ಸೋಮವಾರ, ಜೂನ್ 1, 2020
27 °C

ಚೀನಾದಲ್ಲಿ ನೌಕೆ ಮುಳುಗಿ 400 ಮಂದಿ ಸಾವು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌ (ಪಿಟಿಐ): ದಕ್ಷಿಣ ಚೀನಾದ ಯಂಗ್ಟಿಜ್‌ ನದಿಯಲ್ಲಿ ಕುಂಭದ್ರೋಣ ಮಳೆ ಮತ್ತು ಬಿರುಗಾಳಿಗೆ ಸಿಲುಕಿ ಸೋಮವಾರ ರಾತ್ರಿ ಪ್ರವಾಸಿ ನೌಕೆಯೊಂದು ಮುಳುಗಿದ್ದು ಘಟನೆಯಲ್ಲಿ 400 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಪ್ರವಾಸಿಗರಿಂದ ತುಂಬಿದ್ದ ಈ ನೌಕೆಯು ಪೂರ್ವ ಚೀನಾದ ನನ್‌ಜಿಂಗ್‌ ನಗರದಿಂದ ಆಗ್ನೇಯ ಚೀನಾದ ಚಾಂಗ್‌ಜಿಂಗ್‌ ನಗರಕ್ಕೆ   ಹೊರಟಿತ್ತು. ಹುಬೈ ಪ್ರಾಂತ್ಯದ ಜಿಯನ್ಲಿ ಸಮೀಪ ಬಂದಾಗ ಭಾರಿ ಮಳೆ  ಮತ್ತು ಗಾಳಿ ಪ್ರಾರಂಭವಾಯಿತು. ನಿಯಂತ್ರಣ  ಕಳೆದುಕೊಂಡ ನೌಕೆ ತಲೆಕೆಳಗಾಗಿ ನದಿಯಲ್ಲಿ ಮುಳುಗಿತು ಎಂದು  ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ತಿಳಿಸಿರುವುದಾಗಿ ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.ನೌಕೆಯಲ್ಲಿದ್ದ  ಒಟ್ಟು 458 ಪ್ರಯಾಣಿಕರಿದ್ದರು.  ಇವರಲ್ಲಿ ಹೆಚ್ಚಿನವರು 50 ರಿಂದ 80 ವರ್ಷದೊಳಗಿನವರು. ನೀರಿನಲ್ಲಿ ಮುಳುಗಿದ್ದವರಲ್ಲಿ 10 ಮಂದಿಯನ್ನು ರಕ್ಷಿಸಲಾಗಿದೆ. ಇನ್ನು ಬದುಕುಳಿದಿರುವವರ ಸಂಖ್ಯೆ ತುಂಬಾ ಕಡಿಮೆ ಎಂದು  ಸಿಬ್ಬಂದಿ ಹೇಳಿರುವುದಾಗಿ ಸುದ್ದಿಸಂಸ್ಥೆ ಹೇಳಿದೆ.  ಇನ್ನೊಂದು ಮೂಲಗಳ ಪ್ರಕಾರ ನದಿಯಲ್ಲಿ ಮುಳುಗಿದ್ದವರಲ್ಲಿ ಒಟ್ಟು 35 ಮಂದಿಯನ್ನು ರಕ್ಷಿಸಲಾಗಿದೆ.ಗಂಟೆಗೆ 130 ಕಿ.ಮೀ ವೇಗದಲ್ಲಿ ಬಂದು ಅಪ್ಪಳಿಸಿದ ಗಾಳಿಯು ನೌಕೆಯನ್ನು ಬೋರಲಾಗಿಸಿತು ಎಂದು ಹವಾಮಾನ ಇಲಾಖೆ ಹೇಳಿದೆ. ಸದ್ಯ  30 ಬೋಟುಗಳಲ್ಲಿ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.