ಶುಕ್ರವಾರ, ಜುಲೈ 30, 2021
28 °C

ಚಿಕ್ಕಪ್ಪ ಜಾಫರ್ ಜೊತೆಗೆ 14ರ ಹರೆಯದ ಅರ್ಮನ್‌ಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ವಾಸೀಮ್ ಜಾಫರ್ ಅವರ ಅಣ್ಣನ ಪುತ್ರ 14ರ ಹರೆಯದ ಅರ್ಮನ್ ಜಾಫರ್ ಮುಂಬರುವ ರಣಜಿ ಟ್ರೋಫಿ  ಕ್ರಿಕೆಟ್ ಟೂರ್ನಿಗೆ ಪ್ರಕಟಿಸಲಾಗಿರುವ ಮುಂಬೈ ತಂಡದ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬೈ ಆಯ್ಕೆ ಸಮಿತಿಯ ಈ ನಿರ್ಧಾರ ಕುತೂಹಲಕ್ಕೆ ಕಾರಣವಾಗಿದೆ.ಈ ತಂಡದಲ್ಲಿ ವಾಸೀಮ್ ಕೂಡ ಇದ್ದಾರೆ. ಅಂತಿಮ ತಂಡದಲ್ಲಿ ಸ್ಥಾನ ಲಭಿಸಿದರೆ ಜಾಫರ್ ಹಾಗೂ ಅರ್ಮನ್ ಇಬ್ಬರೂ ಒಟ್ಟಿಗೆ ಒಂದೇ ತಂಡದಲ್ಲಿ ಆಡಲು  ಅವಕಾಶ ಪಡೆಯಲಿದ್ದಾರೆ. ಸಚಿನ್ ತೆಂಡೂಲ್ಕರ್ ಸಹ ಈ ತಂಡದಲ್ಲಿದ್ದಾರೆ. ಚಿಕ್ಕಪ್ಪ ವಾಸೀಮ್ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್   ಜೊತೆಗೆ ಅಭ್ಯಾಸ ನಡೆಸುವುದು ಅರ್ಮನ್ ಪಾಲಿಗೆ ಜೀವಮಾನದ ಅತ್ಯುತ್ತಮ ಅವಕಾಶ ಎನಿಸಲಿದೆ.

ಸ್ಥಳೀಯ ಟೂರ್ನಿಯೊಂದರಲ್ಲಿ ಅರ್ಮನ್ ಫೆಬ್ರುವರಿಯಲ್ಲಿ 473 ರನ್ ಗಳಿಸಿ ಗಮನ ಸೆಳೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.