ಚೆಂಡು ಹೂ ಅಲ್ಪಾವಧಿ ಬೆಳೆ: ಮಂಜೇಗೌಡ
ಕಿಕ್ಕೇರಿ: ಚೆಂಡು ಹೂ ಅಲ್ಪಾವಧಿ ಬೆಳೆಯಾಗಿದ್ದು ಇದನ್ನು ಬೆಳೆಯವ ಮೂಲಕ ರೈತ ಆರ್ಥಿಕ ಅಭಿವೃದ್ದಿ ಹೊಂದಬಹುದು ಎಂದು ಎವಿಟಿ ಸಂಸ್ಥೆಯ ವಿಸ್ತರಣಾಧಿಕಾರಿ ಎಲೆಚಾಕನಹಳ್ಳಿ ಮಂಜೇಗೌಡ ತಿಳಿಸಿದರು.
ಶ್ರವಣನಹಳ್ಳಿಯಲ್ಲಿ ರೈತ ಕಮಲಾಕ್ಷ ತಮ್ಮ ಜಮೀನಿನಲ್ಲಿ ಬೆಳೆದಿರುವ ಚೆಂಡು ಹೂ ಬೆಳೆಯ ಪ್ರಾತ್ಯಕ್ಷಿಕೆಯನ್ನು ರೈತರಿಗೆ ನೀಡಿ ಮಾತನಾಡಿದರು. ಚೆಂಡು ಹೂವು ಮೂರು ತಿಂಗಳ ಬೆಳೆ, ಸಂಸ್ಥೆಯೇ ಬೀಜ, ಔಷಧಿ ನೀಡುವುದಲ್ಲದೆ ಹೂಗಳನ್ನು ಸಂಸ್ಥೆ ಖರೀದಿಸಲಿದೆ. ರೈತರಿಗೆ ಮಾರುಕಟ್ಟೆಯ ಸಮಸ್ಯೆ ಇಲ್ಲ ಇಂತಹ ಬಹುಆರ್ಥಿಕ ಬೇಸಾಯವನ್ನು ಅವಲಂಬಿಸಲು ರೈತ ಮುಂದಾಗಬೇಕು.
ಒಂದು ಗಿಡದಿಂದ ಕನಿಷ್ಟ 8ರಿಂದ 9ಬಾರಿ ಹೂ ಕಟಾವು ಮಾಡಬಹುದಾಗಿದೆ. ಎಲ್3 ತಳಿಯ ಚೆಂಡು ಹೂವು ಬೇಸಾಯಕ್ಕೆ ಸಂಸ್ಥೆ ನೆರವು ನೀಡುತ್ತಿದ್ದು ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ರೈತ ಕಮಲಾಕ್ಷ, ಲೋಕೇಶ, ರೂಪ, ತಾಯಮ್ಮ ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.