ಹುಬ್ಬಳ್ಳಿ: ಚೀನಾದ ಕುಂಗ್ಫೂ, ಬೋಟಿಂಗ್, ಸರ್ಕಸ್ಸಿಗೂ, ಅಲ್ಲಿಗೆ `ಕೃಷಿ ಅಧ್ಯಯನ ಪ್ರವಾಸ~ ತೆರಳಿದ ರಾಜ್ಯದ ರೈತರಿಗೂ ಎತ್ತಣಿಂದೆತ್ತ ಸಂಬಂಧವೋ?! ಆದರೆ, ಮೊನ್ನೆಯಷ್ಟೇ ಚೀನಾಕ್ಕೆ ತೆರಳಿದ ರಾಜ್ಯ ರೈತರ ತಂಡ ಪ್ರವಾಸದ ಮೂಲ ಉದ್ದೇಶಕ್ಕಿಂತಲೂ `ಅನಿವಾರ್ಯ~ವಾಗಿ ಈ ಮೂರನ್ನೂ ವೀಕ್ಷಿಸಿ- ಅನುಭವಿಸಿ ಕೈಯಲ್ಲಿದ್ದ ಒಂದಷ್ಟು ಹಣ ಕಳೆದುಕೊಂಡು ಬಂದಿದೆ!

`ಹೌದು. 74 ಮಂದಿ ರೈತರು, ಆರು ಅಧಿಕಾರಿಗಳು (ಈ ಪೈಕಿ ನಾಲ್ವರು ಮಹಿಳೆಯರು. ಅದರಲ್ಲೂ ಒಬ್ಬಾಕೆ ಶೀಘ್ರ ಲಿಪಿಗಾರರು!) ಸೇರಿ ಒಟ್ಟು 80 ಮಂದಿಯ 5ನೇ ತಂಡದ ಐದು ಹಗಲು ನಾಲ್ಕು ರಾತ್ರಿಯ ಚೀನಾ ಪ್ರವಾಸ, `ಕೆರೆ ದಂಡೆ ಮೇಲೆ ನಿಲ್ಲಿಸಿ ಕುದುರೆಗೆ ನೀರು ತೋರಿಸಿದಂತಾಗಿದೆ~ ಎಂದು ತಂಡದಲ್ಲಿದ್ದ ರೈತ ನವಲಗುಂದ ತಾಲ್ಲೂಕಿನ ಬಸವನಗೌಡ ಮುದಿಗೌಡ ಹನಸಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

`ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾರ್ಚ್ 30ರಂದು ಬೆಳ್ಳಂಬೆಳಿಗ್ಗೆ ಚೀನಾ ವಿಮಾನವೇರಿದ್ದ ನಮ್ಮ ತಂಡ, ಹಾಂಕಾಂಗ್ ಮೂಲಕ ಶಾಂಘಾಯ್ ತಲುಪಿ ಆ ದಿನ ಅಲ್ಲಿನ ವಸತಿಗೃಹದಲ್ಲಿ ವಿಶ್ರಾಂತಿ ಪಡೆದಿತ್ತು. ಜೊತೆಗಿದ್ದ ಅಧಿಕಾರಿಗಳು ನಮ್ಮಂತೆ ಮೊದಲ ಬಾರಿ ಚೀನಾ ಪ್ರವಾಸ ಬಂದಿದ್ದರು.

ಪ್ರವಾಸ ಉಸ್ತುವಾರಿ ವಹಿಸಿದ್ದ ಬೆಂಗಳೂರಿನ ಆಸ್ಕಾನ್ ಟ್ರಾವೆಲ್ಸ್ನ ಸಿಬ್ಬಂದಿ ಮತ್ತು ಇಬ್ಬರು ಗೈಡ್ಗಳೇ ಎಲ್ಲದಕ್ಕೂ ಮಾರ್ಗದರ್ಶಿ. ಮರುದಿನ ಎರಡು ಬಸ್ಗಳಲ್ಲಿ ಸನ್ ಕ್ರಿಯಾ ಮಾಡರ್ನ್ ಟೆಕ್ ಫಾರ್ಮ್, ಕೃಷಿ ಮಾರುಕಟ್ಟೆ ಮತ್ತು ಮಿತ ನೀರಾವರಿ ತಂತ್ರಜ್ಞಾನವನ್ನು ಅವಸರವಸರವಾಗಿ ವೀಕ್ಷಿಸಿದೆವು. ಬಳಿಕ ಪ್ರವಾಸ ಪಟ್ಟಿಯ್ಲ್ಲಲಿಲ್ಲದ `ಸರ್ಕಸ್~ ತೋರಿಸಲಾಯಿತು!~ ಎಂದರು.

