ಚವಡಿಹಾಳ: ಕುಡಿಯುವ ನೀರಿಗೆ ತತ್ವಾರ

ಇಂಡಿ: ತಾಲ್ಲೂಕಿನ ಚವಡಿಹಾಳ ಗ್ರಾಮ ದಲ್ಲಿ ನೀರು ಸರಬರಾಜು ಮಾಡುವ ಕೊಳವೆ ಬಾವಿಯ ಮೋಟಾರ್ ಸುಟ್ಟುಹೋದ ಕಾರಣ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.
‘ಪ್ರತಿ ದಿವಸ ಇದೊಂದೇ ಕೊಳವೆ ಬಾವಿಯಿಂದ ನೀರು ಪೂರೈಸಲಾ ಗುತ್ತಿತ್ತು. ಇದೀಗ ಮೋಟಾರ್ ಸುಟ್ಟಿರುವ ಕಾರಣ ಗ್ರಾಮದ ಜನತೆಗೆ ಸಮಸ್ಯೆಯಾಗಿದೆ’ ಎಂದು ಗ್ರಾಮದ ಜ್ಯೋತಿ ದಶವಂತ ದೂರಿದರು.
ಗ್ರಾಮದ ನಿವಾಸಿ ರಮೇಶಗೌಡ ಬಿರಾದಾರ ಅವರು ತಮ್ಮ ಸ್ವಂತಕ್ಕೆ ಒಂದು ಕೊಳವೆ ಬಾವಿ ತೋಡಿಸಿದ್ದಾರೆ. ಅದರಲ್ಲಿ ಸ್ವಲ್ಪಮಟ್ಟಿಗೆ ನೀರಿದೆ. ಅದನ್ನೇ ಅವರು ಗ್ರಾಮದ ಜನಕ್ಕೆ ನೀಡುತ್ತಿದ್ದಾರೆ. ವಿದ್ಯುತ್ ಸಮಸ್ಯೆಯಾದರೆ ಒಂದು ಹನಿ ನೀರು ಸಿಗುವದಿಲ್ಲ. ಹೀಗಾಗಿ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು’ ಎಂದು ಶಕೀನಾ ಚೌಧರಿ ಮನವಿ ಮಾಡಿದರು.
ಈ ಕೂಡಲೇ ವಿದ್ಯುತ್ ಮೋಟಾರ್ ರಿಪೇರಿ ಮಾಡದಿದ್ದರೆ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಗ್ರಾಮದ ಮಹಿಳೆಯರಾದ ತಾರಾಬಾಯಿ ದಶ ವಂತ, ಜ್ಯೋತಿ ತೊಂಡಿಕಟ್ಟಿ, ಭಾರತಿ ತೊಂಡಿಕಟ್ಟಿ, ಜ್ಯೋತಿ ದಶವಂತ, ಕುಸುಮಾ ದಶವಂತ, ಸುಮಕ್ಕ ದಶ ವಂತ, ತಾರಾ ದಶವಂತ,ಸಂಗೀತಾ ದಶ ವಂತ, ಯಮನವ್ವ ದಶವಂತ, ರೇಣುಕಾ ದಶವಂತ, ಸಚಿನ್ ಲಾಳಸಂಗಿ, ಮಾನಂದಾ ಬಿರಾದಾರ, ಸಚಿನ್ ಮಿರ್ಜಿ, ಅಶೋಕ ತಮಶೆಟ್ಟಿ ಮುಂತಾದವರು ಎಚ್ಚರಿಸಿದರು.
ಕುಡಿಯುವ ನೀರಿಗಾಗಿ ಪ್ರತಿಭಟನೆ: ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದಲ್ಲಿ ಕಳೆದ 20 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಕೂಡಲೇ ನೀರು ಸರಬರಾಜು ಮಾಡಬೇಕು’ ಎಂದು ಆಗ್ರಹಿಸಿ ಮಹಿಳೆಯರು ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯ್ತಿ ಎದುರು ಧರಣಿ ನಡೆಸಿದರು.
‘ಗ್ರಾಮದಿಂದ ದೂರದ ತೋಟದ ಬಾವಿಗಳಿಗೆ ತೆರಳಿ ಕುಡಿಯುವ ನೀರು ತರಬೇಕಾಗಿದೆ. ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸ ದಿದ್ದರೆ ತಹಶೀಲ್ದಾರ್ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಧರಣಿ ನಿರತರು ಸುಮಾರು 2 ಗಂಟೆ ಕಾಲ ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಜಡಿದರು. ಸುದ್ದಿ ತಿಳಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಧರಣಿ ನಿರತರಿಗೆ ದೂರವಾಣಿ ಮೂಲಕ ಕರೆ ಮಾಡಿ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದಾಗಿ ಭರವಸೆ ನೀಡಿದ ನಂತರ ಸತ್ಯಾಗ್ರಹ ವಾಪಸ್ ಪಡೆದುಕೊಳ್ಳಲಾಯಿತು.
ಬಸವರಾಜ ಪಾಟೀಲ, ಸಿದ್ಧಾರೂಢ ಬಿರಾದಾರ, ಮಾಳಪ್ಪ ಪೂಜಾರಿ, ಚಿದಾನಂದ ಸಾಗರ, ಬಾಬುಲಾಲ್ ಕಾರಬಾರಿ, ಜೆಟ್ಟೆಪ್ಪ ಬಗಲಿ, ರಮೇಶ ಬಗಲಿ, ನಾಗೇಶ ಕಾಂಬಳೆ, ಅಪ್ಪಾರಾಯ ಕೊಟ್ಟಲಗಿ, ಮಾಲಾಬಾಯಿ ಕಾಂಬಳೆ, ಮರೆಪ್ಪ ಹರಿಜನ, ಪ್ರಭಾವತಿ ವಾಲಿಕಾರ, ಮನೋಹರ ಶಿಂಧೆ, ಸರೂಬಾಯಿ ಗುಡ್ಲ್, ಬಶೀರ್ ಜಮಾದಾರ, ಗೌರಮ್ಮ ಬಗಲಿ, ಸುಗಲವ್ವ ಹಂಜಗಿ, ಹನುಮಂತ ಬಗಲಿ, ಶಾಹಿದ್ ತಾಂಬೆ, ಮಾಳವ್ವ ಹರಿಜನ ಇತರರು ಇದ್ದರು.
ಮುಖ್ಯಾಂಶಗಳು
* ಊರಿಗೆ ಇರುವುದೊಂದೇ ಕೊಳವೆ ಬಾವಿ
* ಬೋರೆವೆಲ್ನಿಂದಲೇ ನೀರು ಪೂರೈಕೆ
* ಜೀವಜಲಕ್ಕಾಗಿ ಗ್ರಾಮಸ್ಥರ ಪರದಾಟದ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.