ಶುಕ್ರವಾರ, ಮೇ 7, 2021
19 °C

ಚಳ್ಳಕೆರೆ ಪುರಸಭೆ: ಅವಿಶ್ವಾಸ ನಿರ್ಣಯಕ್ಕೆ ಸೋಲು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ಇಲ್ಲಿನ ಪುರಸಭಾ ಉಪಾಧ್ಯಕ್ಷೆ ಕೆ.ಜೆ. ಶೋಭಾ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಒಂದು ಮತದ ಅಂತರದಲ್ಲಿ ಸೋಲುಂಟಾದ ಕಾರಣ ಕೆ.ಜೆ. ಶೋಭಾ ಉಪಾಧ್ಯಕ್ಷೆಯಾಗಿ ಮುಂದುವರಿಯುವ ಅವಕಾಶ ಪಡೆದಿದ್ದಾರೆಸೋಮವಾರ ಅಧ್ಯಕ್ಷೆ ಪಿ. ಶಂಷಾದ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವಿಶ್ವಾಸ ಮಂಡನೆ ಪ್ರಕ್ರಿಯೆಯನ್ನು ನಡೆಸಲಾಯಿತು. ಅಧ್ಯಕ್ಷೆ ಶಂಷಾದ್ ಅವರು ಸಭೆ ಕರೆಯಲು ವಿಫಲವಾಗಿರುವುದರಿಂದ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಬಾರದು ಎಂದು ಪುರಸಭೆ ಮಾಜಿ ಅಧ್ಯಕ್ಷ ಸಿ. ವೀರಭದ್ರಬಾಬು ಆಕ್ಷೇಪ ವ್ಯಕ್ತಪಡಿಸಿದಾಗ ಮುಖ್ಯಾಧಿಕಾರಿ ರಾಮಾಯ್ಯ ಸಮಾಧಾನಪಡಿಸಿ ಸಭೆ ಮುಂದುವರಿಸಿದರು.ಅವಿಶ್ವಾಸದ ಪರ ಕಾಂಗ್ರೆಸ್‌ನ 15 ಜೆಡಿಎಸ್‌ನ 4 ಸೇರಿದಂತೆ ಒಟ್ಟು 19 ಸದಸ್ಯರು ಕೈ ಎತ್ತು ಮೂಲಕ ಮತ ಚಲಾಯಿಸಿದರು. ಅವಿಶ್ವಾಸದ ವಿರುದ್ಧ ಹಾಲಿ ಅಧ್ಯಕ್ಷೆ ಕಾಂಗ್ರೆಸ್‌ನಪಿ. ಶಂಷಾದ್, ಚೇತನ್‌ಕುಮಾರ್, ಜೆಡಿಎಸ್‌ನ ಶೋಭಾ, ಭೋರಮ್ಮ, ಜಯಮ್ಮ, ಬಿಜೆಪಿಯ ನಾಗರಾಜ್, ಪಾರ್ವತಮ್ಮ ಮಂಡೀಮಠ್, ಪಕ್ಷೇತರ ಸದಸ್ಯ ಎಸ್. ಜಯಣ್ಣ, ಶಾಸಕ ತಿಪ್ಪೇಸ್ವಾಮಿ, ಸಂಸದ ಜನಾರ್ದನ ಸ್ವಾಮಿ ಸೇರಿದಂತೆ 10 ಜನ ಸದಸ್ಯರು ಮತ ಚಲಾಯಿಸಿದರು.ಪುರಸಭೆಯ ನಿಯಮಾವಳಿಗಳ ಪ್ರಕಾರ 3ನೇ 2ರಷ್ಟು ಸದಸ್ಯರು ಅವಿಶ್ವಾಸದ ಪರ ಮತಚಲಾಯಿಸಿದ್ದರೆ ಮಾತ್ರ ಉಪಾಧ್ಯಕ್ಷರು ಪದಚ್ಯುತರಾಗುತ್ತಿದ್ದರು. ಆದರೆ, ಈ ಮ್ಯಾಜಿಕ್ ಸಂಖ್ಯೆ 20 ತಲುಪಲು1 ಮತದ ಕೊರತೆ ಉಂಟಾಗಿ ಸೋಲು ಉಂಟಾಯಿತು.ಅಧ್ಯಕ್ಷೆ ಶಂಷಾದ್ ಕಾಂಗ್ರೆಸ್ ಸದಸ್ಯೆ, ಉಪಾಧ್ಯಕ್ಷೆ ಕೆ.ಜೆ. ಶೋಭಾ ಜೆಡಿಎಸ್ ಸದಸ್ಯೆ. ಪುರಸಭೆಯ ಒಟ್ಟು 27 ಸದಸ್ಯರಲ್ಲಿ ಬಿಜೆಪಿ ಸದಸ್ಯರಿರುವುದು ಕೇವಲ ಇಬ್ಬರು ಮಾತ್ರ.  ಚಳ್ಳಕೆರೆಯ ಪುರಸಭೆಗೆ  ಅವಿಶ್ವಾಸ ಮಂಡನೆ ಸಭೆಗಳಿಗೆ ಸಂಸದರು ಮತ್ತು ಶಾಸಕರು ಈಗಾಗಲೇ ಮೂರುಬಾರಿ ಬಂದು ಮತ ಚಲಾಯಿಸಿದ್ದಾರೆ.ಮೂರು ಪಕ್ಷಗಳಿಗೆ ಇದು ಪ್ರತಿಷ್ಠೆಯ ವಿಷಯವಾಗಿದ್ದರಿಂದ ಡಿವೈಎಸ್‌ಪಿ ಹನುಮಂತರಾಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.