`ಏ.1ರಂದು ಪ್ರವಾಸದ ಮುಖ್ಯ ಉದ್ದೇಶವಾಗಿದ್ದ ಹಣ್ಣು ಮತ್ತು ತರಕಾರಿ ಸಗಟು ಮಾರುಕಟ್ಟೆ, ರೇಷ್ಮೆ ವಸ್ತು ಸಂಗ್ರಹಾಲಯ ಮತ್ತು ಅಲ್ಲಿನ ನಾನ್ಜಿಂಗ್ ಬೀದಿಗೆ ಹೋಗಬೇಕಿತ್ತು. ಆದರೆ ಶಾಂಘಾಯ್ನಲ್ಲಿ ಶಾಪಿಂಗ್ಗಾಗಿ ಸಮಯ ವ್ಯಯಿಸಲಾಯಿತು.

ಅಲ್ಲದೆ ಪ್ರವಾಸದ ಭಾಗವಾಗಿರದ `ಬೋಟಿಂಗ್~ಗೆ ತೆರಳುವಂತೆ ಸೂಚಿಸಲಾಯಿತು. ಆದರೆ ನನ್ನನ್ನೂ ಸೇರಿ 20 ಮಂದಿ ಅದಕ್ಕೆ ಸಮ್ಮತಿಸಲಿಲ್ಲ. ಮರುದಿನ ಅಲ್ಲಿಂದ ಹೊರಟು ಬೀಜಿಂಗ್ಗೆ ಬಂದೆವು. ಅಲ್ಲಿ ಯಾವುದೇ ಅಧ್ಯಯನ ಇರಲಿಲ್ಲ. ಬದಲು ಅಲ್ಲಿನ `ನಕಲಿ~ ಮಾರುಕಟ್ಟೆಗೆ ಕರೆದೊಯ್ಯಲಾಯಿತು.

ಅಲ್ಲದೆ ಅಂದು ಬೆಳಿಗ್ಗೆ 7.30ರಿಂದ ರಾತ್ರಿ 10.30ರವರೆಗೆ ಬಹುತೇಕ ಸಮಯ `ಪ್ರಯಾಣ~ದಲ್ಲೇ ಕಳೆದುದರಿಂದ ನಿತ್ಯಕರ್ಮಕ್ಕೂ ವಿಶ್ರಾಂತಿ ನೀಡಲಿಲ್ಲ. ಅಷ್ಟೇ ಅಲ್ಲ, ಕುಂಗ್ಫೂ ನೋಡಲು ತಿಳಿಸಲಾಯಿತು. ಆದರೆ ಸರ್ಕಸ್ ಮತ್ತು ಬೋಟಿಂಗ್ಗೆ ತಾವೇ ಟಿಕೇಟ್ ಖರೀದಿಸಿ ಸುಸ್ತಾಗಿದ್ದ ರೈತರು, ಕುಂಗ್ಫೂ ವೀಕ್ಷಣೆಗೆ ಒಪ್ಪಲಿಲ್ಲ~ ಎಂದರು.

`ಏ. 3ರಂದು ಬೀಜಿಂಗ್ನಲ್ಲಿ ಬೆಳಿಗ್ಗೆಯೇ ಕೊಠಡಿ ತೆರವುಗೊಳಿಸಿ ಅಲ್ಲಿನ ಪಚ್ಚೆಕಲ್ಲು ವಸ್ತು ಸಂಗ್ರಹಾಲಯ, ಜುಯಾಂಗ್ ಪಾಸಿನಲ್ಲಿ ಚೀನಾ ಮಹಾಗೋಡೆ ವೀಕ್ಷಿಸಬೇಕಿತ್ತು. ಆದರೆ ಕೊಠಡಿಯ ಧೋಬಿಖಾನೆ, ಪೇ ಚಾನೆಲ್, ದೂರವಾಣಿ ಕರೆ, ಮದ್ಯ ಮತ್ತು ಇತರೆ ಪಾನೀಯ ಮತ್ತಿತರ ಸೌಲಭ್ಯಗಳನ್ನು ಬಳಸಿಕೊಂಡರೆ ಹೆಚ್ಚುವರಿ ಹಣವನ್ನು ತಾವೇ ನೀಡಬೇಕು ಎಂಬ ಅರಿವಿಲ್ಲದ ಕೆಲವು ರೈತರು, ಇತರೆ ಸೌಲಭ್ಯ ಬಳಸಿದ್ದಕ್ಕಾಗಿ 2 ಸಾವಿರ ರೂಪಾಯಿಯಷ್ಟು ಹಣ ಪಾವತಿಸಬೇಕಾಯಿತು. ಈ ಪ್ರಕ್ರಿಯೆ ಮುಗಿಯಲು ಎರಡು ಗಂಟೆ ತಗುಲಿದ್ದರಿಂದ ಅಂದಿನ ಕಾರ್ಯಕ್ರಮ ಅಸ್ತವ್ಯಸ್ತವಾಗಿತ್ತು. ಅಂದು ಚೀನಾ ಗೋಡೆವರೆಗೆ ಬಸ್ಸಿನಲ್ಲಿ ತೆರಳಿದ ಸಮಾಧಾನ ಬಿಟ್ಟರೆ ಅದನ್ನು ವೀಕ್ಷಿಸುವ ಭಾಗ್ಯ ದಕ್ಕಲಿಲ್ಲ~ ಎಂದರು.

