುಡಿ, ಅರಿಶಿಣ ಪುಡಿ, ಎಲ್ಲವನ್ನು ರುಬ್ಬಿಕೊಳ್ಳಿ.

ಕಾದ ಪಾತ್ರೆಯಲ್ಲಿ ಎಣ್ಣೆ ಹಾಕಿ, ರುಬ್ಬಿದ ಮಸಾಲೆಯನ್ನು ಹಸಿ ವಾಸನೆ ಹೋಗುವವರೆಗೂ ಚೆನ್ನಾಗಿ ಹುರಿಯಿರಿ. ನಂತರ ಅದಕ್ಕೆ ಹಿತಕಿದ ಅವರೆ ಬೇಳೆ ಹಾಕಿ ಚೆನ್ನಾಗಿ ಬಾಡಿಸಿ. ಅದಕ್ಕೆ ಸ್ವಲ್ಪ ನೀರು ಮತ್ತು ರುಬ್ಬಿದ ತೆಂಗಿನ ಕಾಯಿತುರಿ ಸೇರಿಸಿ ಕುದಿಸಿದರೆ ಅವರೆಕಾಯಿ ಸಾರು ಸಿದ್ಧ.

ಬಿಸಿಬಿಸಿಯಾದ ಮುದ್ದೆ ಮತ್ತು ರೊಟ್ಟಿಯೊಂದಿಗೆ ಸವಿಯುವುದೇ ಚಳಿಗಾಲದ ಸುಖ.

ಕೋಳಿ ಸಾರು
ಬೇಕಿರುವ ಸಾಮಗ್ರಿ: ಒಂದು ಕೆ.ಜಿ. ನಾಟಿಕೋಳಿ ಮಾಂಸ, ಅರ್ಧ ಹೋಳು ತೆಂಗಿನಕಾಯಿ ತುರಿ, ಚಕ್ಕೆ, ಲವಂಗ, ಸಾಂಬಾರ್ ಪುಡಿ, ಉಪ್ಪು ಅರಿಶಿಣ, ಈರುಳ್ಳಿ, ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ: ತೆಂಗಿನ ಕಾಯಿ ತುರಿಗೆ ಚಕ್ಕೆ, ಲವಂಗ ಸೇರಿಸಿ ರುಬ್ಬಿಟ್ಟುಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ, ಹೆಚ್ಚಿಟ್ಟ ಈರುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ. ಹುರಿದ ಈರುಳ್ಳಿಗೆ ನಾಟಿ ಕೋಳಿ ಮಾಂಸ, ಅರಿಶಿಣ ಹಾಕಿ ಬೇಯಿಸಿ. ಮಾಂಸ ಅರೆಬೆಂದು ನೀರು ಬಿಟ್ಟಾಗ ಸಾಂಬಾರ್ ಪುಡಿ ಸೇರಿಸಿ. ಸಾಂಬಾರ್ ಪುಡಿ ಮತ್ತು ಮಾಂಸ ಎರಡೂ ಒಂದಕ್ಕೊಂದು ಬೆರೆತು ನೀರು ಬಿಡಲಾರಂಭಿಸಿದಾಗ ರುಬ್ಬಿಟ್ಟ ಮಸಾಲೆಯನ್ನೂ ಸೇರಿಸಿ. ಮಾಂಸ ಬೇಯುವವರೆಗೂ ಈ ಮಸಾಲೆ ಹಾಗೂ ಸಾರು ಒಂದೆಡೆ ಬೆರೆಯುತ್ತದೆ. ಮಾಂಸ ಮತ್ತು ಮಸಾಲೆಯ ಘಮ, ಮನೆ ತಲೆಬಾಗಿಲವರೆಗೂ ಹರಡಿದಾಗ ನಾಟಿಕೋಳಿ ಸಾರು ಸಿದ್ಧ ಎಂತಲೇ ಅರ್ಥ. ಬಿಸಿ ಮುದ್ದೆಯೊಂದಿಗೆ, ಚಪಾತಿಯೊಂದಿಗೂ ಸವಿಯಬಹುದು.

ಮೊಟ್ಟೆ ಸಾರು
ಮಾಂಸವುಣ್ಣದವರಿಗಾಗಿ ಹಾಗೂ ಮಕ್ಕಳಿಗಾಗಿಯೇ ಈ ದಿಢೀರ್ ಮೊಟ್ಟೆ ಸಾರು ಸಿದ್ಧಪಡಿಸಬಹುದು. ರಾತ್ರಿ ಚಳಿಗಾಳಿಯಲ್ಲಿ ಬಿಸಿ ಮೊಟ್ಟೆ ಸಾರು ಸವಿದು ಮಲಗಿದರೆ ಕಫ ಸರಾಗವಾದೀತು. ಕಟ್ಟಿದ ಮೂಗು ಸರಳವಾದೀತು.

ಬೇಕಿರುವ ಸಾಮಗ್ರಿ: ಆರು ಬೇಯಿಸಿದ ಮೊಟ್ಟೆ, ಈರುಳ್ಳಿ, ಅರ್ಧ ಕಪ್ ತೆಂಗಿನಕಾಯಿ ತುರಿ, ಶುಂಠಿ ಒಂದೆರಡಂಗುಲ, ಬೆಳ್ಳುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು, ಅರಿಶಿಣ ಪುಡಿ, ಉಪ್ಪು, ದನಿಯಾ ಪುಡಿ

ಮಾಡುವ ವಿಧಾನ: ತೆಂಗಿನಕಾಯಿ ತುರಿಗೆ ಕೊತ್ತಂಬರಿ ಸೊಪ್ಪು, ಟೊಮೆಟೊ, ದನಿಯಾ ಪುಡಿ, ಬೆಳ್ಳುಳ್ಳಿ, ಶುಂಠಿ ಎಲ್ಲವನ್ನೂ ಹಾಕಿ ರುಬ್ಬಿಟ್ಟುಕೊಳ್ಳಿ. ನಂತರ ಬಾಣಲೆಗೆ ಈರುಳ್ಳಿ, ಹಸಿಮೆಣಸನ್ನು ಹಾಕಿ ಬೇಯಿಸಿಕೊಳ್ಳಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದಾಗ ಬೇಯಿಸಿದ ಮೊಟ್ಟೆಗಳನ್ನು ನಾಲ್ಕು ಸಮಭಾಗಗಳಾಗಿ ಕತ್ತರಿಸಿ, ಅವನ್ನೂ ಒಗ್ಗರಣೆಗೆ ಸೇರಿಸಿ. ನಂತರ ರುಬ್ಬಿಟ್ಟ ಮಸಾಲೆಯನ್ನು ಈ ಒಗ್ಗರಣೆಗೆ ಹಾಕಿ ಕಾಲುಗಂಟೆಯಷ್ಟು ಬೇಯಿಸಿ. ಹಸಿವಾಸನೆ ಬೆಂದು, ಮೊಟ್ಟೆಯ ಘಮ ಹಸಿವು ಕೆರಳಿಸುವ ಹೊತ್ತಿಗೆ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.