ಒಬ್ಬ ಪಾದದಿಂದ ಚೆಂಡನ್ನು ಆಡಿಸುತ್ತಾ ದೇಹವನ್ನು ಇಷ್ಟಬಂದಂತೆ ಬಾಗಿಸುತ್ತಾ ಕಸರತ್ತು ಮಾಡಿದರೆ, ಮತ್ತೊಬ್ಬ ಮೂತಿ ಮೇಲೆ ಬಾಟಲ್ ಇಟ್ಟುಕೊಂಡು ಅದರ ಮೇಲೆ ಚೆಂಡನ್ನು ಇರಿಸಿ ಬೀಳದಂತೆ ನಿಗಾ ವಹಿಸಿ ಚಪ್ಪಾಳೆ ಗಿಟ್ಟಿಸಿದ. ದೇಹವನ್ನು ಗಾಳಿಯಷ್ಟೇ ಸಲೀಸಾಗಿ ಆಡಿಸಬಹುದು ಎಂಬಂತೆ ಜಿಗಿದ, ನೆಗೆದ ಹುಡುಗರೂ ಅಲ್ಲಿದ್ದರು. ಶುಕ್ರವಾರ (ಜುಲೈ 19) ಸ್ಪೋರ್ಟ್ಸ್ ಮೆಂಟಾರ್ ಹಾಗೂ ಅಸೋಸಿಯೇಷನ್ ಆಫ್ ಸ್ಕೂಲ್ಸ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ಎಎಸ್ಐಎಸ್ಸಿ) `ರೆಸ್ಪೆಕ್ಟ್ 2013' ಎಂಬ ಟೂರ್ನಿಯನ್ನು ಪ್ರಾರಂಭಿಸಿದವು. ದೇಶದ ವಿವಿಧೆಡೆಯ 110 ಶಾಲೆಗಳ 4,300 ವಿದ್ಯಾರ್ಥಿಗಳು ಎಂಟು ಕ್ರೀಡೆ, ಸ್ಪರ್ಧೆಗಳಲ್ಲಿ ಪ್ರಶಸ್ತಿಗಾಗಿ ಸೆಣೆಸಲಿದ್ದಾರೆ. ಭಾರತದ 19 ವರ್ಷದೊಳಗಿನವರ ಕ್ರಿಕೆಟ್ ತಂಡದ ನಾಯಕ ಉನ್ಮುಕ್ತ್ ಚಾಂದ್ ಕಂಠೀರವ ಕ್ರೀಡಾಂಗಣದಲ್ಲಿ ಟೂರ್ನಿಯನ್ನು ಉದ್ಘಾಟಿಸಿದರು. ಮಾಜಿ ಅಥ್ಲೀಟ್ ಅಶ್ವಿನಿ ನಾಚಪ್ಪ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಕ್ಕೆ ಸಾಕ್ಷಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.