ಶನಿವಾರ, ಜನವರಿ 18, 2020
27 °C

ಚೆನ್ನೈ ಓಪನ್: ಸೋಮದೇವ್‌ಗೆ ವೈಲ್ಡ್‌ ಕಾರ್ಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಭಾರತದ ಅಗ್ರ ಕ್ರಮಾಂಕದ ಸಿಂಗಲ್ಸ್‌ ಆಟಗಾರ ಸೋಮದೇವ್‌ ದೇವವರ್ಮನ್ ಅವರು ಡಿಸೆಂಬರ್‌ 30ರಿಂದ ಜನವರಿ 5ರವರೆಗೆ ಇಲ್ಲಿ ನಡೆಯಲಿರುವ ಚೆನ್ನೈ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದಾರೆ.ಡಬ್ಲ್ಯುಟಿಎ ರ್‍ಯಾಂಕಿಂಗ್‌ನಲ್ಲಿ 90ನೇ ಸ್ಥಾನದಲ್ಲಿರುವ ಸೋಮದೇವ್‌ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅರ್ಹತಾ ಸುತ್ತಿನಲ್ಲಿ ಆಡಬೇಕಿತ್ತು. ಆದರೆ ಬೆನ್ನು ನೋವಿನ ಸಮಸ್ಯೆಯಿಂದಾಗಿ ಎಸ್ತೋನಿಯಾದ ಜರ್ಗನ್‌ ಜಾಪ್‌ ಅವರು ಹಿಂದೆ ಸರಿದ ಕಾರಣ ಸೋಮ್‌ಗೆ ಪ್ರಧಾನ ಹಂತದಲ್ಲಿ ಆಡಲು ನೇರ ಪ್ರವೇಶ ಲಭಿಸಿದೆ.ಈ ಟೂರ್ನಿಯಲ್ಲಿ ವಿಶ್ವದ ಎಂಟನೇ ರ್‍ಯಾಂಕ್‌ನ ಆಟಗಾರ ಸ್ವಿಟ್ಜರ್ಲೆಂಡ್‌ನ ಸ್ಟಾನಿಸ್‌ಲಾಸ್‌ ವಾರ್ವಿಂಕಾ, ವಿಶ್ವದ 15ನೇ ರ್‍ಯಾಂಕ್‌ನ ಆಟಗಾರ ಮಿಖಾಯಿಲ್‌ ಯೋಜ್ನಿ, ಫ್ಯಾಬಿಯೊ ಫಾಗ್ನಿನಿ ಹಾಗೂ ಹಾಲಿ ಚಾಂಪಿಯನ್‌ ಜಾಂಕೊ ತಪ್ಸಾರೆವಿಕ್‌ ಪಾಲ್ಗೊಳ್ಳಲಿದ್ದಾರೆ.

ಪ್ರತಿಕ್ರಿಯಿಸಿ (+)