ಮಂಗಳವಾರ, ಮೇ 11, 2021
27 °C

ಚೆಸ್: ಜಂಟಿ ಅಗ್ರಸ್ಥಾನದಲ್ಲಿ ವಿದಿತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ನಾ, ಬಲ್ಗೇರಿಯ (ಪಿಟಿಐ): ಗ್ರ್ಯಾಂಡ್ ಮಾಸ್ಟರ್ ವಿದಿತ್ ಗುಜರಾತಿ ಇಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಯುರೋಪ್ ಗೋಲ್ಡನ್ ಸ್ಯಾಂಡ್ಸ್ ಚೆಸ್ ಟೂರ್ನಿಯಲ್ಲಿ ಮೂರನೇ ಸುತ್ತಿನ ಆಟದ ಅಂತ್ಯಕ್ಕೆ ಜಂಟಿ ಅಗ್ರಸ್ಥಾನಲ್ಲಿದ್ದಾರೆ ಮುನ್ನಡೆದಿದ್ದಾರೆ.ಗುರುವಾರ ನಡೆದ ಪಂದ್ಯದಲ್ಲಿ ವಿದಿತ್ ಅಂತರರಾಷ್ಟ್ರೀಯ ಮಾಸ್ಟರ್ ಸರ್ಬಿಯಾದ ಜೊರಾನ್ ಅರ್ರೊವಿಕ್ ಎದುರು ಗೆಲುವು ಸಾಧಿಸಿದರು. ವಿದಿತ್ ಬಳಿ ಮೂರು ಪಾಯಿಂಟ್‌ಗಳಿವೆ. ಕಿರಿಯ ಗ್ರ್ಯಾಂಡ್‌ಮಾಸ್ಟರ್ ಸಹಜ್ ಗ್ರೋವರ್ ಕೂಡ ಮೂರು ಪಾಯಿಂಟ್ ಹೊಂದಿದ್ದಾರೆ. ಅವರು ಫ್ರಾನ್ಸ್‌ನ ಮ್ಯಾನುಯೆಲ್ ವೇಲ್ಸ್ ಎದುರು ಗೆದ್ದರು. ಎಂ.ಆರ್.ವೆಂಕಟೇಶ್ ಹಾಗೂ ಎಂ.ಶ್ಯಾಮ್‌ಸುಂದರ್ ಕೂಡ ಮೂರು ಪಾಯಿಂಟ್ ಹೊಂದಿದ್ದು ಜಂಟಿ ಅಗ್ರಸ್ಥಾನದಲ್ಲಿದ್ದಾರೆ.ಆದರೆ ಹಿಂದಿನ ಪಂದ್ಯಗಳಲ್ಲಿ ಅಚ್ಚರಿ ಗೆಲುವು ಸಾಧಿಸಿದ್ದ ಶಾರ್ದೂಲ್ ಗಾಗರೆ ಹಾಗೂ ಅನುರಾಗ್ ಮಹಾಮಲ್ ಮೂರನೇ ಸುತ್ತಿನ ಪಂದ್ಯಗಳಲ್ಲಿ ಆಘಾತ ಅನುಭವಿಸಿದರು. ದೀಪದಾಸ್ ಸೇನಾಗುಪ್ತಾ, ದೇವಾಶಿಸ್ ದಾಸ್, ಇಶಾ ಕಾರ್ವಾಡೆ, ಕಿರಣ್ ಮನೀಷ್ ಮೊಹಾಂತಿ, ಸಾಗರ್ ಷಾ ಗೆಲುವು ಸಾಧಿಸಿ ಪೂರ್ಣ ಪಾಯಿಂಟ್ ಗಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.