ಭಾನುವಾರ, ಮೇ 9, 2021
20 °C

ಚಿನ್ನದ ಬೆಲೆ ರೂ 325 ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಏರಿಕೆ ನಡೆಗೆ ತಡೆ ಹಾಕಿ, ಎರಡು ದಿನದಲ್ಲಿ ನಡೆದ ವಹಿವಾಟಿನಲ್ಲಿ ಚಿನ್ನ ಪ್ರತಿ 10 ಗ್ರಾಂಗೆ ರೂ 325 ಹಾಗೂ ಬೆಳ್ಳಿ ಪ್ರತಿ ಕೆಜಿಗೆ ರೂ 490 ಕುಸಿತ ಕಂಡಿದೆ.ಇದರಿಂದಾಗಿ ದೆಹಲಿ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ ಗ್ರಾಂಗೆ ರೂ 28,190, ಬೆಳ್ಳಿ ಪ್ರತಿ ಕೆಜಿಗೆ ರೂ 44,200 ದರ ಇದೆ. ಸ್ಟ್ಯಾಂಡರ್ಡ್ ಮತ್ತು ಅಪರಂಜಿ ಎರಡರಲ್ಲು ಬೆಲೆ ಸಮ ಪ್ರಮಾಣದಲ್ಲಿ ಇಳಿಕೆಯಾಗಿದೆ.ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳಿಂದ ಬೆಲೆ ಇಳಿಮುಖದಲ್ಲಿ ಇತ್ತಾದರೂ, ರಾಷ್ಟ್ರದಲ್ಲಿ ಮಾತ್ರ ಬೆಲೆ ಏರು ಮುಖದಲ್ಲೇ ಇತ್ತು.ವಿಶ್ವ ಮಾರುಕ್ಟಟೆಯಲ್ಲಿ ಬೆಲೆ ಇಳಿಮುಖದಲ್ಲಿ ಇರುವುದರಿಂದ ರಾಷ್ಟ್ರದಲ್ಲಿ ಏರುಗತಿಯಲ್ಲಿರುವ ಚಿನ್ನ, ಬೆಳ್ಳಿಯ ಬೆಲೆ ನಿಯಂತ್ರಣಕ್ಕೆ ರಿಸರ್ವ ಬ್ಯಾಂಕ್ ಕ್ರಮ ಕೈಗೊಳ್ಳಬಹುದು ಎಂಬ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಮುಖವಾಗಲು ಕಾರಣ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.