ಚೊಚ್ಚಲ ಹಾಕಿ ಇಂಡಿಯಾ ಲೀಗ್ ಎರಡು ವಾರ ಮುಂದಕ್ಕೆ
ನವದೆಹಲಿ (ಪಿಟಿಐ): ಚೊಚ್ಚಲ ಹಾಕಿ ಇಂಡಿಯಾ ಲೀಗ್ನ (ಎಚ್ಐಎಲ್) ಆರಂಭಕ್ಕೆ ಮುನ್ನವೇ ಹಿನ್ನಡೆ ಉಂಟಾಗಿದೆ. ಲೀಗ್ನ ಆರಂಭವನ್ನು ನಿಗದಿತ ವೇಳಾಪಟ್ಟಿಗಿಂತ ಎರಡು ವಾರ ಮುಂದೂಡಲಾಗಿದೆ.
ಹೊಸ ವೇಳಾಪಟ್ಟಿಯಂತೆ ಚೊಚ್ಚಲ ಲೀಗ್ ಮುಂದಿನ ಜನವರಿ 17 ಕ್ಕೆ ಆರಂಭವಾಗಿ ಫೆಬ್ರುವರಿ 17 ರಂದು ಕೊನೆಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ಮೊದಲು ನಿರ್ಧರಿಸಿದಂತೆ ಡಿಸೆಂಬರ್ 1 ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಇದೀಗ ಹರಾಜು ಪ್ರಕ್ರಿಯೆಯನ್ನು ಡಿ. 16 ರಂದು ನಡೆಸಲು ನಿರ್ಧರಿಸಲಾಗಿದೆ.
`ಡಿ.1ರ ವೇಳೆಗೆ ಕೋಚ್ಗಳು ಲಭ್ಯರಿರುವುದಿಲ್ಲ. ಈ ಕಾರಣ ಹರಾಜನ್ನು ಮುಂದೂಡುವಂತೆ ಎಲ್ಲ ಆರು ಫ್ರಾಂಚೈಸಿಗಳು ತಿಳಿಸಿದ್ದವು' ಎಂದು ಎಚ್ಐಎಲ್ ಮುಖ್ಯಸ್ಥ ನರೀಂದರ್ ಬಾತ್ರಾ ಹೇಳಿದ್ದಾರೆ. `ಎಲ್ಲ ಫ್ರಾಂಚೈಸಿಗಳ ಕೋರಿಕೆಯಂತೆ ಲೀಗ್ನ್ನು ಎರಡು ವಾರಗಳ ಮಟ್ಟಿಗೆ ಮುಂದೂಡಲಾಗಿದೆ' ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.