ಶನಿವಾರ ಜಿ.ಎ. ಚೈತನ್ಯ ಭರತನಾಟ್ಯ ರಂಗಪ್ರವೇಶ, ಅತಿಥಿಗಳು: ಗುರು ರಾಧಾ ಶ್ರೀಧರ್, ಡಾ. ಮಹೇಶ ಜೋಶಿ, ಡಾ. ಎಂ. ಸೂರ್ಯ ಪ್ರಸಾದ್, ಬಿ.ವಿ. ದ್ವಾರಕಾನಾಥ್. ಎಸ್. ಸುಧಾಶ್ರೀ ಮತ್ತು ಜಿ.ಎಸ್. ಆನಂದ ಕೃಷ್ಣ ಅವರ ಪುತ್ರಿ ಚೈತನ್ಯ 7ರ ಎಳವೆಯಲ್ಲೇ ದಿವಂಗತ ಪದ್ಮಿನಿ ರಾವ್ ಅವರ ಬಳಿ ನೃತ್ಯಾಭ್ಯಾಸ ಆರಂಭಿಸಿದರು. ಗುರು ಸುಮಾ ನಾಗೇಶ್ ಬಳಿ ಅಭ್ಯಾಸ ಮುಂದುವರಿಸಿ ಪ್ರಸ್ತುತ ಹಿರಿಯ ಕಲಾವಿದೆ, ವೆಂಕಟೇಶ್ ನಾಟ್ಯ ಮಂದಿರದ ಸಂಸ್ಥಾಪಕಿ ರಾಧಾ ಶ್ರೀಧರ್ ಅವರ ಬಳಿ ಮತ್ತಷ್ಟು ಪರಿಣತಿ ಪಡೆಯುತ್ತಿದ್ದಾರೆ.

ಟಿ.ವಿ. ವಾಹಿನಿ, ದೂರದರ್ಶನದಲ್ಲಿ ಕಾರ್ಯಕ್ರಮ ನೀಡಿರುವ ಚೈತನ್ಯ, ಬೆಂಗಳೂರು ದೂರದರ್ಶನ ಕೇಂದ್ರದ ಬಿ- ಗ್ರೇಡ್ ಕಲಾವಿದೆ. ಬೆಂಗಳೂರು ಹಬ್ಬ, ರಾಷ್ಟ್ರೀಯ ಸಂಸ್ಕೃತ ಸಮಾವೇಶ, 77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮತ್ತಿತರ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನದಲ್ಲಿ ಕೊನೆಯ ವರ್ಷದ ಎಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದಾರೆ.

ರಂಗಪ್ರವೇಶವನ್ನು ಅಜ್ಜ-ಅಜ್ಜಿಯರಾದ ದಿವಂಗತ ಪುಟ್ಟಲಕ್ಷ್ಮಮ್ಮ ಮತ್ತು ದಿವಂಗತ ಆರ್. ಸುಬ್ಬರಾವ್ ಹಾಗೂ ದಿವಂಗತ ವಿಜಯಲಕ್ಷ್ಮಿ ಮತ್ತು ಎಂ.ಆರ್. ಶ್ರೀನಿವಾಸ್ ರಾವ್ ಅವರಿಗೆ ಅರ್ಪಿಸುತ್ತಿದ್ದಾರೆ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 6.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.