ಗುರುವಾರ , ಮೇ 6, 2021
32 °C

ಚೀನಾ: 2ನೇ ಮಹಿಳಾ ಗಗನಯಾತ್ರಿ ಇಂದು ನಭಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೀನಾ: 2ನೇ ಮಹಿಳಾ ಗಗನಯಾತ್ರಿ ಇಂದು ನಭಕ್ಕೆ

ಬೀಜಿಂಗ್ (ಪಿಟಿಐ): ಚೀನಾ ಎರಡನೇ ಬಾರಿಗೆ ಮಹಿಳಾ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮುಂದಾಗಿದ್ದು, ಮಂಗಳವಾರ ವಾಂಗ್ ಯಾಪಿಂಗ್ (35) ಎಂಬ ಮಹಿಳೆ ಗಗನಯಾನ ಆರಂಭಿಸಲಿದ್ದಾರೆ.ಬಾಹ್ಯಾಕಾಶದಲ್ಲಿ ತನ್ನದೇ ಆದ ಪ್ರಯೋಗಾಲಯ ಸ್ಥಾಪಿಸುವ ಉದ್ದೇಶದಿಂದ ಚೀನಾ ಮಹಿಳೆಯನ್ನು ಅಲ್ಲಿಗೆ ಕಳುಹಿಸುತ್ತಿದೆ. ರಷ್ಯಾ ಹಾಗೂ ಅಮೆರಿಕ ನೇತೃತ್ವದಲ್ಲಿ ಈಗಾಗಲೇ ಅಂತ ರಿಕ್ಷದಲ್ಲಿ ಪ್ರಯೋಗಾಲಯವಿದ್ದು, ಇದಕ್ಕೆ ಪೈಪೋಟಿ ನೀಡಲು ಚೀನಾ ಮುಂದಾಗಿದೆ.`ದಿ ಶೆನ್‌ಜೌಃ-10'  ಎಂಬ ಮಾನವ ಸಹಿತ ಬಾಹ್ಯಾಕಾಶ ನೌಕೆ ಮಂಗಳವಾರ ಸ್ಥಳೀಯ ಕಾಲಮಾನ ಪ್ರಕಾರ ಸಂಜೆ 5.38ಕ್ಕೆ ಜೈಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆಗೊಳ್ಳಲಿದೆ' ಎಂದು ಚೀನಾ ಮಾನವ ಸಹಿತ ಬಾಹ್ಯಾಕಾಶ ಯೋಜನೆಯ ವಕ್ತಾರ ವೂ ಪಿಂಗ್ ತಿಳಿಸಿದ್ದಾರೆ.2012ರಲ್ಲಿ ಲಿವು ಯಾಂಗ್ ಎಂಬುವರನ್ನು ಮೊದಲಬಾರಿಗೆ ಬಾಹ್ಯಾಕಾಶ ಯಾನಕ್ಕೆ ಕಳುಹಿಸಲಾಗಿತ್ತು. ಪೂರ್ವ ಚೀನಾದ ಕೃಷಿ ಕುಟುಂಬವೊಂದರಲ್ಲಿ ಜನಿಸಿರುವ ಯಾಪಿಂಗ್ ಕಳೆದ ಬಾರಿ ಈ ಅವಕಾಶದಿಂದ ವಂಚಿತರಾಗಿದ್ದರು.ಚೀನಾ ಅಂತರಿಕ್ಷದಲ್ಲಿ ತನ್ನದೇ ಪ್ರಯೋಗಾಲಯ ಹೊಂದಲು ಮಾಡುತ್ತಿರುವ ಪ್ರಯತ್ನದಲ್ಲಿ ಇದು ಎರಡನೆಯದು. 2020ರ ವೇಳೆಗೆ ಇದರಲ್ಲಿ ಯಶಸ್ವಿಯಾಗುವ ನಿರೀಕ್ಷೆಯನ್ನು ಚೀನಾ ಹೊಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.