ಸೋಮವಾರ, ಜೂನ್ 14, 2021
26 °C

ಚೊಚ್ಚಲ ಮಹಿಳಾ ವಿಶ್ವ ಕಬಡ್ಡಿ ಚಾಂಪಿಯನ್‌ಷಿಪ್‌: ಭಾರತ ತಂಡದ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಟ್ನಾ (ಐಎಎನ್‌ಎಸ್): ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡದವರು ಇಲ್ಲಿ ಆರಂಭವಾದ ಚೊಚ್ಚಲ ಮಹಿಳಾ ವಿಶ್ವ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು.



ಬಿಹಾರ ರಾಜ್ಯ ಸರ್ಕಾರ ಆಯೋಜಿಸಿರುವ ಈ ಟೂರ್ನಿಯಲ್ಲಿ 16 ದೇಶಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯರು ಗೆಲುವು ಪಡೆದು ಸ್ಥಳೀಯ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು. ಈ ತಂಡ 34-18 ಪಾಯಿಂಟ್‌ಗಳಿಂದ ಕೊರಿಯಾ ತಂಡವನ್ನು ಮಣಿಸಿತು.



ಭಾರತ ತಂಡದ ಸಾರಥ್ಯ ವಹಿಸಿರುವ ಕರ್ನಾಟಕದ ಆಟಗಾರ್ತಿ ರೈಲ್ವೆಸ್‌ನ ಮಮತಾ ಪೂಜಾರಿ, ದೀಪಿಕಾ ಜೋಸೆಫ್ ಹಾಗೂ ಪ್ರಿಯಾಂಕ ನೇಗಿ ರೈಡಿಂಗ್ ಹಾಗೂ ಡಿಫೆನ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದರು.

 ವಿರಾಮದ ವೇಳೆಗೆ 24 ಪಾಯಿಂಟ್ ಕಲೆ ಹಾಕಿದ್ದ ಮಮತಾ ಪಡೆ ನಂತರವೂ ಚುರುಕಿನ ಆಟವಾಡಿತು. ಈ ವೇಳೆಗೆ ಕೊರಿಯ ಕೇವಲ ಐದು ಪಾಯಿಂಟ್ ಮಾತ್ರ ಹೊಂದಿತ್ತು.



ವಿಜಯಿ ತಂಡದ ಕೃಷಾ ಮತ್ತು ಎಂ. ಅಭಿಲಾಷಾ ತಲಾ ಐದು ಪಾಯಿಂಟ್ ಗಳಿಸಿ ಆರಂಭದಲ್ಲಿ ಮುನ್ನಡೆ ತಂದುಕೊಟ್ಟರು.  ನಾಲ್ಕು ದಿನ ನಡೆಯುವ ಈ ಚಾಂಪಿಯನ್   ಷಿಪ್‌ಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಚಾಲನೆ ನೀಡಿದರು.



`ಗ್ರಾಮೀಣ ಭಾಗದಲ್ಲಿ ಕಬಡ್ಡಿ ಅತ್ಯಂತ ಜನಪ್ರಿಯ ಕ್ರೀಡೆ. ಇದನ್ನು ಇನ್ನಷ್ಟು ಪ್ರೋತ್ಸಾಹಿಸುವ ಕೆಲಸವಾಗಬೇಕು. ಅದಕ್ಕಾಗಿ ಕೇಂದ್ರ ಸರ್ಕಾರ ಮುಂದಾಗಬೇಕು~ ಎಂದು ನಿತೀಶ್ ಅವರು ತಮ್ಮ ಭಾಷಣದಲ್ಲಿ ತಿಳಿಸಿದರು.



ಭಾರತ ಅಮೆಚೂರ್ ಕಬಡ್ಡಿ ಫೆಡರೇಷನ್ (ಎಕೆಎಫ್‌ಐ) ಅಧ್ಯಕ್ಷ ಜನಾರ್ಧನ ಸಿಂಗ್ ಗೆಹ್ಲೋಟ್ ಉಪಸ್ಥಿತರಿದ್ದರು.

ಆತಿಥೇಯ ಭಾರತ, ಕೊರಿಯಾ, ಅಮೆರಿಕ, ನೇಪಾಳ, ಮೆಕ್ಸಿಕೊ ಇರಾನ್, ಇಟಲಿ, ಕೆನಡಾ, ತೈಪೆಯಿ, ಹಾಗೂ ಒಮಾನ್ ತಂಡಗಳು ಪ್ರಶಸ್ತಿ ಜಯಿಸುವ ನೆಚ್ಚಿನ ತಂಡಗಳು ಎನಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.