ಸೋಮವಾರ, ಮೇ 10, 2021
21 °C
ಎಫ್‌ಐಎಚ್ ವಿಶ್ವ ಹಾಕಿ ಲೀಗ್

ಚಿಲಿ ವಿರುದ್ಧ ಭಾರತಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಟರ್‌ಡಮ್ (ಪಿಟಿಐ):  ಸತತ ಸೋಲುಗಳಿಂದ ಕಂಗೆಟ್ಟಿದ್ದ ಭಾರತ ಮಹಿಳಾ ತಂಡಕ್ಕೆ ಇಲ್ಲಿ ನಡೆಯುತ್ತಿರುವ ಎಫ್‌ಐಎಚ್ ವಿಶ್ವ ಹಾಕಿ ಲೀಗ್ ರೌಂಡ್-3     ಟೂರ್ನಿಯ ಮಹಿಳೆಯರ ವಿಭಾಗದ ಪ್ಲೇಆಫ್ ಪಂದ್ಯದಲ್ಲಿ ಚಿಲಿ ವಿರುದ್ಧ ಶನಿವಾರ ಪ್ರಯಾಸದ ಗೆಲುವು ಲಭಿಸಿದೆ.

 

  ಈ ಮೂಲಕ ಭಾರತ ಏಳನೇ ಸ್ಥಾನದೊಂದಿಗೆ ಟೂರ್ನಿಯಲ್ಲಿ ತನ್ನ ವ್ಯವಹಾರ ಕೊನೆಗೊಳಿಸಿದೆ. 12ನೇ ಕ್ರಮಾಂಕ ಹೊಂದಿರುವ ಭಾರತ, 2-1 ಗೋಲುಗಳಿಂದ ಚಿಲಿ (18ನೇ ಕ್ರಮಾಂಕ) ಎದುರು ಜಯ ದಾಖಲಿಸಿದೆ. ಕ್ಯಾಮಿಲಾ ಕೆರಮ್ (44ನೇ ನಿ.) ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಬಾರಿಸುವ ಮೂಲಕ ಚಿಲಿ ತಂಡಕ್ಕೆ 1-0 ಮುನ್ನಡೆ ಒದಗಿಸಿದರು. ಇದಾದ ಕೇವಲ ಮೂರು ನಿಮಿಷಗಳ ನಂತರ ರಿತುಶಾ ಕುಮಾರಿ ಆರ್ಯಾ ತಂದಿತ್ತ ಗೋಲಿನಿಂದ ಭಾರತ 1-1ರಲ್ಲಿ ಸಮಬಲ ಸಾಧಿಸಿತು.ಉಭಯ ತಂಡಗಳಿಗೂ ಹಲವು ಗೋಲುಗಳನ್ನು ಗಳಿಸಲು ಅವಕಾಶವಿತ್ತು. ಆದರೆ, ಭಾರತದ ಆಟಗಾರ್ತಿಯರ ಇದರ ಪ್ರಯೋಜನ ಪಡೆಯುವಲ್ಲಿ ಯಶ ಕಂಡು, ತಂಡದ ಗೆಲುವನ್ನು ಸುಲಭ ಮಾಡಿದರು. ಈ ಟೂರ್ನಿಯ ಆರಂಭದಿಂದಲೂ ರಿತು ರಾಣಿ ಪಡೆ ಕಳಪೆ ಪ್ರದರ್ಶನ ತೋರಿತ್ತು. ಆದರೆ, ಈ ಪಂದ್ಯದಲ್ಲಿ ಹಿಂದಿನ ಪಂದ್ಯದಲ್ಲಾದ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಿತು.ಚಂಚನ್ ದೇವಿ ಥೊಕ್‌ಚೊಮ್ 56ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 2-1ಕ್ಕೆ ಹೆಚ್ಚಿಸಿ ಗೆಲುವಿನ ರೂವಾರಿ ಎನಿಸಿದರು. ಸಮಬಲ ಸಾಧಿಸಲು ಚಿಲಿ ತಂಡಕ್ಕೆ ಪಂದ್ಯದ ಕೊನೆಯ ಕ್ಷಣಗಳಲ್ಲಿ ಕೆಲವು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿದ್ದವು. ಆದರೆ ಅವುಗಳಲ್ಲಿ ಒಂದೇ ಒಂದು ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು.ಐದನೇ ಸ್ಥಾನಕ್ಕೆ ಹಣಾಹಣಿ: ಟೂರ್ನಿಯ ಪುರುಷರ ವಿಭಾಗದಲ್ಲಿ ಐದನೇ ಸ್ಥಾನಕ್ಕಾಗಿ ಭಾನುವಾರ ನಡೆಯಲಿರುವ ಪ್ಲೇಆಫ್ ಪಂದ್ಯದಲ್ಲಿ ಭಾರತ ಹಾಗೂ ಸ್ಪೇನ್ ಸೆಣಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.