ಚೆಸ್: ಇವಾಂಚುಕ್- ಆನಂದ್ ಪಂದ್ಯ ಡ್ರಾ

7

ಚೆಸ್: ಇವಾಂಚುಕ್- ಆನಂದ್ ಪಂದ್ಯ ಡ್ರಾ

Published:
Updated:

ಬಿಲ್ಬಾವೊ, ಸ್ಪೇನ್ (ಪಿಟಿಐ): ಭಾರತದ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಫೈನಲ್ ಮಾಸ್ಟರ್ಸ್ ಚೆಸ್ ಟೂರ್ನಿಯ ಎಂಟನೇ ಸುತ್ತಿನ ಪಂದ್ಯದಲ್ಲಿ ಉಕ್ರೇನ್‌ನ ವಾಸಿಲಿ ಇವಾಂಚುಕ್ ಜೊತೆ ಡ್ರಾ ಮಾಡಿಕೊಂಡರು.ಟೂರ್ನಿಯಲ್ಲಿ ಇನ್ನು ಎರಡು ಸುತ್ತಿನ ಪಂದ್ಯಗಳು ಬಾಕಿಯುಳಿದಿವೆ. ಮೊದಲ ಹಂತದ ಬಳಿಕ ಅಗ್ರಸ್ಥಾನದಲ್ಲಿದ್ದ ಉಕ್ರೇನ್‌ನ ವಾಸಿಲಿ ಇವಾಂಚುಕ್ ತಮ್ಮ ಉತ್ತಮ ಪ್ರದರ್ಶನವನ್ನು ಇಲ್ಲೂ ಮುಂದುವರಿಸಿದ್ದಾರೆ. ಆರನೇ ಸುತ್ತಿನ ಪಂದ್ಯದಲ್ಲಿ ಅವರು ನಕಮುರ ವಿರುದ್ಧ ಜಯ ಸಾಧಿಸಿ ಪಾಯಿಂಟ್‌ಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದರು.ಈ ಟೂರ್ನಿಯಲ್ಲಿ ಆನಂದ್ ಪಡೆದ ನಾಲ್ಕನೇ ಡ್ರಾ ಇದಾಗಿದೆ. ಇಲ್ಲಿ ಆನಂದ್ ಎದುರು ಎರಡು ಸುತ್ತಿನ ಪಂದ್ಯಗಳನ್ನಾಡಿರುವ ಇವಾಂಚುಕ್  ಎರಡರಲ್ಲಿಯೂ ಗೆಲುವು ಪಡೆದಿದ್ದಾರೆ.ಎಂಟನೇ ಸುತ್ತಿನ ಇತರ ಪಂದ್ಯಗಳಲ್ಲಿ ಅಮೆರಿಕದ ಹಿಕರು ನಕಮುರು ಅವರು ಲೆವೊನ್ ಅರೋನಿಯನ್ ಅವರನ್ನು ಮಣಿಸಿದರು. ಮ್ಯಾಗ್ನೂಸ್ ಕಾರ್ಲಸನ್ ಆತಿಥೇಯ ಸ್ಪೇನ್‌ನ ಫ್ರಾನ್ಸಿಸ್ಕೊ ವಲ್ಲೆಜೊ ಪೊನ್ಸ್  ವಿರುದ್ಧ ಗೆಲುವು ಪಡೆದರು. ಆರನೇ ಸುತ್ತಿನ ಅಂತ್ಯಕ್ಕೆ 9 ಪಾಯಿಂಟ್‌ಗಳಿಂದ ನಾಲ್ಕನೇ ಸ್ಥಾನಕ್ಕೆ ಭಾರತದ ಆಟಗಾರ ಕುಸಿತ ಕಂಡಿದ್ದರು. ಈಗ ಮತ್ತೆ ತಮ್ಮ ಪ್ರದರ್ಶನವನ್ನು ಉತ್ತಮ ಪಡಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry