ದಾವಣಗೆರೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಒತ್ತಾಯಕ್ಕೆ ಕೊನೆಗೂ ಮಣಿದ ಎಪಿಎಂಸಿ, ಚಿಕ್ಕನಹಳ್ಳಿ ಹೊಸ ಬಡಾವಣೆಯ ಸ್ಥಳವನ್ನು ದಲಿತ ಕುಟುಂಬಗಳಿಗೆ ನೀಡಲು ಮರು ನಿರ್ಣಯ ಅಂಗೀಕರಿಸಿತು.

ಚಿಕ್ಕನಹಳ್ಳಿ ಹೊಸ ಬಡಾವಣೆಯಲ್ಲಿ ಈಚೆಗೆ ಬೆಂಕಿ ಆಕಸ್ಮಿಕಕ್ಕೆ 274 ಗುಡಿಸಲು ಭಸ್ಮವಾದ ನಂತರ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ಅದಕ್ಕೆ ಅಡ್ಡಗಾಲು ಹಾಕಿರುವ ಎಪಿಎಂಸಿ ಕೋರ್ಟ್ನಲ್ಲಿ ಹೂಡಿರುವ ದಾವೆ ಹಿಂದಕ್ಕೆ ಪಡೆಯಬೇಕು. 2010ರಲ್ಲಿ ಅಂದಿನ ಆಡಳಿತ ಅಂಗೀಕರಿಸಿದ ನಿರ್ಣಯದಂತೆ ನಿವೇಶನವನ್ನು ನಿವಾಸಿಗಳಿಗೆ ನೀಡಬೇಕು ಎಂದು ಒತ್ತಾಯಿಸಿ ಡಿಎಸ್ಎಸ್ (ಪ್ರೊ.ಎಚ್. ಕೃಷ್ಣಪ್ಪ ಬಣ) ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಎಪಿಎಂಸಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

1997ರಲ್ಲಿ ಹಳೇ ಚಿಕ್ಕನಹಳ್ಳಿ ಬಡಾವಣೆ ಎಪಿಎಂಸಿ ಆವರಣದಲ್ಲಿ ಇದ್ದು ವರ್ತಕರ ಬೇಡಿಕೆಯ ಮೇರೆಗೆ ಈಗಿರುವ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. 15 ವರ್ಷಗಳ ಅವಧಿಯಲ್ಲಿ ಚಿಕ್ಕನಹಳ್ಳಿ ಬಡಾವಣೆಯಲ್ಲಿ ಜನಸಂಖ್ಯೆ ಮಿತಿಮೀರಿದ ಪರಿಣಾಮ ಹೊಸ ಬಡಾವಣೆಯಲ್ಲಿನ ಖಾಲಿ ಜಮೀನಿನಲ್ಲಿ 270ಕ್ಕೂ ಹೆಚ್ಚು ಕುಟುಂಬಗಳು ವಾಸಿಸಲು ಆರಂಭಿಸಿದವು.

2010ರಲ್ಲಿ ಅಂದು ಎಪಿಎಂಸಿ ಅಧ್ಯಕ್ಷರಾಗಿದ್ದ ಬಿ. ನಾಗೇಶ್ವರರಾವ್ ನೇತೃತ್ವದಲ್ಲಿ ನಿರ್ಣಯ ಅಂಗೀಕರಿಸಿ, ಅಲ್ಲಿನ ನಿವಾಸಿಗಳಿಗೆ ನೀಡಲು ತಿರ್ಮಾನಿಸಲಾಗಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದ ಹೊಸ ಆಡಳಿತ ಈ ಸಂಬಂಧ ಕೋರ್ಟ್ ಮೆಟ್ಟಿಲೇರಿತು. ಮೊಕದ್ದಮೆ ಕೂಡಲೇ ಹಿಂದಕ್ಕೆ ಪಡೆಬೇಕು ಎಂದು ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಆಲೂರು ನಿಂಗರಾಜ್ ಆಗ್ರಹಿಸಿದರು.

2010ರಲ್ಲಿ ಕೈಗೊಂಡ ನಿರ್ಣಯದಂತೆ ಮರು ನಿರ್ಣಯ ಅಂಗೀಕರಿಸಬೇಕು. ಅಲ್ಲಿ ವಾಸಿಸುವ ಎಲ್ಲರಿಗೂ ಹಕ್ಕುಪತ್ರ ನೀಡಲು ಸಹಕರಿಸಬೇಕು. ಕೋರ್ಟ್ ಪ್ರಕರಣ ವಾಪಸ್ ಪಡೆಯಬೇಕು. ಹೊಸ ಬಡಾವಣೆಯಲ್ಲಿ ರಸ್ತೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಪಟ್ಟುಹಿಡಿದರು.

ಅಧ್ಯಕ್ಷ ಎಂ. ಬಸವರಾಜಯ್ಯ, ಉಪಾಧ್ಯಕ್ಷ ಎ.ಎಸ್. ಶಿವಕುಮಾರ್, ಕಾರ್ಯದರ್ಶಿ ಆರ್.ಎಂ. ಪಾಟೀಲ್ ನೇತೃತ್ವದಲ್ಲಿ ಎಪಿಎಂಸಿ ತುರ್ತು ಸಭೆ ಸೇರಿತು. ಈ ಸಂದರ್ಭದಲ್ಲಿ ಸಭೆಯ ಒಳಗೆ ನುಗ್ಗಲು ಯತ್ನಿಸಿದ ದಲಿತ ಮುಖಂಡರು ಹಾಗೂ ಜೆಡಿಎಸ್ ನಾಯಕರನ್ನು ಪೊಲೀಸರು ತಡೆದರು.

ಕೆಲ ಸಮಯ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು. ಕೊನೆಗೆ, ದಲಿತ ಮುಖಂಡರಾದ ಆಲೂರು ನಿಂಗರಾಜ್, ಕುಂದುವಾಡ ಮಂಜುನಾಥ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಟಿ. ದಾಸಕರಿಯಪ್ಪ, ಬಿ.ಎಂ. ಸತೀಶ್, ನಾಗೇಶ್ವರರಾವ್ ಅವರನ್ನು ಒಳಗೆ ಬಿಡಲಾಯಿತು.

ಹಿಂದಿನ ಸಭೆಯಲ್ಲಿ ಆದ ನಿರ್ಣಯದ ಬಗ್ಗೆ, ಹಾಗೂ ವಿವಾದಿತ ನಿವೇಶನದ ಸ್ಥಿತಿಗತಿಗಳ ಮನವರಿಕೆ ಮಾಡಿಕೊಟ್ಟರು. ಕೊನೆಗೂ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಎಪಿಎಂಸಿ ಹಿಂದಿನ ನಿರ್ಣಯ ಅಂಗೀಕರಿಸಿ, ಕೋರ್ಟ್ನಲ್ಲಿರುವ ಪ್ರಕರಣ ವಾಪಸ್ ಪಡೆಯಲು ಒಪ್ಪಿಗೆ ಸೂಚಿಸಿತು.

ದಲಿತ ಮುಖಂಡರಾದ ಹೆಗ್ಗೆರೆ ರಂಗಪ್ಪ, ದುರ್ಗಪ್ಪ, ಅಂಜಿನಪ್ಪ, ಬಾತಿ ಶಿವು, ಮಂಜು, ವಾಸು, ಆಲೂರು ನಾಗಪ್ಪ, ಚಿಕ್ಕನಹಳ್ಳಿ ಹನುಮಂತಪ್ಪ, ಶಕೀರಾಬಾನು, ರೇಣುಕಮ್ಮ, ಕಾವಲುಹಳ್ಳಿ ಹನುಮಂತಪ್ಪ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

`ಬರೀ ನಿರ್ಣಯ ಅಂಗೀಕರಿಸಿದರೆ ಸಾಲದು, ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡು ಎಲ್ಲರಿಗೂ ಹಕ್ಕುಪತ್ರ ನೀಡುವ ಜತೆಗೆ, ಬಡಾವಣೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಕೆಲ ಸಮಯ ಈಗಿರುವ ಗಂಜಿಕೇಂದ್ರ ಮುಂದುವರಿಸಬೇಕು. ಇಲ್ಲದಿದ್ದರೆ ಮತ್ತೆ ಹೋರಾಟ ನಡೆಸಲಾಗುವುದು ಎಂದು ನಿಂಗರಾಜ್ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.