ಚೆಸ್: ಅಗ್ರಸ್ಥಾನಕ್ಕೆ ಮರಳಿದ ಆನಂದ್

7

ಚೆಸ್: ಅಗ್ರಸ್ಥಾನಕ್ಕೆ ಮರಳಿದ ಆನಂದ್

Published:
Updated:

ವಿಕ್ ಆ್ಯನ್ ಜೀ, ಹಾಲೆಂಡ್ (ಪಿಟಿಐ): ವಿಶ್ವನಾಥನ್ ಆನಂದ್ ಅವರು ಇಲ್ಲಿ ನಡೆಯುತ್ತಿರುವ 73ನೇ ಟಾಟಾ ಸ್ಟೀಲ್ ಚೆಸ್ ಟೂರ್ನಿಯ ‘ಎ’ ಗುಂಪಿನ ಪಂದ್ಯದ ಎಂಟನೇ ಸುತ್ತಿನ ಪಂದ್ಯದಲ್ಲಿ ಡ್ರಾ ಪಡೆಯುವುದರ ಮೂಲಕ ಮತ್ತೆ ಜಂಟಿಯಾಗಿ ಅಗ್ರಸ್ಥಾನಕ್ಕೆ ಪಡೆದುಕೊಂಡಿದ್ದಾರೆ.ಸೋಮವಾರ ನಡೆದ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಭಾರತದ ಆನಂದ್ ಅರ್ಮೇನಿಯಾದ ಲೆವೊನ್ ಅರೊನಿಯಾನ್ ವಿರುದ್ಧ ಡ್ರಾ ಪಡೆದರು. ಇದರೊಂದಿಗೆ ಆನಂದ್ ಒಟ್ಟು 5.5 ಪಾಯಿಂಟ್ ಪಡೆದರು. ಇದರೊಂದಿಗೆ ಹಿಕರು ನಗಮುರ ಅವರೊಂದಿಗೆ ಜಂಟಿಯಾಗಿ ಮತ್ತೆ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ.ಏಳನೇ ಸುತ್ತಿನ ಪಂದ್ಯದಲ್ಲಿ ಆನಂದ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಜೊತೆ ಡ್ರಾ ಮಾಡಿಕೊಂಡಿದ್ದರು.ಇದರಿಂದ ಒಟ್ಟು ಐದು ಪಾಯಿಂಟ್ ಪಡೆದು ಎರಡನೇ ಸ್ಥಾನಕ್ಕೆ ಕುಸಿತ ಕಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry