ಭಾನುವಾರ, ಮೇ 9, 2021
17 °C

ಚಿಗುರು: ಸಾಧಕರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಗುರು: ಸಾಧಕರಿಗೆ ಸನ್ಮಾನ

ನೆಲಮಂಗಲ:  ಚನ್ನಾದೇವಿ ಅಗ್ರಹಾರ ಗ್ರಾಮದ ಚಿಗುರು ಸ್ವಸಸಹಾಯ ಸಂಘದ 7ನೇ ವಾರ್ಷಿಕೋತ್ಸವದ ಪ್ರಯುಕ್ತ ಕೃಷಿ ಮತ್ತು ರಂಗಭೂಮಿಯ ಸಾಧಕರಿಗೆ, ಗ್ರಾಮದ ಹಿರಿಯರಿಗೆ, ಪ್ರೌಢಶಾಲೆಯ ಪ್ರತಿಭಾವಂತರಿಗೆ ಸನ್ಮಾನ ಮಂಗಳವಾರ ನಡೆಯಿತು.ಜನಪದ ವಿದ್ವಾಂಸ ಡಾ.ಟಿ.ಗೋವಿಂದರಾಜು ಸನ್ಮಾನಿಸಿ, `ಗ್ರಾಮೀಣ ಭಾರತದ ಪುನರ್‌ನಿರ್ಮಾಣಕ್ಕೆ ಗ್ರಾಮಗಳು ಸಶಕ್ತವಾಗುವ ಯೋಜನೆಯನ್ನು ರೂಪಿಸುವ ಅಗತ್ಯವಿದೆ. ಚನ್ನಾದೇವಿ ಅಗ್ರಹಾರ ಗ್ರಾಮದ ಯುವಕರು ಕೃಷಿ ಮತ್ತು ಪಶುಪಾಲನೆಯತ್ತ ಮುಖ ಮಾಡಿರುವುದು ಆರೋಗ್ಯಕರ ಬೆಳವಣಿಗೆ' ಎಂದರು.ನಗರದ ಭುವನೇಶ್ವರಿ ಲಯನ್ಸ್ ಸಂಸ್ಥೆ ಅಧ್ಯಕ್ಷೆ ಸಿ.ನರಸಿಂಹಲು ರೆಡ್ಡಿ ಪಶುಪಾಲನಾ ಸಾಧಕರನ್ನು ಸನ್ಮಾನಿಸಿದರು. ಲಯನ್ ನರಸಿಂಹಯ್ಯ ಗಿಡ ನೆಟ್ಟು ಸಭೆ ಉದ್ಘಾಟಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.