`ಬೆಂಗಳೂರಿನ ಆಸ್ಕಾನ್ ಟ್ರಾವೆಲ್ಸ್ ಮತ್ತು ಗೈಡ್ಗಳು ತಮಗಿಷ್ಟ ಬಂದಲ್ಲಿಗೆ ಕರೆದುಕೊಂಡು ಹೋಗಿ ರೈತರನ್ನು ಸುಲಿಗೆ ಮಾಡಿದ್ದಾರೆ. ಜೊತೆಗಿದ್ದ ಸರ್ಕಾರಿ ಅಧಿಕಾರಿಗಳಿಗೆ ಯಾವುದೇ ಹಿಡಿತ ಇರಲಿಲ್ಲ. ಹಣ ಲೂಟಿ ಮಾಡುವ ಉದ್ದೇಶದಿಂದಲೇ ರೈತರಿಗೆ ಸರ್ಕಸ್, ಬೋಟಿಂಗ್, ಕುಂಗ್ಫೂ ತೋರಿಸಲಾಯಿತು~ ಎಂದು ದೂರಿದರು.

`ಸರ್... ನಾನು ನಾಕನೆತ್ತ ಓದೇನಿ. ಗೈಡ್ಗೋಳು ಇಂಗ್ಲಿಷ್ನ್ಯಾಗ ಒದರಿದ್ರ ನಂಗೆಲ್ಲಿ ಅರ್ಥ ಆಗ್ಬೇಕು? ಜೊತೆಗಿ ಬಂದ ಅಧಿಕಾರಿಗಳೂ ಸುಮ್ಮನ... ಇದ್ರು. ಸರ್ಕಸ್ ನೋಡಾಕ ಹನ್ಯಾಡ್ನೂರು ರೂಪಾಯಿ, ಬೋಟಿಂಗಿಗೆ ಅಂತ್ಹೇಳಿ 800 ರೂಪಾಯಿ ನಮ್ಮ ಕೈಯಿಂದ ಖರ್ಚ್ ಆತ್ರಿ. ಅದಕ್ಕ.. ನಮಗ ಕುಂಗ್ಫೂ ಬ್ಯಾಡ, ಕೃಷಿ ಪ್ರದೇಶ ತೋರಸ್ರಿ ಅಂತ ನಾವು ಒಂದಿಷ್ಟ ಮಂದಿ ಹಠಕ್ಕ ಬಿದ್ವಿವ್ರಿ. ಹಂಗಾ...ಗಿ ಕುಂಗ್ಫೂ ಕೈಬಿಟ್ರು.

ಒಟ್ಟಿನ್ಯಾಗ ಹೊಸಾ ಜಾಗ ನೋಡಿದ್ವಿ ಅನ್ನೋದ್ ಬಿಟ್ರ ನಮಗೇನೂ ಬ್ಯಾರೆ ಲಾಭ ಆಗಿಲಿಲ್ಲರಿ...~ ಎಂದರು ಹುಬ್ಬಳ್ಳಿಯ ರೈತ ವಿರೂಪಾಕ್ಷ ನಿಂಗಪ್ಪ ಮೊರಬ. `ಸರ್ಕಾರದ ಆದೇಶ ಏನ್ ಬಂದೈತಿ ಅದನ್ನಷ್ಟ ಅಧಿಕಾರಿಗೋಳು ಮಾಡ್ಯಾರ್ರಿ. ಈ ಪ್ರವಾಸಾ ಗಿವಾಸಾ ಎಲ್ಲಾ `ನಾಮ್ಕೆ ವಾಸ್ತೆ~ ಎನ್ನುತ್ತಾರೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ರೈತ ವೆಂಕಾಜಿ ನಾಯಕ ಪಾಟೀಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.